ಸಾಕ್ಷರತೆ ಎಂದರೆ ಸ್ವಾವಲಂಭಿಯಾಗುವ ಶಕ್ತಿ: ಸದಲಗಿ
Literacy is the power to become self-reliant: Sadalagi
ಸಾಕ್ಷರತೆ ಎಂದರೆ ಸ್ವಾವಲಂಭಿಯಾಗುವ ಶಕ್ತಿ: ಸದಲಗಿ
ಧಾರವಾಡ 11: ಸಾಕ್ಷರತೆ ಎಂದರೆ ಕೇವಲ ಓದು-ಬರಹದ ಸಾಮರ್ಥ್ಯವಲ್ಲ, ಅದು ವ್ಯಕ್ತಿಯ ಆತ್ಮವಿಶ್ವಾಸವನ್ನು ಬೆಳೆಸುವ, ಸಮಾಜದಲ್ಲಿ ಘನತೆಯಿಂದ ಬದುಕುವ ಮತ್ತು ಸ್ವಾವಲಂಭಿಯಾಗುವ ಶಕ್ತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತುಜಿಲ್ಲಾ ಲೋಕ ಶಿಕ್ಷಣ ಸಮಿತಿಯ ವತಿಯಿಂದ ಧಾರವಾಡ ತಾಲ್ಲೂಕಿನ ಸೋಮಾಪುರ ಗ್ರಾಮದ, ಸರಕಾರಿ ಹಿರಿಯ, ಶಾಲೆಯಲ್ಲ್ಲಿ ಇಂದು ಏರಿ್ಡಸಲಾದ “ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮುಖ್ಯಅಥಿತಿಯಾಗಿ ಮಾತನಾಡಿದರು.ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವುದು ಪುಣ್ಯದ ಕೆಲಸ. ಅನಕ್ಷರತೆಯ ಕತ್ತಲೆಯಲ್ಲಿರುವ ಮುಗ್ದ ಜನರನ್ನು ಸಾಕ್ಷರತೆಯ ಮೂಲಕ ಬೆಳಕಿಗೆ ತರುವಂತ ಕೆಲಸವನ್ನು ಮಾಡಬೇಕು.ಇಂತಹ ಕೆಲಸವನ್ನು ಮಾಡುವಾಗಯಾವುದೇ ಪ್ರತಿಫಲಾಪೇಕ್ಷೆ ಮಾಡದೆ ದೇಶಸೇವೆ ಎಂದು ತಿಳಿಯಬೇಕು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಜಯಶ್ರೀ ವರೂರ ಮಾತನಾಡುತ್ತಾ. ಪ್ರತಿಯೊಬ್ಬರೂ ಸಾಕ್ಷರತೆಯ ಮಹತ್ವ ಅರಿತು ಓದಲು ಬರೆಯಲು ಬಾರದ ಅನಕ್ಷರಸ್ಥರನ್ನು ವಿದ್ಯಾವಂತರಾಗುವುದಕ್ಕೆ ಪ್ರೇರಣೆ ನೀಡಿ, ಅಕ್ಷರಾಭ್ಯಾಸ ಮಾಡಿಸಬೇಕು ಪ್ರತಿ ವರ್ಷದಂತೆ ಸೆಪ್ಟೆಂಬರ್ 8ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಕ್ಷರಜ್ಞಾನವು ಶಿಕ್ಷಣದ ದಾರಿಯನ್ನು ತೆರೆದಿಡುವುದರೊಂದಿಗೆ ಉತ್ತಮ ಉದ್ಯೋಗ, ಆರ್ಥಿಕ ಭದ್ರತೆ ಹಾಗೂ ಜೀವನಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಅನಕ್ಷರತೆ ಎಂಬ ಕತ್ತಲನ್ನು ತೊಲಗಿ, ಅಕ್ಷರದ ಬೆಳಕನ್ನು ಹರಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ವೀರಣ್ಣ ಒಡ್ಡಿನ ಉಪನ್ಯಾಸ ನೀಡುತ್ತಾ ಮಾತನಾಡಿದ ಇವರು ಕೇವಲ ಓದಲು, ಬರೆಯಲು ಮತ್ತು ಗಣಿತ ಮಾಡಲು ಸಾಧ್ಯವಾಗುವುದರ ಬಗ್ಗೆ ಅಲ್ಲ. ಶಿಕ್ಷಣವು ಅದಕ್ಕಿಂತ ಹೆಚ್ಚಿನದನ್ನು ಒಳಗೊಂಡಿದೆ. ಇದು ವಿಮರ್ಶಾತ್ಮಕವಾಗಿ ಯೋಚಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ ಎಂಬುದನ್ನು ಕಲಿಯುವುದರ ಬಗ್ಗೆ. ಇದು ವಿಭಿನ್ನ ಸಂಸ್ಕೃತಿಗಳು ಮತ್ತು ದೃಷ್ಟಿಕೋನಗಳ ಬಗ್ಗೆ ಕಲಿಯುವುದರ ಬಗ್ಗೆ. ಇದು ನಿಮ್ಮ ಸೃಜನಶೀಲತೆ ಮತ್ತು ಕಲ್ಪನೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ. ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು, ಕಲಿಯಲು ಮತ್ತು ಮುಂದುವರಿಯಲು ಅವಕಾಶ ಒದಗಿಸೋಣ. ವಿಶ್ವ ಸಾಕ್ಷರತಾ ದಿನದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಓದಲು ಹಾಗೂ ಬರೆಯಲು ಲೇಕ್ಕ ಮಾಡಲು ತಿಳಿದಿರಬೇಕು ಎನ್ನುವುದೇ ವಿಶ್ವ ಸಾಕ್ಷರತಾ ದಿನದ ಆಶಯ ಎಂದರು. ಸಾಕ್ಷರತಾ ನೋಡಲ್ ಅಧಿಕಾರಿ ಎಸ್.