ಸಂಸದ ಜೋಶಿಯವರಿಂದ ಶ್ರವಣ ಸಾಧನೆ ವಿತರಣೆ

ಲೋಕದರ್ಶನ ವರದಿ

ಹುಬ್ಬಳ್ಳಿ 17:  ಸಂಸದ ಪ್ರಲ್ಹಾದ ಜೋಶಿಯವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮನಗುಂಡಿ ಗ್ರಾಮದ ಈರಯ್ಯ ಸಿದ್ದಗಿರಿಮಠ ಅವರ 3 ವರ್ಷದ ಮಗು ಕುಮಾರ ಕಲ್ಲಯ್ಯ ಶ್ರವಣ ದೋಷದಿಂದ ಬಳಲುತ್ತಿದ್ದು ಈ ವಿಷಯವನ್ನು ಕಾರ್ಯಕರ್ತರ ಮೂಲಕ ಪಡೆದ ಸಂಸದರು ದೋಷವಿರುವ ಮಗುವಿಗೆ ಶ್ರವಣ ಸಾಧನವನ್ನು ಕೇಂದ್ರ ಸರಕಾರದ ಎಐಡಿಪಿ ಯೋಜನೆ ಅಡಿ ದೊರಕಿಸಿ ಕೋಡುವ ಭವರಸೆ ನೀಡಿದ್ದರು. ಅದರನ್ವಯ ಅಲಿಮ್ಕೋ ಕಂಪನಿಗೆ ಪತ್ರ ಮೂಖೇನ ಪ್ರಸ್ತಾವನೆಯನ್ನೂ ಸಹ ಸಲ್ಲಿಸಿದ್ದರು.  ಅದರನ್ವಯ ಇಂದು ಸಂಸದರ ಕಾಯರ್ಾಲಯಕ್ಕೆ ಅಲಿಮ್ಕೋ ಕಂಪನಿಯಿಂದ ಶ್ರವಣ ಸಾಧನಾ ಬಂದಿದ್ದು ಅದನ್ನು ಇಂದು ಬೆಳಿಗ್ಗೆ ಶ್ರವಣದೋಷವಿರುವ ಮಗು ಕಲ್ಲಯ್ಯನಿಗೆ ಹಸ್ತಾಂತರಿಸಿದರು.  ಈ ಸಂಬಂಧ ಜೋಶಿಯವರು ಈಗಾಗಲೇ ಜಿಲ್ಲೆಯಲ್ಲಿ ದಿವ್ಯಾಂಗರಿಗೆ ಬೇಕಾಗುವ ಸಾದನೆ ಸಲಕರಣೆಗಳನ್ನು ವಿತರಸಿಲಾಗಿದ್ದು ಈಗ ಮತ್ತೆ ಇದೇ ರೀತಿ ದಿವ್ಯಾಂಗರಿಗೆ ಬೇಕಾಗುವ ಸಾಧನೆ ಸಲಕರಣೆಗಳನ್ನು ವಿತರಿಸಲು ಕೇಂದ್ರ ಸರಕಾರದಿಂದ ಒಪ್ಪಿಗೆಯನ್ನು ಪಡೆದಿದ್ದು ಈ ತಿಂಗಳ 24 ರಿಂದ 28 ರ ವರೆಗೆ ತಾಲೂಕಾವಾರು ಸವರ್ೆ ಕಾರ್ಯವನ್ನು ಜಿಲ್ಲಾಡಳಿತ ವೈದ್ಯಾಧಿಕಾರಿಗಳು, ಅಂಗವಿಕಲ ಕಲ್ಯಾಣ ಅಧಿಕಾರಿಗಳ ಸಹಯೋಗದಲ್ಲಿ ನಡೆಸಲಾಗುತ್ತಿದ್ದು ಜಿಲ್ಲೆಯ ಎಲ್ಲ ದಿವ್ಯಾಂಗರು ಪ್ರಮಾಣ ಪತ್ರದೊಂದಿಗೆ ತಮ್ಮ ಹೆಸರು ನೊಂದಾಯಿಸಿ ಈ ಯೋಜನೆಯ ಲಾಭ ಪಡೆಯಲು ಸಂಸದ ಜೋಶಿ ವಿನಂತಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳು ಕಾಯರ್ಾಲಯ, ಬಾಲ ಭವನ, ಧಾರವಾಡ ಅಥವಾ ಸಂಸದರ ಕಾಯರ್ಾಲಯವನ್ನು ಸಂಪಕರ್ಿಸಲು ಜೋಶಿಯವರು ವಿನಂತಿಸಿದ್ದಾರೆ.