ಬೈಲಹೊಂಗಲ: ಮಿಂಚಿನ ನೋಂದಣಿ ಅಭಿಯಾನ ಕಾರ್ಯಕ್ರಮ

 ಬೈಲಹೊಂಗಲ 09:  ಸಮೀಪದ ಇಂಚಲದ ಶಿವಯೋಗೀಶ್ವರ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ  ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ರಾಷ್ರ್ಟೀಯ ಸೇವಾ ಯೋಜನೆ ಘಟಕ ಇವರ ಸಹಯೋಗದಲ್ಲಿ  ಮಿಂಚಿನ  ನೋಂದಣಿ ಅಭಿಯಾನ ಅಡಿಯಲ್ಲಿ  ಮತದಾರರ ನೋಂದಣಿ  ಚೀಟಿ ತಿಳುವಳಿಕೆ ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. 

        ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಎಮ್.ಎಸ್.ಮಟ್ಟಿ, ಎಸ್.ಟಿ.ಕಾಂಬಳೆ ಮಾತನಾಡಿ, ಮತದಾನ ಸಮಾನತೆಯ ಪ್ರತೀಕವಾಗಿದ್ದು, ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ನಿಷ್ಪಕ್ಷಪಾತದಿಂದ ಮತಚಲಾವಣೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯ, ಇದನ್ನು ಚಲಾವಣೆ ಮಾಡುವುದರ ಬಗ್ಗೆ ವಿದ್ಯಾಥರ್ಿಗಳು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದರು.

     ಕಾರ್ಯಕ್ರಮದಲ್ಲಿ ಎಮ್.ಎಸ್.ಕಟ್ಟಿ, ಎಮ.ಬಿ.ಹೂಗಾರ, ಆರ್.ವ್ಹಿ.ಅಣ್ಣಿಗೇರಿ, ಎನ್.ವ್ಹಿ.ಪಾಟೀಲ, ಎಸ್.ಜಿ.ಪಾಟೀಲ, ಎಂ.ಎಂ.ಕೊಡ್ಲಿ, ಎಸ್.ಎಸ್.ರಾಯನಾಯ್ಕರ, ಎನ್.ಎಸ್.ಎಸ್.ಸ್ವಯಂ ಸೇವಕರು, ಉಪನ್ಯಾಸಕ ಸಿಬ್ಬಂದಿ ವರ್ಗ, ವಿದ್ಯಾಥರ್ಿಗಳು  ಇದ್ದರು.