ಬೆಳಗಾವಿ: 19 : ಮಕ್ಕಳು ನಮ್ಮ ದೇಶದ ಆಸ್ತಿ ಹಾಗಾಗಿ ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಕೇವಲ ಅನುಕಂಪ ತೋರಿಸಿದರೆ ಸಾಲದು. ಅವರಿಗೆ ಇತರೆ ಮಕ್ಕಳಂತೆ ಪ್ರೀತಿ ತೋರಿಸಿ ಎಂದು ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ಎಫ್.ಬಿ. ನದಾಫ್ ಅವರು ಹೇಳಿದರು.
ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಚೈಲ್ಡ್ ಲೈನ್ ವತಿಯಿಂದ ಸೋಮವಾರ ಸಂಜೆ ಕಿವುಡ ಮತ್ತು ಮೂಕ ಮಕ್ಕಳ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಚೈಲ್ಡ್ಲೈನ್ ಜತೆ ಸ್ನೇಹ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ಲೂರ್ದ ಮಾತನಾಡಿ, ಈ ಮಕ್ಕಳು ಇತರೆ ಮಕ್ಕಳಂತೆ ಕಡಿಮೆ ಏನೂ ಇಲ್ಲ. ಇತರರಂತೆ ಅವರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇಂತಹ ಮಕ್ಕಳಿಗೆ ನಾವು ಹೆಚ್ಚೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.
ಮಕ್ಕಳಿಗಾಗಿ ವಿವಿಧ ಸ್ಪಧರ್ೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಎಫ್.ಬಿ. ನದಾಫ್, ಸಿಸ್ಟರ್ ಲೂರ್ದ ಅವರು ಬಹುಮಾನ ವಿತರಿಸಿದರು.
ಶಾಲೆಯ ಅಧ್ಯಕ್ಷ ಪಿ.ಬಿ. ಬನಶಂಕರಿ ಅಧ್ಯಕ್ಷತೆ ವಹಿಸಿದ್ದರು. ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಯೋಜಕ ಮಲ್ಲಪ್ಪ ಕುಂದರಗಿ, ಕೈಗಾರಿಕೆ ಹಾಗೂ ಹಿರಿಯ ನಾಗರಿಕ ಸಹಾಯವಾಣಿಯ ಜಂಟಿ ನಿದರ್ೇಶಕರಾದ ಎಂ.ಎಸ್. ಮುದಕವಿ, ಗಂಗೂಬಾಯಿ ಬೋಸಲೆ ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ ಬಾಪಟ್, ಶಾಲಾ ಶಿಕ್ಷಕರು, ಮಕ್ಕಳ ಸಹಾಯವಾಣಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.