ಸರ್ಕಾರಿ ಶಾಲೆಯಲ್ಲಿ ಬದುಕಿನ ಶಿಕ್ಷಣ ಶಾಸಕ ಬಸವರಾಜ್ ಶಿವಣ್ಣನವರ
ಬ್ಯಾಡಗಿ 09: ಸರ್ಕಾರಿ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಬದುಕಲು ಆಂಗ್ಲ ಮಾಧ್ಯಮ ಶಾಲೆ, ಪೇಟೆ ಪಟ್ಟಣಗಳಲ್ಲಿ ಶಾಲೆಗಳಲ್ಲಿ ಸಿಗುವ ಸಾಧ್ಯವಿಲ್ಲ ಶಾಲೆ ಸರ್ವಜನಾಂಗದ. ಶಾಂತಿಯ ತೋಟ ಈ ಉದ್ಯಾನವನದಲ್ಲಿರುವ ಮಕ್ಕಳು ಮಂದಾರ ಪುಷ್ಪ ಗಳಾಗಬೇಕು ಕುಮ್ಮೂರು ಶಾಲೆಯು ಊರಿನ ನಾಗರಿಕರ ಹಾಗೂ ಶಾಸಕರ ಮತ್ತು ಗ್ರಾಮ ಪಂಚಾಯತಿಯ ಪ್ರೋತ್ಸಾಹದ ದಿಂದ ಉತ್ತಮ ಶಾಲೆಯಾಗಿ ರೂಪಗೊಂಡಿದೆ ಎಂದು ಹೇಳಿದರು.ತಾಲೂಕಿನ ಕುಮ್ಮೂರು ಗ್ರಾಮದ ಶ್ರೀ ಪಾಸಿ ಪ್ರಭಾವತಿ ಸರ್ಕಾರಿ. ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿಸಲಾದ ಭೋಜನಾಲೆಯನ್ನು ಉದ್ಘಾಟಿಸಿ ಮಾತನಾಡಿದರು ಈಗಾಗಲೇ ಗ್ರಾಮಕ್ಕೆ ತಿಮ್ಮಕ್ಕೇಶವ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಸಹಾಯವನ್ನು ಕೇಳಿದ್ದಾರೆ ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಎರಡರಿಂದ ಮೂರು ಕೋಟಿ ಹಣವನ್ನು ನೀಡುವುದಾಗಿ ಶಾಸಕರು ಗ್ರಾಮಸ್ಥರಿಗೆ ಭರವಸೆ ನೀಡಿದರು.ಈ ವೇಳೆ ತಾಲೂಕು ಕಾರ್ಯನಿರ್ವಾಧಿಕಾರಿ ಕೆ ಮಲ್ಲಿಕಾರ್ಜುನ ಕೆ ಎಂ ಮಾತನಾಡಿ ಪಾಸಿ ಪ್ರಭಾವತಿ ಶಾಲೆಯಲ್ಲಿ ಖಾಸಗಿ ಶಾಲೆ ಗಳಲ್ಲಿರುವಂತೆ ಕಲಿಕೆಗೆ ಪೂರಕವಾಗಿರುವ ವ್ಯವಸ್ಥೆಯನ್ನು ಸರ್ಕಾರಿ ಶಾಲೆಯಲ್ಲಿಯೂ ಮಾಡುವ ಕೆಲಸ ಇಲ್ಲಿನ ಊರಿನವರು ಹಾಗೂ ಗ್ರಾಮ ಪಂಚಾಯತಿಯವರದ್ದಾಗಿದೆ ಈಗ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ ರಾಜಕೀಯ. ಸಾಮಾಜಿಕವಾಗಿ ಉನ್ನತ ಹುದ್ದೆಯಲ್ಲಿರುವವರೆಲ್ಲರೂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಕಲಿತವರು ಆದ್ದರಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಉಳಿಸುವ ಕೆಲಸ ನಾವೇ ಮಾಡಬೇಕು ಎಂದು ಹೇಳಿದವರು.ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಎಂಎಫ್ ಹುಲ್ಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವನಗೌಡ ಪಾಟೀಲ್ ಗಣೇಶಪ್ಪ ತುಂಬಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಹಾವೇರಿ ಉಪಾಧ್ಯಕ್ಷ ನೀಲವ್ವ ಅರ್ಜನ್ ನಾಡನ್ ಗೌಡ ಪಾಟೀಲ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಭಜಂತ್ರಿ ಮತ್ತು ಶಾಲೆಯ ಎಲ್ಲಾ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಶಿಕ್ಷಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.