ಶಿರಸಂಗಿ 06: ಭಜನೆ, ಕೀರ್ತನೆ ಹಾಗೂ ಪುರಾಣ-ಪ್ರವಚನ ಆಲಿಸುವದರಿಂದ ಜೀವನ ಪಾವನವಾಗುತ್ತದೆ ಎಂದು ತಾಪಂ ಸದಸ್ಯ ಮಹಾರಾಜ ಕಣವಿ ಹೇಳಿದರು.
ಸಮೀಪದ ಕಲ್ಲಾಪೂರ ಗ್ರಾಮದ ಕಲ್ಮೇಶ್ವರ ಜಿಣರ್ೋದ್ಧಾರ ಕಮೀಟಿ ವತಿಯಿಂದ ಕಲ್ಮೇಶ್ವರ ರಂಗ ಮಂದಿರದಲ್ಲಿ ಶಿವರಾತ್ರಿ ಅಂಗವಾಗಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಭಾರೀ ಭಜನಾ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜಾತಿ, ಮತ, ಪಂಥ ಎನ್ನದೆ ಪ್ರತಿಯೊಬ್ಬರ ಜೀವಸಬೇಕು. ಧರ್ಮದ ತಳಹದಿ ಮೇಲೆ ನಿಲ್ಲಬೇಕು ಎಂದರು. ಗುರುಪಾಧಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಟ್ರಸ್ಟ್ ಕಮೀಟಿ ಅಧ್ಯಕ್ಷ ಫಕೀರಪ್ಪ ಓಗಳಾಪೂರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಸದಸ್ಯ ಈರಯ್ಯ ಶಿವಪ್ಪಯ್ಯನಮಠ, ವಿ.ವಿ. ವೀರನಗೌಡ್ರ, ನಿಂಗಪ್ಪ ಭಾಗನ್ನವರ, ಹನುಮಥ ಪೂಜಾರ, ಬಸಪ್ಪ ಓಗಳಾಪೂರ, ಶಂಕ್ರೇಪ್ಪ ಚಿಕ್ಕುಂಬಿ, ಮಲ್ಲಿಕಾಜರ್ುನ ಗೊರವನಕೊಳ್ಳ, ಸಿದ್ದು ಜಂಗನ್ನವರ, ರುದ್ರಗೌಡ ಪಾಟೀಲ, ಮಾರುತಿ ಪೋತರಾಜ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ರಾಯಣ್ಣ ಕಣವಿ ನಿರೂಪಿಸಿದರು ವೀರಣ್ಣ ವೀರನಗೌಡ್ರ ವಂದಿಸಿದರು.