ವಿ.ಸಂತಿ ಮಾತನಾಡುತ್ತ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ಸಾಕ್ಷರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಾಗತಿಕವಾಗಿ ಸಾಕ್ಷರತಾ ಮಟ್ಟವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಪ್ರೇರೇಪಿಸಲು ಸಮರ್ಿಸಲಾಗಿದೆ. ಸಾಕ್ಷರತೆಯು ಮಾನವನ ಮೂಲಭೂತ ಹಕ್ಕು ಮತ್ತು ಹೆಚ್ಚು ನ್ಯಾಯಯುತ ಮತ್ತು ಸಮಾನ ಜಗತ್ತಿಗೆ ಮೂಲಭೂತ ಕಟ್ಟಡವಾಗಿದೆ ಎಂಬುದನ್ನು ಸಾರ್ವಜನಿಕರಿಗೆ ನೆನಪಿಸಲು 1966 ರಲ್ಲಿ ಯುನೆಸ್ಕೋ ಈ ದಿನವನ್ನು ಘೋಷಿಸಿತು. ಈ ದಿನದಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ ಎಂದರು. ಮಾರಡಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನೇತ್ರಾ ಬಂಡಿವಾಡ ಕಾರ್ಯಕ್ರಮ ಉದ್ಘಾಟಿಸಿದರು. ಎಸಡಿಎಂಸಿ ಅಧ್ಯಕ್ಷರಾದ ಮಂಜುನಾಥ ಲಕ್ಷ್ಮೇಶ್ವರ ಅಧ್ಯಕ್ಷತೆ ವಹಿಸಿದ್ದರು ಖ್ಯಾತ ಕಲಾವಿದರು ಹಾಗೂ ನಿವೃತ್ತ ಗುರುಮಾತೆಯರಾದ ಶ್ರೀಮತಿ ಪ್ರಮಿಳಾ ಜಕ್ಕಣ್ಣವರ ಉತ್ತಮವಾಗಿ ಜಾಗೃತಿ ಹಾಡನ್ನು ಹೇಳಿದರು. ಬಿಆರಪಿ ಅರುಣ ನವಲೂರ ಪ್ರಮಾಣ ವಚನ ಬೋಧಿಸಿದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ ಕೆ ಎಫ್, ಗ್ರಾಮ ಪಂಚಾಯತ ಸದಸ್ಯರಾದ ಸವಿತಾ ಮುಂದಿನಮನಿ, ಚಂದ್ರಗೌಡ ಪಾಟೀಲ, ಲೀಲಾವತಿ ಶಿರಗುಪ್ಪಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕರಾದ ಕೆ ಬಿ ಕುರಹಟ್ಟಿ, ನರಸಿಂಹಮೂರ್ತಿ ರಾಜೂರ, ಅರುಣ್ ನವಲೂರ, ರಾಘವೇಂದ್ರ ಬಡಿಗೇರ ಸಿಆರಪಿ ಎಂ ಎನ್ ಮುಲ್ಲಾನವರ,ಮುಖ್ಯಾಧ್ಯಾಪಕರಾದ ಎ ಎಚ್ ನಧಾಪ್, ಎಸಡಿಎಂಸಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲಾ ಸಿಬ್ಬಂದಿ, ಊರಿನ ನಾಗರಿಕರು, ಅಡುಗೆ ಸಹಾಯಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾರಡಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನೇತ್ರಾ ಬಂಡಿವಾಡ ಕಾರ್ಯಕ್ರಮ ಉದ್ಘಾಟಿಸಿದರು. ಎಂದು ಕ್ಷೇತ್ರ ಶಿಕ್ಷಣಾದಿಕಾರಿ ರಾಮಕೃಷ್ಣ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಜಯಶ್ರೀ ವರೂರ, ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ವೀರಣ್ಣ ಒಡ್ಡಿನ ಮಾತನಾಡಿದರು, ಖ್ಯಾತ ಕಲಾವಿದರು ಹಾಗೂ ನಿವೃತ್ತ ಗುರುಮಾತೆಯರಾದ ಪ್ರಮಿಳಾ ಜಕ್ಕಣ್ಣವರ ಉತ್ತಮವಾಗಿ ಜಾಗೃತಿ ಹಾಡನ್ನು ಹೇಳಿದರು. ಸಾಕ್ಷರತಾ ನೋಡಲ್ ಅಧಿಕಾರಿ ಎಸ್.ವಿ.ಸಂತಿ ಮಾತನಾಡಿದರು. ಬಿಆರಪಿ ಅರುಣ ನವಲೂರ ಪ್ರಮಾಣ ವಚನ ಬೋಧಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 