ಹನುಮಂತ ದೇವರ ಕಾರ್ತಿಕೋತ್ಸವ
ಬ್ಯಾಡಗಿ 24: ತಾಲೂಕಿನ ಹಳೆಗುಂಗರಗೊಪ್ಪ ಗ್ರಾಮದಲ್ಲಿ ಹನುಮಂತ ದೇವರ ಕಾರ್ತಿಕೋತ್ಸವವು ಡಿ.28 ರಂದು ರಾತ್ರಿ 8 ಘಂಟೆಗೆ ಸಡಗರ ಸಂಭ್ರಮದಿಂದ ಜರುಗಲಿದೆ. ನಂತರ ಅನ್ನಸಂತರೆ್ಣ ಕಾರ್ಯಕ್ರಮವಿದ್ದು, ಡಿ. 29 ರಂದು ಭೂತನ ಸೇವೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹನುಮಂತ ದೇವರ ಕಾರ್ತಿಕೋತ್ಸವದ ನಿಮಿತ್ಯವಾಗಿ ಶಿಗ್ಗಾಂವ ತಾಲೂಕಿನ ಕಬನೂರ ಗ್ರಾಮದ ಶ್ರೀ ಅಲ್ಲಿ ಕೇರಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಕ್ರೀಡಾ ಯುವ ಸಂಘ ಹಾಗೂ ಕನ್ನಡ ಹಾಗೂ ಸಾಂಸ್ಕೃತಿಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಾನಪದ ನೃತ್ಯ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಬಸವರಾಜ ಶಿವಣ್ಣನವರ ಉಧ್ಘಾಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ರಮೇಶ ಸುತ್ತಕೋಟಿ, ಕರಬಸಪ್ಪ ಶಿರಗಂಬಿ, ಎಸ್.ಆರ್.ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಶಂಭು ಪಾಟೀಲ, ನಾಗರಾಜ್ ಆನ್ವೇರಿ, ಭರಮಪ್ಪ ಗುತ್ತಿ, ದೀಲಿಪಕುಮಾರ ಮೆಗಳಮನಿ, ನಾರಾಯಣಪ್ಪ ದಾಸರ, ಮೀನಾಕ್ಷಿ ತಳವಾರ, ಆರ್.ನಾಗರಾಜ ಹಾಗೂ ಇತರರು ಆಗಮಿಸಲಿದ್ದಾರೆಂದು ತಿಳಿಸಿದ್ದಾರೆ.