ಹೆಚ್ಚು ಕಾರ್ಖಾನೆಗಳಿಂದ ಜನರ, ರೈತರ ಜೀವನ ಹಾಳಾಗಿದೆ : ಎಂಎಲ್ಸಿ, ಹೇಮಲತಾ ನಾಯಕ್‌

Lives of people and farmers are ruined by more factories: MLC, Hemalatha Naik

ಹೆಚ್ಚು ಕಾರ್ಖಾನೆಗಳಿಂದ ಜನರ, ರೈತರ ಜೀವನ ಹಾಳಾಗಿದೆ : ಎಂಎಲ್ಸಿ, ಹೇಮಲತಾ ನಾಯಕ್‌

ಕೊಪ್ಪಳ : ಕೊಪ್ಪಳ ತಾಲೂಕಿನಲ್ಲಿ ಸುಮಾರು 2002 ಕಾರ್ಖಾನೆಗಳಿವೆ ಇವುಗಳಿಂದ ವಾಯುವ್ಯ ಮಾಲಿನ್ಯವಾಗಿ ಇಲ್ಲಿನ ಜನರ ಜೀವನ ರೈತರ ಜೀವನ ಅಕ್ಷರಾಂಶ ಹಾಳಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು. 

ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಕಾರ್ಖಾನೆಗಳು ಬಿಡುವ ವಿಷಯ ಅನಿಲಗಳ ಬಗ್ಗೆ ಯೋಚಿಸಿದರೆ ಬದುಕು ದುಸ್ತರವಾಗಲಿದೆ, ಈಗಾಗಲೇ ಚಿಕ್ಕಬಗನಹಳ್ಳಿ ,  ಹಿರೇ ಬಗನಾಳ, ಕಾಸನಕಂಡಿ, ಅಲ್ಲಾನಗರ, ಹಾಲವರ್ತಿ ಕುಣಿಕೇರಿ, ಕುಣಿಕೇರಿ ತಾಂಡ, ಲಾಚನಕೇರಿ ಸೇರಿದಂತೆ ಇತರೆ ಎಲ್ಲಾ ಗ್ರಾಮಗಳು ಅಪಾಯ ಮಟ್ಟ ಮೀರಿ ಹೋಗಿವೆ, ಈಗ ತಾಲೂಕಿನ ರೈತರ ಜೀವನ ಹಾಳಾದರೂ ಮತ್ತೆ ಬಲ್ದೋಟಾ ಸಮೂಹ ಸಂಸ್ಥೆ ನಗರಕ್ಕೆ ಹತ್ತಿರದಲ್ಲಿ ಉಕ್ಕಿನ ಕಾರ್ಖಾನೆ ತೆಗೆಯಲು ಸರಕಾರದಿಂದ ಒಪ್ಪಿಗೆ ಪಡೆದಿದೆ ಇದು ನಿಜಕ್ಕೂ ಕೊಪ್ಪಳ ಜನತೆ ಭಯದಲ್ಲಿದ್ದಾರೆ, 54,000 ಕೋಟಿ ವೆಚ್ಚದಲ್ಲಿ 10.05 ದಶ ಲಕ್ಷ ಟನ್ ಉತ್ಪಾದನೆ ಸಾಮರ್ಥ್ಯದಿಂದ ಇಂಟಿಗ್ರೇಡೆಡ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದೆ, ಇದರಿಂದ ಉಕ್ಕು ಉತ್ಪಾದನೆ ಹೆಚ್ಚಾಗಲಿದೆ,  

ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸರ್ಕಾರ ಕಂಪನಿ ಹೇಳುತ್ತಿದ್ದೆ ಆದರೆ ಜನರ ಜೀವನ ಆರೋಗ್ಯ ಬೆಳೆ ಎಷ್ಟು ನಷ್ಟವಾಗಲಿದೆ? ಗ್ರಾಮಗಳಿಗೆ ಹೋಗಿ ನೋಡಿ ಆಗ ತಿಳಿಯುತ್ತದೆ, ಹೀಗಾಗಿ ಸರಕಾರ ಈ ಬಲ್ದೋಟ ಉಕ್ಕು ಕಾರ್ಖಾನೆ ಸ್ಥಾಪಿಸಬಾರದು ಎಂದು ಒತ್ತಾಯಿಸುವುದಾಗಿ ಹೇಳಿದರು.ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ್ ಕ್ಯಾವಟರ್ ಮಾತನಾಡಿ ಜನರ ಆರೋಗ್ಯದ ಪರಿಸ್ಥಿತಿಯೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಉಸಿರಾಟ ಸಮಸ್ಯೆ, ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್, ಕೈ- ಕಾಲು ನೋವು ಸೇರಿದಂತೆ ವಿವಿಧ ಸಮಸ್ಯೆಗಳು ಈಗಾಗಲೇ ಕಾರ್ಖಾನೆ ಸಮೀಪವಿರುವ ಕೊಪ್ಪಳ ತಾಲೂಕಿನ ಗ್ರಾಮಗಳಲ್ಲಿ ಜನರನ್ನು ಬಾಧಿಸುತ್ತಿವೆ.ಇಂತಹ ಸಮಯದಲ್ಲಿ ಕೊಪ್ಪಳ ನಗರಕ್ಕೆ ಹೊಂದಿಕೊಂಡು 980 ಎಕರೆ ಪ್ರದೇಶದಲ್ಲಿ ನೂತನ ಸ್ಟಿಲ್ ಕಾರ್ಖಾನೆ ಆರಂಭಿಸಿದರೇ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿರುವ ಜನರ ಪರಿಸ್ಥಿತಿ ಏನಾಗಬೇಡ? ಮುಂದಿನ ದಿನಗಳಲ್ಲಿ ಕೊಪ್ಪಳ ನಗರದ ಜನರು ಜಿಲ್ಲಾ ಕೇಂದ್ರ ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬೇಕಾಗುತ್ತದೆ, ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅಶೋಕ್ ಗುಡದಹಳ್ಳಿ, ವಾಣಿಶ್ರೀ ಹಿರೇಮಠ,ಹುಲಿಗೇಶ ಮೇಟಿ, ನೀಲಕಂಠಯ್ಯ ಹಿರೇಮಠ ಉಪಸ್ಥಿತರಿದ್ದರು.