ಸಾಹಿತಿ ಶಾಂತಾ ಕೆ. ಬಸವರಾಜ ಅವರನ್ನು ಹೊರಕೇರಿ ಮಾಸ್ತರ ಸಮಿತಿಯ ಸಹಯೋಗದಲ್ಲಿ ಸನ್ಮಾನ

ಸಾಹಿತಿ ಶಾಂತಾ ಕೆ. ಬಸವರಾಜ ಅವರನ್ನು ಹೊರಕೇರಿ ಮಾಸ್ತರ ಸಮಿತಿಯ ಸಹಯೋಗದಲ್ಲಿ ಸನ್ಮಾನ Literary writer Shantha K. Basavaraja felicitated in collaboration with Horakere Mastara Samiti

                             ಹುಬ್ಬಳ್ಳಿ 24:  ಹಿರಿಯ ಸಾಹಿತಿ, ಅನುಭಾವಿ ಶರಣೆ ಶಾಂತಾ ಕೆ. ಬಸವರಾಜ ಅವರು ಅತ್ಯಂತ ಸರಳ ಜೀವಿ. ಅಷ್ಟೊಂದು ಓದಿಕೊಂಡಿರದ, ಓಪಚಾರಿಕ, ಶೈಕ್ಷಣಿಕ ವ್ಯವಸ್ಥೆಯ ಶ್ರೇಣಿಕೃತ ಶಿಕ್ಷಣ, ಸಂಪ್ರದಾಯ ಶಿಕ್ಷಣ ವ್ಯವಸ್ಥೆಯಿಂದ ವಂಚಿತ, ಫ್ರೌಢ ಶಿಕ್ಷಣ ವಿಭಾಗಕ್ಕೆ ಹೆಜ್ಜೆ ಹಾಕದ ದಿಟ್ಟ ಧೀಮಂತ ಮಹಿಳೆ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ರಚನೆ ಮಾಡಿ ಶಹಬ್ಬಾಸ ಎನಿಸಿಕೊಂಡಿರುವ, ಇಳಿವಯಸ್ಸಿನಲ್ಲಿಯೂ ಬರವಣಿಗೆ ಕಾರ್ಯದಲ್ಲಿ ಶ್ರದ್ಧಾಪೂರ್ವಕವಾಗಿ ತಮ್ಮನ್ನೂ ತಾವು ಸಮರ​‍್ಿಸಿಕೊಂಡಿದ್ದಾರೆ.

                             ಅವರ ಮನಸ್ಸು ಪಕ್ವಗೊಂಡು ಆಧ್ಯಾತ್ಮಿಕ ಅನುಭೂತಿಯಿಂದ ಆವರಿಸಿಕೊಂಡಿದೆ. ಸಮಾಜದಲ್ಲಿ ಅಲೌಕಿಕವಾಗಿ ಘನತೆಯ ಆದರ್ಶದ ಬದುಕು ಸಾಗಿಸಿದ, ಸಮಷ್ಟಿ ಕಲ್ಯಾಣದ ಮಾರ್ಗ ತೋರಿದ ಮಹಾತ್ಮರ, ಶರಣರ, ಪುಣ್ಯಪುರುಷರ ಘನತೆವೆತ್ತ ವ್ಯಕ್ತಿತ್ವವನ್ನು ಲೋಕಕ್ಕೆ ತೋರಿಸುವ ಕಾರ್ಯವನ್ನು ಬರವಣಿಗೆಯ ಮೂಲಕ ರಚನೆ ಮಾಡಿರುವ , ಆದರ್ಶ ಜೀವನ ಸಾಗಿಸುತ್ತಿರುವ, ಅವರ ಕೃತಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಭಾಗ-3 ಲೋಕಾರೆ​‍್ಣ ಗೊಂಡಿರುವ ಶುಭ ಸಂದರ್ಭದಲ್ಲಿ ಸಾಹಿತಿ ಶಾಂತಾ ಕೆ. ಬಸವರಾಜ ಅವರನ್ನು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರು.

                          ಪಾಂಡಿತ್ಯ ಪರಂಪರೆಯ ಬಹುಶಿಸ್ತೀಯ ಅಧ್ಯಯನದ ಘನ ವಿದ್ವಾಂಸರು, ಚಿಂತನಶೀಲ ಬದ್ಧತೆಯ ಬರಹಗಾರರು. ಹಳಗನ್ನಡ, ಶಾಸನ, ಇತಿಹಾಸ, ಸಂಸ್ಕೃತಿ, ವಚನಸಾಹಿತ್ಯ, ಹಸ್ತಪ್ರತಿ, ಗ್ರಂಥಸಂಪಾದನಶಾಸ್ತ್ರ ಪರಿಣತರುಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸಂಶೋಧನ  ಪ್ರಶಸ್ತಿ ಪುರಸ್ಕೃತರಾದ ಡಾ ಬಿ.ವಿ.ಶಿರೂರ ಅವರು ಶಾಲು, ಮಾಲಾರೆ​‍್ಣ ಮಾಡಿ, ಗ್ರಂಥ ನೀಡಿ ಹುತ್ಪೂರ್ವಕವಾಗಿ ಆಶೀರ್ವಾದ ರೂಪದಲ್ಲಿ ಸನ್ಮಾನಿಸಿದರು. ಡಾ. ಬಿ.ವಿ.ಶಿರೂರ ಅವರು ಶಾಂತಾ ಅವರಿಗೆ ಮನೆಯ ಹಿರಿಯ ಅಣ್ಣನಂತೆ ಪ್ರತಿ ಹಂತದಲ್ಲಿಯೂ ಗ್ರಂಥ ರಚನಾ ಕಾರ್ಯದಲ್ಲಿ ಮಾರ್ಗದರ್ಶನ ಮಾಡಿದ್ದಾರೆ.ಸಾಹಿತಿ ಶಾಂತಾ ಕೆ.ಬಸವರಾಜ ಅವರು ಮಾತನಾಡಿ ಡಾ. ಶಿರೂರ ಗುರುಗಳು ನನ್ನೆಲ್ಲ ಸಾಹಿತ್ಯ ಕೃಷಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ನನಗೆ ಅವರು ದೊಡ್ಡಣ್ಣನ ಹಾಗೆ ಪ್ರೀತಿ ತೋರಿದ್ದಾರೆ.

                         ನನ್ನ ಬರವಣೆಗೆಗೆ ಸರಿಯಾದ ಮಾರ್ಗದರ್ಶನ ನೀಡಿ ಸಾಹಿತ್ಯ ರಚನೆಗೆ ಪ್ರೊತ್ಸಾಹ ನೀಡಿ ಹರಿಸಿ ಹಾರೈಸಿದ್ದಾರೆ ಎಂದರು. ನಿವೃತ್ ಪ್ರಾಚಾರ್ಯ, ಸಾಹಿತಿ ಪ್ರೊ ಎಸ್‌.ಆರ್‌.ಆಶಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ನಿವೃತ್ ವೈದ್ಯಾಧಿಕಾರಿ ಡಾ. ವಿ.ಬಿ.ನಿಟಾಲಿ, ಪ್ರಾಚಾರ್ಯ ಪ್ರೊ ಎಫ್‌.ಬಿ.ಸೊರಟೂರ, ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ, ಕೃತಿಕಾ ಮಹೇಂದ್ರ ಶಿರೂರ,  ಡಾ.ಬಸವಕುಮಾರ ತಲವಾಯಿ, ಮುಂತಾದವರು ಇದ್ದರು.