ಗ್ರಂಥಾಲಯಗಳು ಪ್ರತಿಯೊಬ್ಬರನ್ನು ಸುಸಂಸ್ಕೃತರನ್ನಾಗಿ ಮಾಡುತ್ತವೆ: ಉಬ್ಬಳಗುಂಡಿ

ಲೋಕದರ್ಶನ ವರದಿ

ಕೊಟ್ಟೂರು17 : ಗ್ರಂಥಾಲಯಗಳು ಜ್ಞಾನವನ್ನು ಉಚಿತವಾಗಿ ಪೂರೈಸುವ ಏಕೈಕ ನಿಧಿಗಳಾಗಿವೆ. ಆದುದರಿಂದ ಅದರ ಸದುಪಯೋಗ ಮಾಡಿಕೊಂಡು ಜ್ಞಾನದ ಮಾರ್ಗದಲ್ಲಿ ಸಾಗುತ್ತಾ ಪ್ರತಿಯೊಬ್ಬರು ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕೆಂದು ವ್ಯಕ್ತ ಪಡಿಸಿದರು.

ಕೊಟ್ಟೂರು ಪಟ್ಟಣದ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ದಿ.16ರಂದು ಕೊಟ್ಟೂರಿನ ಶಾಲಾ ಗ್ರಾಂಥಾಲಯ ಆಯೋಜಿಸಿದ 'ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ' ಕಾರ್ಯಕ್ರಮದಲ್ಲಿ 'ಜೀವನದಲ್ಲಿ ಗ್ರಂಥಾಲಯಗಳ ಮಹತ್ವ ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಂಥಾಲಯಗಳು ಶಿಸ್ತನ್ನು ಬೆಳೆಸುತ್ತದೆ, ಓದುವ ಹವ್ಯಾಸವನ್ನು ಹೆಚ್ಚಿಸುತ್ತದೆ, ಹಾಗೆಯೇ ಸಮಯದ ಸದುಪಯೋಗ, ಜ್ಞಾನದ ಅಭಿವೃದ್ಧಿ ಪಥದತ್ತ ಮತ್ತು ಪ್ರತಿಯೊಬ್ಬರನ್ನು ಗುರಿಯ ಕಡೆಗೆ ಕೊಂಡೋಯ್ಯುವಂಥಹ ಶಕ್ತಿ ಗ್ರಂಥಾಲಯಗಳಿಗಿವೆ ಆದುದರಿಂದ ಪ್ರತಿಯೊಬ್ಬರೂ ಗ್ರಂಥಾಲಯದ ಸದಸ್ಯತ್ವವನ್ನು ಪಡೆದುಕೊಂಡು ಅಲ್ಲಿ ಲಭ್ಯವಾಗುವ ಮತ್ತು ವಿಭಿನ್ನವಾದ ಭಾಷೆಯ ಪುಸ್ತಕಗಳನ್ನು ಹಾಗೂ ಪತ್ರಿಕೆಗಳನ್ನು ಸದುಪಯೋಗ ಮಾಡಿಕೊಂಡು ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕೆಂದು ಶಶಿಧರ ಉಬ್ಬಳಗುಂಡಿಯವರು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಶಕುಂತಲಾ & ಶ್ರೀ ಮದ್ದಾನಪ್ಪ ಇವರಿಗೆ 'ಉತ್ತಮ ಓದುಗ ಪ್ರಶಸ್ತಿ' ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಗ್ರಂಥಪಾಲಕರಾದ ಮಲ್ಲಪ್ಪ ಗುಡ್ಲಾನಾರ್ರವರು ಪ್ರಸ್ತಾವಿಕ ನೀತಿಗಳನ್ನು ನುಡಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರರಾದ ಶ್ರೀ ಮಂಜುನಾಥ್, ಕೊಟ್ರೇಶ, ಮಂಜುನಾಥ, ಉಜ್ಜಿನಿ ರುದ್ರಪ್ಪ, ಮುಂತಾದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾಥರ್ಿಗಳು ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕಿಯವರು ಸ್ವಾಗತಿಸಿ ವಂದಿಸಿದರು.