ಅಮ್ಮಿನಬಾವಿ ಯುಕೋ ಬ್ಯಾಂಕ್ ಶಾಖೆಯಲ್ಲಿ ಸಾಲ ವಸೂಲಾತಿ ಮೇಳ

ಧಾರವಾಡ .25 : ರೈತರು ಮತ್ತು ಇತರೇ ಉದ್ಯೋಗಸ್ಥರು ಬ್ಯಾಂಕ್ ಮೂಲಕ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಸಹಕರಿಸಬೇಕೆಂದು ಬೆಂಗಳೂರಿನ ಯುಕೋ ಬ್ಯಾಂಕ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಟಿ.ಕೆ. ಜಯಕುಮಾರ ಕರೆ ನೀಡಿದರು. 

ಅವರು ಬುಧವಾರ ಸಮೀಪದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಯುಕೋ ಬ್ಯಾಂಕ್ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಸಾಲ ವಸೂಲಾತಿ ಮೇಳದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಒನ್ ಟೈಮ್ ಸೆಟ್ಲಮೆಂಟ್ (ಓಟಿಎಸ್) ಯೋಜನೆ ಅಡಿಯಲ್ಲಿ ಕಟ್ಬಾಕಿ ಸಾಲಗಾರರ ಸಾಲ ಮರುಪಾವತಿಗೆ ಸಾಲ ತೀರಿಸಲು ಪ್ರಸ್ತುತ ಯುಕೋ ಬ್ಯಾಂಕ್ ರಿಯಾಯತಿ ದರದಲ್ಲಿ ಅವಕಾಶ ಕಲ್ಪಿಸಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದು ಸಾಲ ಮರುಪಾವತಿಸಿ ಋಣಮುಕ್ತರಾಗಬೇಕೆಂದು ಅವರು ಮನವಿ ಮಾಡಿದರು.  

ಅಮ್ಮಿನಬಾವಿ ಗ್ರಾಮದ ಯುಕೋ ಬ್ಯಾಂಕ್ ಶಾಖೆಯ ಮ್ಯಾನೇಜರ್ ದೀಪಾ ಜೋಶಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಮೇಳದ ಯಶಸ್ಸಿಗೆ ಸಹಕರಿಸಿದರು. ಸುಮಾರು 200 ಜನ ಗ್ರಾಹಕರು ಮೇಳದಲ್ಲಿ ಪಾಲ್ಗೊಂಡಿದ್ದರು.