ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ : ಸಂಗನಬಸವ

Logo of Sahitya Sammelan released by : Sanganabasava

ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ : ಸಂಗನಬಸವ     

 ಶಿಗ್ಗಾವಿ  08: ತಾಲೂಕ 5 ನೇ ಕನ್ನಡ ಸಾಹಿತ್ಯ ಸಮ್ಮೆ?ಳನಕ್ಕೆ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾದರಿ ಸಮ್ಮೇಳನವನ್ನಾಗಿ ಆಚರಿಸೋಣ ಎಂದು ಕಸಾಪ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಹೆಸರೂರ ಮತ್ತು ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಮನವಿ ಮಾಡಿದರು.  ಪಟ್ಟಣದ ವಿರಕ್ತಮಠದ ಸಂಗನಬಸವ ಮಂಗಲ ಭವನದಲ್ಲಿ ಸಂಗನಬಸವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಶಿಗ್ಗಾವಿ ತಾಲೂಕ 5 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.  ಪಟ್ಟಣದಲ್ಲಿ ಪೆ.11 ರಂದು ಹಾವೇರಿ ವಿಶ್ವವಿದ್ಯಾಲಯ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪೂರ ಅವರ ಅಧ್ಯಕ್ಷತೆಯಲ್ಲಿ ನಡೆಯುವ 5 ನೇ ಕನ್ನಡ ಸಾಹಿತ್ಯ ಸಮ್ಮೆ?ಳನ, ಬೆಳಗ್ಗೆ ತಾಲೂಕ ಕ್ರೀಡಾಂಗಣದ ಬಳಿ ಇರುವ ಗ್ರಾಮ ದೇವಿ ಪಾದಗಟ್ಟಿಯಿಂದ ಕನ್ನಡ ಧ್ವಜ, ಭುವನೇಶ್ವರಿಯ ಮೆರವಣಿಗೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿರಕ್ತಮಠದ ಮಂಗಳ ಭವನದಲ್ಲಿ ಸಮ್ಮೇಳನ ಕಾರ್ಯಕ್ರಮ ಜರುಗಲಿದ್ದು, ತಾಲೂಕಿನ ಎಲ್ಲಾ ಕನ್ನಡಪರ ಸಂಘಟನೆ, ರೈತ ಪರ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘ-ಸಂಸ್ಥೆಗಳು ಕನ್ನಡ ಹಬ್ಬದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು.    ಈ ಸಂದರ್ಭದಲ್ಲಿ ಕಸಾಪ ತಾಲೂಕ ಘಟಕದ ಕಾರ್ಯದರ್ಶಿ ರಮೇಶ ಹರಿಜನ, ಸಂಘಟನಾ ಕಾರ್ಯದರ್ಶಿ ಶಂಭುಲಿಂಗಪ್ಪ ಕೆರಿ, ಶಿಗ್ಗಾವಿ ಹೋಬಳಿ ಘಟಕದ ಮಹಿಳಾ ಅಧ್ಯಕ್ಷೆ ಲಲಿತಾ ಹಿರೇಮಠ, ತಾಲೂಕ ಹೋಬಳಿ ಘಟಕದ ಅಧ್ಯಕ್ಷ ಈರ​‍್ಪ ಬೋಸ್ಲೆ,ಎಸ್, ಎಪ್, ಮಣ್ಣಕಟ್ಟಿ, ಸಿ ಡಿ ಯತ್ನಳ್ಳಿ, ಶಶಿಕಾಂತ ರಾಠೋಡ, ಮಲ್ಲಪ್ಪ ಬಾರಕೇರ, ರಮೇಶ ಸಾತಣ್ಣವರ, ಶಂಕರಗೌಡ ಪಾಟೀಲ, ಶಂಕರ ಅರ್ಕಸಾಲಿ, ಬಸವರಾಜ ಶಿಗ್ಗಾವಿ, ಅಶೋಕ ಕಾಳೆ, ರವಿ ಕಡಕೋಳ, ಸಂಜನಾ ರಾಯ್ಕರ, ವಿದ್ಯಾ ಮುಂಡಗೋಡ ಸೇರಿದಂತೆ ಇತರರಿದ್ದರು.