ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಚುನಾವಣೆಗೆ ಮಂಗಳವಾರ ಮತದಾನ ನಡೆದಿದ್ದು, ಪ್ರತಿಶತ 70.63 ರಷ್ಟು ಮತದಾನವಾಗಿದೆ.
ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಗೆ ಬಾಗಲಕೋಟೆ ಜಿಲ್ಲೆಯ 7 ಹಾಗೂ ಗದಗ ಜಿಲ್ಲೆಯ ನರಗುಂದ ಕ್ಷೇತ್ರ ಒಳಗೊಂಡಿದಂತೆ ಒಟ್ಟು 8 ವಿಧಾನಸಭಾ ಮತಕ್ಷೇತ್ರಗಳು ಇದ್ದು, ಒಟ್ಟು ಒಟ್ಟು 1700547 ಮತದಾರರ ಪೈಕಿ 1201022 ಮತದಾರರು ಮತ ಚಲಾಯಿಸುವ ಮೂಲಕ ಪ್ರತಿಶತ 70.63 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ.72.88 ಪುರುಷರು, ಶೇ. 68.38 ರಷ್ಟು ಮಹಿಳಾ ಮತದಾರರು ಹಾಗೂ ಶೇ. 7.69 ರಷ್ಟು ಇತರೆ ಮತದಾರರು ಮತದಾನ ಮಾಡಿದ್ದಾರೆ.
ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 196218 ಮತದಾರರ ಪೈಕಿ 142818 ಮತದಾರರು ಮತ ಚಾಲಾಯಿಸಿ ಶೇ.72.79 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ.75.83 ರಷ್ಟು ಪುರುಷ ಮತದಾರರು, ಶೇ. 69.81 ರಷ್ಟು ಮಹಿಳಾ ಮತದಾರರು ಮತದಾನ ಮಾಡಿದ್ದಾರೆ. ತೇರದಾಳ ಮತಕ್ಷೇತ್ರದಲ್ಲಿ ಒಟ್ಟು 222545 ಮತದಾರರ ಪೈಕಿ 166697 ಮತದಾರರು ಮತ ಚಲಾಯಿಸಿದ್ದು, ಶೇ. 74.90 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ. 77.24 ರಷ್ಟು ಪುರುಷರು, ಶೇ. 72.57 ರಷ್ಟು ಮಹಿಳಾ ಮತದಾರರು ಮತದಾರರು ಮತದಾನ ಮಾಡಿದ್ದಾರೆ.
ಜಮಖಂಡಿ ಮತಕ್ಷೇತ್ರದಲ್ಲಿ ಒಟ್ಟು 207221 ಪೈಕಿ 146232 ಜನ ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ. 70.57 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ.73.56 ರಷ್ಟು ಪುರುಷರು, ಶೇ. 67.56 ರಷ್ಟು ಮಹಿಳಾ ಹಾಗೂ ಶೇ. 28.57 ರಷ್ಟು ಇತರೆ ಮತದಾರರು ಮತ ಚಲಾಯಿಸಿದ್ದಾರೆ. ಬೀಳಗಿ ಮತಕ್ಷೇತ್ರದಲ್ಲಿ ಒಟ್ಟು 219823 ಪೈಕಿ 160759 ಜನ ಮತದಾರರು ಮತ ಚಲಾಯಿಸಿದ್ದು, ಶೇ. 73.13 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ. 75.69 ರಷ್ಟು ಪುರುಷ, ಶೇ. 70.62 ರಷ್ಟು ಮಹಿಳಾ ಹಾಗೂ ಶೇ. 3.85 ರಷ್ಟು ಇತರೆ ಮತದಾನ ಮಾಡಿದ್ದಾರೆ.
ಬಾದಾಮಿ ಮತಕ್ಷೇತ್ರದಲ್ಲಿ ಒಟ್ಟು 217565 ಪೈಕಿ 15843 ಜನ ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ. 70.25 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ.71.64 ರಷ್ಟು ಪುರುಷರು, ಶೇ. 68.85 ರಷ್ಟು ಮಹಿಳಾ ಹಾಗೂ ಶೇ. 12.50 ರಷ್ಟು ಇತರೆ ಮತದಾರರು ಮತ ಚಲಾಯಿಸಿದ್ದಾರೆ. ಬಾಗಲಕೋಟ ಮತಕ್ಷೇತ್ರದಲ್ಲಿ ಒಟ್ಟು 233549 ಪೈಕಿ 153219 ಜನ ಮತದಾರರು ಮತ ಚಲಾಯಿಸಿದ್ದು, ಶೇ. 65.60 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ. 67.34 ರಷ್ಟು ಪುರುಷ, ಶೇ. 63.89 ರಷ್ಟು ಮಹಿಳಾ ಹಾಗೂ ಶೇ. 6.67 ರಷ್ಟು ಇತರೆ ಮತದಾನ ಮಾಡಿದ್ದಾರೆ.
ಹುನಗುಂದ ಮತಕ್ಷೇತ್ರದಲ್ಲಿ ಒಟ್ಟು 214542 ಪೈಕಿ 145473 ಜನ ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ. 67.81 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ.69.22 ರಷ್ಟು ಪುರುಷರು, ಶೇ. 66.41 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ನರಗುಂದ ಮತಕ್ಷೇತ್ರದಲ್ಲಿ ಒಟ್ಟು 189084 ಪೈಕಿ 132981 ಜನ ಮತದಾರರು ಮತ ಚಲಾಯಿಸಿದ್ದು, ಶೇ. 70.33 ರಷ್ಟು ಮತದಾನವಾಗಿದೆ. ಅದರಲ್ಲಿ ಶೇ. 73.09 ರಷ್ಟು ಪುರುಷ, ಶೇ. 67.49 ರಷ್ಟು ಮಹಿಳಾ ಹಾಗೂ ಶೇ. 16.67 ರಷ್ಟು ಇತರೆ ಮತದಾನ ಮಾಡಿದ್ದಾರೆ.
ತೇರದಾಳ ಮತಕ್ಷೇತ್ರದಲ್ಲಿ ಶೇ. 74.90 ಮತದಾನವಾಗುವ ಮೂಲಕ ಅತೀ ಹೆಚ್ಚು ಮತದಾನವಾದರೆ, ಬಾಗಲಕೋಟೆ ಮತಕ್ಷೇತ್ರದಲ್ಲಿ ಅತೀ ಕಡಿಮೆ ಅಂದರೆ ಶೇ.65.60 ರಷ್ಟು ಮತದಾನವಾಗಿದ್ದು ಕಂಡುಬಂದಿದೆ.