ಲೋಕಸಭಾ ಚುನಾವಣೆ: ಮತಹಕ್ಕು ಚಲಾಯಿಸಿದ ಶಾಸಕ ಶಂಕರ್, ದಂಪತಿ

ಲೋಕದರ್ಶನ ವರದಿ

ರಾಣೇಬೆನ್ನೂರ ಏ.23- ಮಂಗಳವಾರ 23 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್.ಶಂಕರ್ ಅವರು ತಮ್ಮ ಧರ್ಮಪತ್ನಿ ಧನಲಕ್ಷ್ಮೀ ಅವರೊಂದಿಗೆ ಕುಟುಂಬ ಸಮೇತರಾಗಿ ಧಾವಿಸಿ ಇಲ್ಲಿನ ಬಿರೇಶ್ವರ ನಗರದ 35 ನೇ ವಾಡರ್್ಗೆ ಸಂಬಂಧಿಸಿದಂತೆ ಸಕರ್ಾರಿ ಶಾಲಾ ನಂ.4 ರಲ್ಲಿ ನಿಮರ್ಿಸಲಾದ 135ನೇ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಮತದಾನ ಮಾಡುವುದರ ಮೂಲಕ ಹಕ್ಕನ್ನು ಚಲಾಯಿಸಿ ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ಕೆಪಿಜೆಪಿ ಮುಖಂಡರಾದ ಜಿಲ್ಲಾಧ್ಯಕ್ಷ ರಾಜು ಅಡಿವೆಪ್ಪನವರ, ಆರ್.ಶಂಕರ ಅಭಿಮಾನಿ ಬಳಗದ ಅಧ್ಯಕ್ಷ ಜಗದೀಶ ಎಲಿಗಾರ, ರತ್ನಾಕರ ಕುಂದಾಪುರ, ನಾಗರಾಜ ಪೋಲಿಸಗೌಡ್ರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.