ಗದಗ: ಸಕರ್ಾರಿ ಪಾಲಿಟೆಕ್ನಿಕ್ ಸಂಸ್ಥೆಗಳ ಪ್ರವೇಶದ ಶುಲ್ಕಗಳು ಅತೀ ಕಡಿಮೆ ಇದ್ದು, ಬಡ ವಿದ್ಯಾಥರ್ಿಗಳಿಗೆ ತಾಂತ್ರಿಕ ಶಿಕ್ಷಣ ಪಡೆದುಕೊಳ್ಳಲು ಬಹಳ ಸಹಕಾರಿಯಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಭರಮಪ್ಪ ಬಡಪ್ಳವರ ಹೇಳಿದರು.
ಸಕರ್ಾರಿ ಪಾಲಿಟೆಕ್ನಿಕ್, ಗದಗ ಸಂಸ್ಥೆಯಲ್ಲಿ ದಿ. 19ರಂದು 2018-19ನೇ ಸಾಲಿನ ವಿದ್ಯಾಥರ್ಿ ಸಂಘ, ಕ್ರೀಡಾ ಸಂಘ, ಯುವ ರೆಡ್ಕ್ರಾಸ್ ಘಟಕ, ಎನ್ಎಸ್ಎಸ್ ಕಾರ್ಯ ಚಟುವಟಿಕೆ ಉದ್ಘಾಟನಾ ಸಮಾರಂಭ ಹಾಗೂ ಇಂಜಿನೀಯರ್ಸ್ ಡೇ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿಶ್ವೇಶ್ವರಯ್ಯರವರ ಶಿಸ್ತುಪಾಲನೆ, ಸಮಯಪ್ರಜ್ಞೆ, ಸಾಮಾಜಿಕ ಕಳಕಳಿಯನ್ನು ವಿದ್ಯಾಥರ್ಿಗಳು ಮೈಗೂಡಿಸಿಕೊಂಡು ಉತ್ತಮ ಇಂಜಿನೀಯರರಾಗಲು ಕರೆ ನೀಡಿದರು ಹಾಗೂ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಾಕಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಬಡಪ್ಳವ ವಿವರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗದಗ ನಗರದ ಖ್ಯಾತ ವೈದ್ಯರು ಹಾಗೂ ಗದಗ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಗೌರವ ಕಾರ್ಯದಶರ್ಿಗಳಾದ ಡಾ. ಆರ್.ಎನ್. ಗೋಡಬೋಲೆ ಇವರು ಆಗಮಿಸಿದ್ದರು. ವಿದ್ಯಾಥರ್ಿಗಳಿಗೆ ಪ್ರಥಮ ಚಿಕಿತ್ಸೆ ಹಾಗೂ ರಕ್ತದಾನದ ಅರಿವು ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಜಿ.ಎಸ್. ಪವಾಡದ, ವಿದ್ಯಾಥರ್ಿ ಕ್ಷೇಮಾಭಿವೃದ್ಧಿ ಅಧಿಕಾರಿ ಸಿ.ಆರ್. ಕಂದಗಲ್ಲ, ವಿಭಾಗಾಧಿಕಾರಿಗಳಾದ ಮಹಾಂತೇಶ ಗುಡ್ಡಿನ, ಶಬೀನಾ ಮಜ್ಜಗಿಯವರ, ವೀರಣ್ಣ ಹಾದಿಮನಿ, ಪ್ರಶಾಂತಗೌಡ ಎಂ., ಎನ್ಎಸ್ಎಸ್ ಅಧಿಕಾರಿ ವೀರಯ್ಯಾ ಹಿರೇಮಠ, ರೆಡ್ಕ್ರಾಸ ಕಾರ್ಯಕ್ರಮ ಅಧಿಕಾರಿ ವಿಠ್ಠಲಕುಮಾರ ಕೆ. ವಗ್ಗಾ, ಕ್ರೀಡಾ ಸಲಹೆಗಾರರಾದ ಸಂಗಪ್ಪ ಬಣ್ಣನ್ನವರ, ಕಛೇರಿ ಅಧೀಕ್ಷಕರಾದ ಎಸ್.ಎಮ್. ತಳವಗೇರಿ, ವಿದ್ಯಾಥರ್ಿ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸಂಸ್ಥೆಯ ಸಕಲ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.