ಸಾಹಿತ್ಯ ಸಮ್ಮೇಳನ: ಸ್ವಚ್ಚತಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಚಾಲನೆ

ಧಾರವಾಡ 04: ಬರುವ ಜನವರಿ 4,5 ಹಾಗೂ 6 ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸ್ವಚ್ಛತಾ ಆಂದೋಲನ ಆರಂಭಿಸಿತು.

ಬೆಳಿಗ್ಗೆ 6.30 ಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು , ಕನರ್ಾಟಕ ಮಹಾವಿದ್ಯಾಲಯದ ಆವರಣದಲ್ಲಿ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಿದರು.

ಕಾಲೇಜು ರಸ್ತೆ ಮಾರ್ಗವಾಗಿ ಜ್ಯುಬಿಲಿ ವೃತ್ತದವರೆಗೆ ಕಸಗುಡಿಸಿ, ಕಳೆಯ ಗಿಡಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ,  ಧಾರವಾಡ ನಗರವನ್ನು ಸ್ವಚ್ಛ ಮಾಡಲು ತಂಡಗಳನ್ನು ಮಾಡಿಕೊಂಡಿದ್ದೇವೆ. ಜನೆವರಿಯಲ್ಲಿ ಅಖಿಲ ಭಾರತ 84 ನೇ  ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆ ನಗರ ಸ್ವಚ್ಛ ಮಾಡುತ್ತಿದ್ದೇವೆ.  ಮುಖ್ಯವಾಗಿ ಸಮ್ಮೇಳನದ ಮೆರವಣಿಗೆ ಸಾಗುವ ಮಾರ್ಗವನ್ನು ಹೆಚ್ಚು ಸ್ವಚ್ಛವಾಗಿಡಬೇಕಿದೆ. ರಸ್ತೆ ಬದಿ ಮತ್ತು ವಿಭಜಕಗಳ ಬಳಿ ಪಾಥರ್ೆನಿಯಂ ಬೆಳೆದಿದೆ. ಸಾಕಷ್ಟು ಕಡೆಗಳಲ್ಲಿ ಕಸ ಕಡ್ಡಿ, ಬಾಟಲಿಗಳೆಲ್ಲ ಬಿದ್ದಿವೆ, ಇವೆಲ್ಲವನ್ನೂ ಇಂದು ಶನಿವಾರದಷ್ಟೊತ್ತಿಗೆ ಹೆಚ್ಚು ತಂಡ ರಚನೆ ಮಾಡಿ, ನಿರಂತರವಾಗಿ ಸ್ವಚ್ಛ ಮಾಡಿ, ನಿಗಾ ಇಡುತ್ತೇವೆ ಎಂದರು.

ಜಿಪಂ ಸಿಇಓ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ,ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಆಹಾರ ಇಲಾಖೆ ಜಂಟಿ ನಿದರ್ೇಶಕ ಸದಾಶಿವ ಮಜರ್ಿ, ಅಬಕಾರಿ ಉಪ ಆಯುಕ್ತ ಬಿ.ಆರ್.ಹಿರೇಮಠ, ಲೋಕೋಪಯೋಗಿ ಕಾರ್ಯನಿವರ್ಾಹಕ ಇಂಜಿನಿಯರ್ ವಿರೂಪಾಕ್ಷಪ್ಪ ಯಮಕನಮರಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ಎಂ.ದೊಡ್ಡಮನಿ ಮತ್ತಿತರರು ಇದ್ದರು.

ಡಾ.ರಾಮು ಮೂಲಗಿ ಮತ್ತು ತಂಡದ ಕಲಾವಿದರು ಸ್ವಚ್ಚತಾ ಜಾಗೃತಿ ಗೀತೆಗಳನ್ನು ಹಾಡಿದರು. ಸಕರ್ಾರಿ ಕ್ರೀಡಾ ವಸತಿ ಶಾಲೆಯ ವಿದ್ಯಾಥರ್ಿಗಳು ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಸಿ. ಸತೀಶ್ ಅವರು ಪಾದಯಾತ್ರೆ ಮೂಲಕ ಮೆರವಣಿಗೆ ಮಾರ್ಗ ಪರಿಶೀಲಿಸಿದರು.