ಇಂಗ್ಲೆಂಡ್
ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಧೋನಿ ಅಂಪೈರ್ ಗಳಿಂದ ಚೆಂಡನ್ನು ತೆಗೆದುಕೊಂಡಿದ್ದರು. ಈ
ಘಟನೆಯನ್ನು ತಪ್ಪಾಗಿ ಭಾವಿಸಿದ ಕೆಲ ಮಾಧ್ಯಮಗಳು ಧೋನಿ ಶೀಘ್ರ ನಿವೃತ್ತಿ ಘೋಷಣೆ ಮಾಡಲು ನಿರ್ಧರಿಸಿದ್ದು,
ಇದೇ ಕಾರಣಕ್ಕಾಗಿ ನೆನಪಿನಾರ್ಥವಾಗಿ ಅಂಪೈರ್ ಗಳಿಂದ ಚೆಂಡನ್ನು ತೆಗೆದುಕೊಂಡಿದ್ದಾರೆ ಎಂದು ಸುದ್ದಿ
ಪ್ರಕಟಿಸಲಾಗಿತ್ತು. ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇನ್ನೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇನ್ನು
ಇದೇ ವಿಚಾರವಾಗಿ ಇಂದು ಮಾತನಾಡಿರುವ ಕೋಟ್ ರವಿಶಾಸ್ತ್ಪಿ ಈ ಎಲ್ಲ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ಸದ್ಯದ ಪರಿಸ್ಛಿತಿಯಲ್ಲಿ ಎಂಎಸ್ ಧೋನಿ ಕ್ರಿಕೆಟ್ ಗೆ ನಿವೃತ್ತಿ ಹೇಳುವ ಮಾತೇ ಇಲ್ಲ. ಮಾಧ್ಯಮಗಳ ವರದಿಗಳು
ಕೇವಲ ಊಹಾಪೋಹ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ.
'ಧೋನಿ
ಎಲ್ಲಿಗೂ ಹೋಗೋದಿಲ್ಲ. ನಿವೃತ್ತಿ ವಿಚಾರದ ಮಾತೇ ಇಲ್ಲ.. ತಂಡಕ್ಕೆ ಧೋನಿ ಅನುಭವದ ಅಗತ್ಯತೆ ಇದ್ದು,
ಈ ಹಿಂದಿನಂತೆಯೇ ಮುಂದೆಯೂ ಕೂಡ ಮುಂದುವರೆಯುತ್ತದೆ. ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದ ವೇಳೆ
ಧೋನಿ ಅಂಪೈರ್ ಗಳಿಂದ ಚೆಂಡು ತೆಗೆದುಕೊಂಡಿದ್ದು ನೆನಪಿನಾರ್ಥವಾಗಿ ಅಲ್ಲ. ಬದಲಿಗೆ 45 ಓವರ್ ಗಳ ಬಳಿಕ
ಚೆಂಡಿನ ಗುಣಮಟ್ಟವನ್ನು ಸಹಾಯಕ ಕೋಚ್ ಭರತ್ ಅರುಣ್ ಅವರಿಗೆ ತೋರಿಸಬೇಕಿತ್ತು. ಈ ಕಾರಣಕ್ಕಾಗಿ ಮಾತ್ರ
ಧೋನಿ ಚೆಂಡನ್ನು ತೆಗೆದುಕೊಂಡಿದ್ದರು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.