ಸಾಹಿತ್ಯ ಸಮ್ಮೇಳನ; ಉಪಸಮಿತಿಗಳು ನಾಳೆಯೊಳಗೆ ಕಾರ್ಯವಿವರ ಸಲ್ಲಿಸಲು ಚೋಳನ್ ಸೂಚನೆ

ಧಾರವಾಡ 04: ಅ.ಭಾ.84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಾಗಿ ವಿವಿಧ ಉಪ ಸಮಿತಿಗಳು ತಮ್ಮ ಸಂಪೂರ್ಣ ಕಾರ್ಯ ಚಟುವಟಿಕೆಗಳ ವಿವರಗಳನ್ನು ಡಿಸೆಂಬರ್ 6 ರೊಳಗಾಗಿ ಸ್ವಾಗತ ಸಮಿತಿಗೆ  ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ವಿವಿಧ ಉಪಸಮಿತಿಗಳ ಕಾಯರ್ಾಧ್ಯಕ್ಷರು, ಕಾರ್ಯದಶರ್ಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಅವಳಿ ನಗರದ ಸ್ವಚ್ಛತೆ, ಸೌಂದಯರ್ೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಸಮ್ಮೇಳನದ ಉದ್ಘಾಟನೆ ದಿನವಾದ ಜನವರಿ 4 ರಂದು ಬೆಳಿಗ್ಗೆ 8 ಗಂಟೆಗೆ ಕನರ್ಾಟಕ ಕಲಾ  ಮಹಾವಿದ್ಯಾಲಯದ ಆವರಣದಲ್ಲಿ ರಾಷ್ಟ್ರಧ್ವಜ, ನಾಡಧ್ವಜ  ಹಾಗೂ ಪರಿಷತ್ ಧ್ವಜಗಳ ಆರೋಹಣ ನಡೆದ ಕೂಡಲೇ ಮೆರವಣಿಗೆ ಆರಂಭಿಸಲಾಗುವದು. ಬೆಳಿಗ್ಗೆ 7.30 ಕ್ಕೆ ಎಲ್ಲ ಜನಪದ ಕಲಾ ತಂಡಗಳು ಅಲ್ಲಿ ಸಿದ್ಧವಾಗಿರುವಂತೆ ನೋಡಿಕೊಳ್ಳಬೇಕು. ನಗರದ ಸೌಂದಯರ್ೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ರಂಗೋಲಿ, ಮಾವಿನ ತಳಿರು, ತೋರಣ, ಬಾಳೆ ಕಂಬ, ತೆಂಗಿನ ಗರಿ, ಹೂವು ಮೊದಲಾದ ನೈಸಗರ್ಿಕ ವಸ್ತುಗಳನ್ನೇ ಅಧಿಕವಾಗಿ ಬಳಸಿ ಅಲಂಕಾರಗೊಳಿಸಲು ಆದ್ಯತೆ ನೀಡಬೇಕು. ಆದಿಕವಿ ಪಂಪ, ಕುಮಾರವ್ಯಾಸ, ಸಂತ ಶಿಶುನಾಳ ಶರೀಫ ಸೇರಿದಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು,  ವಿಜ್ಞಾನಿಗಳು, ಹೆಸರಾಂತ ಕ್ರೀಡಾಪಟುಗಳು, ಕಲಾವಿದರು, ಸಂಗೀತಗಾರರ ಭಾವಚಿತ್ರಗಳನ್ನು ನಗರದ ಪ್ರಮುಖ ಸ್ಥಳಗಳಲ್ಲಿ ಹಾಕಿ ಹಬ್ಬದ ವಾತಾವರ ಸೃಷ್ಟಿ ಮಾಡಬೇಕು.  ಸಮ್ಮೇಳನ ನಡೆಯುವ ಕೃಷಿ ವಿವಿ ಆವರಣ ಮತ್ತು ಅದಕ್ಕೆ ತಲುಪುವ ಎಲ್ಲ ಮಾರ್ಗಗಳಲ್ಲಿ ಸಾಕಷ್ಟು ವಿದ್ಯುದ್ದೀಪಗಳನ್ನು ಅಳವಡಿಸಿ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು.  ಪ್ಲಾಸ್ಟಿಕ್ ಬ್ಯಾನರ್, ವಿನೈಲ್, ಫ್ಲೆಕ್ಸ್ಗಳನ್ನು ಬಳಸಬಾರದು. ಪೊಲೀಸರ ನಿಯೋಜನೆ, ಕಲಾವಿದರು,ಸ್ವಯಂ ಸೇವಕರು, ಅತಿಥಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ  ಗುರುತಿನ ಚೀಟಿಗಳನ್ನು ಪೂರೈಸಬೇಕು. ನೋಂದಾಯಿತ ಪ್ರತಿನಿಧಿಗಳಿಗೆ ಅವರ ವಸತಿ ಸ್ಥಳಗಳಿಂದ ಸಮ್ಮೇಳನ ಸ್ಥಳಕ್ಕೆ ಬರಲು ಹಾಗೂ ಸಾರ್ವಜನಿಕರಿಗೆ ಉಚಿತ ಸಾರಿಗೆ ಸಂಪರ್ಕ ಕಲ್ಪಿಸಲು ನೀಲನಕ್ಷೆ ತಯಾರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ ಮಾತನಾಡಿ, ಉಪಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವಾಗ ಎದುರಾಗಬಹುದಾದ ಸಮಸ್ಯೆಗಳನ್ನು ತಿಳಿದು, ಮುನ್ನೋಟದೊಂದಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ   ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ   ಶಕೀಲ್ ಅಹ್ಮದ್, ಉಪವಿಭಾಗಾಧಿಕಾರಿ  ಮಹ್ಮದ್ ಜುಬೇರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಆಹಾರ ಇಲಾಖೆ ಜಂಟಿ ನಿದರ್ೇಶಕ ಸದಾಶಿವ ಮಜರ್ಿ, ಅಬಕಾರಿ ಉಪ ಆಯುಕ್ತ ಬಿ.ಆರ್.ಹಿರೇಮಠ, ರಂಗಾಯಣ ಆಡಳಿತಾಧಿಕಾರಿ ಕೆ.ಹೆಚ್.ಚನ್ನೂರ, ಲೋಕೋಪಯೋಗಿ ಇಲಾಖೆ ಕಾರ್ಯನಿವರ್ಾಹಕ ಇಂಜಿನಿಯರ್   ವಿರೂಪಾಕ್ಷಪ್ಪ ಯಮಕನಮರಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ಎಂ.ದೊಡ್ಡಮನಿ, ಕಿಮ್ಸ್ ಆಡಳಿತಾಧಿಕಾರಿ ಬಸವರಾಜ ಸೋಮಣ್ಣವರ, ಎಂ.ಸಿ.ಮತ್ತು ಎ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಸಿದ್ಧಲಿಂಗೇಶ ಹಸಬಿ ಮತ್ತಿತರರು ಇದ್ದರು.