ಪುಸ್ತಕಗಳಿಂದ ಜೀವನ ಬೆಳಕು : ನದಾಫ್

ಲೋಕದರ್ಶನ ವರದಿ

ಬೆಳಗಾವಿ, 25 :  ವಿದ್ಯಾಥರ್ಿಗಳ ಜೀವನದಲ್ಲಿ ಪುಸ್ತಕಗಳು ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ, ಓದುವ ಅಭ್ಯಾಸವನ್ನು ಮಕ್ಕಳಿಗೆ ಬೆಳೆಸುವ ಅವಶ್ಯಕತೆ ಇದೆ. ಪುಸ್ತಕಗಳನ್ನು ಓದುವದರಿಂದ ಸಂತೋಷದ ಜೀವನ, ಪ್ರೀತಿ, ಸಹನೆ, ಹಾಗೂ ಜ್ಞಾನ ಪಡೆದುಕೊಳ್ಳಲು ಸಾಧ್ಯ ಎಂದು ಬೆಳಗಾವಿ ನಗರ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಏಫ್. ಬಿ. ನದಾಫ್ ಅಭಿಪ್ರಾಯಪಟ್ಟರು.

ನಗರದ ಭಾರತ ಕಾಲನಿ ಮಹಿಳಾ ಕಲ್ಯಾಣ ಸಂಸ್ಥೆಯ ಆವರಣದಲ್ಲಿ ದಿ ಎಸಿಯಾ ಫೌಂಡೇಶನ ಹಾನೂ ಕಾನ್ಫೀಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಟ್ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ  ಮಕ್ಕಳ ಜ್ಞಾನರ್ಾಜನೆಗಾಗಿ  ಜಿಲ್ಲೆಯ 30 ಸರಕಾರಿ/ ಅನುದಾನಿತ ಖಾಸಗಿ ಶಾಲೆಯ ಗ್ರಂಥಾಲಯಗಳಿಗೆ ವಿವಿಧ ವಿಷಯಗಳನ್ನೊಳಗೊಂಡ ಉಚಿತ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ  ಉಧ್ಘಾಟಕರಾಗಿ ಮಾತನಾಡಿರು.

ಓದಿನಲ್ಲಿ ಸಿಗುವ ಆನಂದ, ಅನುಭವ, ಒಳ್ಳೆಯ ವಿಚಾರ ಬೇರೆ ಯಾವ ತಂತ್ರಾಂಶದಿಂದ ಸಿಗಲು ಸಾಧ್ಯವಿಲ್ಲ ಹಾಗಾಗಿ ಇಂದಿನ ಮಕ್ಕಳಿಗೆ ಓದುವ ಅಭ್ಯಾಸ ಮಾಡಸಬೇಕು. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು. ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಓದಿನ ಅಭಿರುಚಿ ಕಡಿಮೆಯಾಗುತ್ತಿದೆ ಎಂದು ವಿಷಾಧಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೋ. ವನಹಳ್ಳಿ ಪುಸ್ತಕ ಸಂಗ್ರಹಿಸುವ ಹವ್ಯಾಸ ಬೆಳವಣಿಗೆಯಾಗಬೇಕು. ಮೌಲ್ಯಗಳನ್ನು ವ್ಯಕ್ತಿಗಳ ಮನಸ್ಸಿನಲ್ಲಿ ಆಳವಾಗಿ ಬಿತ್ತುವದರಲ್ಲಿ ಪುಸ್ತಕಗಳು ಮತ್ತು ಓದಿನ ಪಾತ್ರ ಬಹಳ ಮಹತ್ತರವಾದುದು ಡಾ|| ಎಪಿಜೆ ಅಬ್ದುಲ್ ಕಲಾಂ ಅವರ ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ಎಂಬ ಮಾತನ್ನೂ ನೆನಪಿಸಿದರು. ಕನರ್ಾಟಕ ಪಬ್ಲಿಕ್ ಶಾಲೆಯ ಪ್ರಭಾರಿ ಪ್ರಾಚಾರ್ಯರಾದ ಕಿರಣ ಚೌಗಲಾ ಸರ್ವರನ್ನು ಸ್ವಾಗತಿಸಿದರು. ಕವಿತಾ ಅಕ್ಕಿ ನಿರೂಪಿಸಿದರು. ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕ ಎಂ ಎಂ ಗಡಗಲಿ ವಂದಿಸಿದರು 30 ಶಾಲೆಯ ಮುಖ್ಯೋಫಾಧ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.