ಲೋಕಸಭಾ ಚುನಾವಣೆ: 23ರಂದು ನಡೆಯುವ ಎಣಿಕೆ ಭದ್ರತೆ ಪರಿಶೀಲನೆ

ಕೊಪ್ಪಳ 17: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ನಿಮಿತ್ತ ಮೇ. 23ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕೇಂದ್ರದ ಸುತ್ತಮುತ್ತ ಕೈಗೊಳ್ಳಬೇಕಾಗ ಭದ್ರತಾ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಪರಿಶೀಲಿಸಿದರು.  

  ಅವರು ಇಂದು (ಮೇ. 17ರಂದು) ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ನಗರದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಸುತ್ತಮುತ್ತ ಭದ್ರತೆಯನ್ನು ಯಾವ ರೀತಿ ಕೈಗೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ರೇಣುಕಾ ಕೆ.ಸುಕುಮಾರ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. 

ಮತ ಎಣಿಕೆ ದಿನ ಕೇಂದ್ರಗಳೊಳಗೆ ಆಗಮಿಸುವ ಎಣಿಕೆ ಸಿಬ್ಬಂದಿ, ಎಣಿಕೆ ಏಜೆಂಟರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಯಾವ-ಯಾವ ಮಾರ್ಗದಲ್ಲಿ ಆಗಮಿಸಬೇಕು ಹಾಗೂ ವಾಹನಗಳ ನಿಲುಗಡೆ ಮತ್ತು ಸಾರ್ವಜನಿಕರಿಗೆ ಯಾವರೀತಿ ಅವಕಾಶ ಮಾಡಿಕೊಡಬೇಕೆಂಬ ಕುರಿತು ಪರಿಶೀಲಿಸಿದರು.  

ಎಣಿಕೆ ದಿನದಂದು ಎಲ್ಲಾ ರೀತಿಯ ಬಂದೋಬಸ್ತ್ ವ್ಯವಸ್ಥೆಯಾಗಲಿದ್ದು ಎಣಿಕೆ ಕೇಂದ್ರಗಳೊಳಗೆ ಆಗಮಿಸುವ ಅಧಿಕಾರಿಗಳು, ಸಿಬ್ಬಂದಿ ಮತ್ತು ಎಣಿಕೆ ಏಜೆಂಟರಿಗೆಲ್ಲರಿಗೂ ಪಾಸ್ ಅನ್ನು ನೀಡಲಾಗುತ್ತದೆ.  ಪ್ರವೇಶ ಪತ್ರ ಇಲ್ಲದವರಿಗೆ ಯಾವುದೇ ಕಾರಣಕ್ಕೂ, ಕೇಂದ್ರದೊಳಗೆ ಪ್ರವೇಶವಿರುವುದಿಲ್ಲ. ಎಣಿಕೆ ವಿವರದ ಬಗ್ಗೆ ಆಗಿಂದಾಗ್ಗೆ ಸಾರ್ವಜನಿಕರಿಗೂ ಧ್ವನಿವರ್ಧಕದ ಮೂಲಕವೂ ಮಾಹಿತಿಯನ್ನು ನೀಡಲಾಗುತ್ತದೆ.  

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುಗರ್ಾ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು ಎಲ್ಲಾ ಎಂಟು ಕ್ಷೇತ್ರಗಳ ಎಣಿಕೆಯು ಮೇ. 23 ರಂದು ಬೆಳಿಗ್ಗೆ 8 ಗಂಟೆಯಿಂದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ.  

  ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಪೊಲೀಸ್ ಉಪಾಧೀಕ್ಷಕ ಹುಲ್ಲೂರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.