ಲಿಂಗೇಶ್ವರರ ಪುಣ್ಯಾರಾಧನೆ ಶತಮಾನೋತ್ಸವ

ಲೋಕದರ್ಶನ ವರದಿ

ಸಿಂದಗಿ : ಸಂತ-ಶರಣ, ಮಹಾತ್ಮರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ಅಫಜಲಪುರ ಹಿರೇಮಠದ ಮಳೇಂದ್ರ ಶಿವಾಚಾರ್ಯರು.

ದಿ.15ರಂದು ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಸದ್ಗರು ಗುರುಲಿಂಗೇಶ್ವರರ ಪುಣ್ಯಾರಾಧನೆ ಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡ ವಿವಿಧ ಕಾರ್ಯಕ್ರಮ ಹಾಗೂ ಗ್ರಂಥ ಬಿಡುಗಡೆ ಸಮಾರಂಭದವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಗರು ಗುರುಲಿಂಗೇಶ್ವರರ ಆದರ್ಶ ತತ್ವಗಳನ್ನು ನಾವು ಅರಿಯಬೇಕು. ಅವರ ಮಾರ್ಗದಲ್ಲಿ ನಾವು ಬದುಕು ಸಾಗಿಸೋಣ ಎಂದರು.

ಜಾನಪದ ವಿದ್ವಾಂಸೆ ಡಾ.ಮಿನಾಕ್ಷಿ ಬಾಳಿ ಅವರು ಮಾತನಾಡಿ, ಭೀಮಾ ತೀರ ಎನ್ನುವ ಬದಲಾಗಿ ಭೀಮಾ ಬಯಲು ಎಂದು ಕರೆಯಿರಿರಿ. ಈ ನೆಲದಲ್ಲಿ ಹುಟ್ಟಿದ ಬಯಲಾಟ, ಸಾಹಿತ್ಯ, ಕಲೆ ಒಮ್ಮೆ ಅವಲೋಕಿಸಿ ಎಂದರು. ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ರಮೇಶ ಭೂಸನೂರ, ಸಾಹಿತಿ ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ದೋರನಳ್ಳಿ ವೀರಮಹಾಂತ ಶಿವಾಚಾರ್ಯರು, ಕುಮಸಗಿಯ ಕಲ್ಲಾಲಿಂಗ ಮಠದ ಶಿವಾನಂದ ಶಿವಾಚಾರ್ಯರು, ಗ್ರಂಥಗಳನ್ನು ಬಿಡುಗಡೆ ಮಾಡಿದ ನರೋಣದ ಮಹಾಂತ ಶಿವಾಚಾರ್ಯರು ರಘುನಾಥ ಜೋಶಿ, ಶರಣಪ್ಪ ಕಣಮೇಶ್ವರ, ಗುರು ಹಿರೇಮಠ, ಕಾಶಿನಾಥ ಗಂಗನಳ್ಳಿ, ಶ್ರೀಮಂತ ನಾಗೂರ, ವಿನೋದ ಇಂಚಗೇರಿ, ಶಂಕರಲಿಂಗ ಕಡ್ಲೆವಾಡ ಸೇರಿದಂತೆ ಸಾಹಿತಿಗಳು ವೇದಿಕೆ ಮೇಲೆ ಇದ್ದರು.

ಬೆಳಿಗ್ಗೆ 11:30 ಗಂಟೆಗೆ ಸದ್ಗುರು ಗುರಲಿಂಗೇಶ್ವರ ಮಹಾರಾಜರ ಭಾವಚಿತ್ರದ ಮೆರೆವಣಿಗೆಯು ಸಕಲವಾದ್ಯಗಳೊಂದಿಗೆ ಜರಗುವುದು. ಈ ಮೇರವಣಿಗೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಪಲ್ಲಕಿಗಳು ಹಾಗೂ ಭಜನಾ ಮೇಳ, ವೇಷದಾರಿಗಳು ಸೇರಿದಂತೆ ವಿವಿಧ ಕಲಾವಿದರ ತಂಡಗಳು ಭಾಗವಹಿಸಿದ್ದರು.

ಶರಣಪ್ಪ ಕಣಮೇಶ್ವರ, ಗುರು ಹಿರೇಮಠ, ಕಾಶಿನಾಥ ಗಂಗನಳ್ಳಿ, ಶ್ರೀಮಂತ ನಾಗೂರ, ವಿನೋದ ಇಂಚಗೇರಿ, ಶಂಕರಲಿಂಗ ಕಡ್ಲೆವಾಡ ಅವರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಕುರಿತು ಮಾತನಾಡಿ, ಸದ್ಗರು ಗುರುಲಿಂಗೇಶ್ವರರ ಪುಣ್ಯಾರಾಧನೆ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಿದ್ದು ರಾಜ್ಯಕ್ಕೆ ಮಾದರಿಯನ್ನಾಗಿ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.