ರಾಜ್ಯ ಹೆದ್ದಾರಿ-29 ರಲ್ಲಿ ಹಾಕಿರುವ ಹೆಚ್ಚಿನ ಸಂಖ್ಯೆಯ ರಸ್ತೆ ಉಬ್ಬುಗಳು ತೆರುವು ಗೊಳಿಸಲು ಸರಕಾರಕ್ಕೆ ಪತ್ರ
Letter to the government to remove the large number of road bumps on State Highway-29
ಗಂಗಾವತಿ 07: ಗಂಗಾವತಿ-ನಗರದಿಂದ ಮುದಗಲ್ ವರೆಗೂ ರಾಜ್ಯ ಹೆದ್ದಾರಿ-29 ರಲ್ಲಿ ಹಾಕಿರುವ ಹೆಚ್ಚಿನ ಸಂಖ್ಯೆಯ ರಸ್ತೆ ಉಬ್ಬುಗಳು ತೆರುವು ಗೊಳಿಸಲು ಆಗ್ರಹಿಸಿ, ಕೊಪ್ಪಳ ತೆರುವು ಗೊಳಿಸಲು ಆಗ್ರಹಿಸಿ, ಮತ್ತು ಕೈಗಾರಿಕಾ ಸಂಸ್ಥೆಯಿಂದ ಸರಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದ ರಾಜ್ಯಪಾಲರು, ಮುಖ್ಯ ಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ,ಲೋಕೋಪಯೋಗಿ ಸಚಿವರು, ಪ್ರಧಾನ ಕಾರ್ಯದರ್ಶಿ,ಇಲಾಖೆಯ ಇತರ ಅಧಿಕಾರಿಗಳಿಗೆ ಸೇರಿದಂತೆ ಕೊಪ್ಪಳದ ಜಿಲ್ಲಾಧಿಕಾರಿ, ಆಧೀನ ಜಿಲ್ಲಾಧಿಕಾರಿ,ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಇಮೇಲ್ ಮೂಲಕ ದೂರನ್ನು ಸಲ್ಲಿಸಿದ್ದಾರೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗಲ್ಲದೆ, ಈ ಬಗ್ಗೆ ಕೇಂದ್ರದ ಸಚಿವರ ಮತ್ತು ಅಧಿಕಾರಿಗಳ ಗಮನ ಸೆಳೆದಿದ್ದಾರೆ.ರಸ್ತೆ ಉಬ್ಬುಗಳಿಂದಾಗಿ ಜನರ ಆರೋಗ್ಯದ ಮೇಲೆ ವಿಪರೀತ ತೊಂದರೆಯಾಗಿದ್ದು, ಪ್ರಯಾಣಿಕರು ಮತ್ತು ಚಾಲಕರು ಸೊಂಟ ಮತ್ತು ಕುತ್ತಿಗೆ ನೋವಿನಿಂದ ನರಳುತ್ತಿದ್ದಾರೆ, ರಸ್ತೆಗಳ ಉಬ್ಬುಗಳಿಂದ ಅಂಬ್ಯೂಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿದೆ ಎಂದು ದೂರಿನಲ್ಲಿ ಅವರು ವಿವರಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಅವೈಜ್ಞಾನಿಕ ರಸ್ತೆ ಉಬ್ಬುಗಳ ಬಗ್ಗೆಯೂ ಪ್ರಸ್ಥಾಪಿಸಿರುವ ಅವರು ಪ್ರಧಾನ ಮಂತ್ರಿ ಮತ್ತು ಹೆದ್ದಾರಿ ಸಚಿವರಿಗೆ ಇಮೇಲ್ ಸಂದೇಶದ ಮೂಲಕ ದೂರು ನೀಡಿದ್ದಾರೆ.ಇಂತಹ ಸಮಸ್ಯೆಗಳನ್ನು ಕಂಡು ಕಾಣದಂತೆ ಜನಪ್ರತಿನಿಧಿಗಳು ಸಂಚರಿಸುತ್ತಿರುವುದು ವಿಷಾಧಕರ ಎಂದು ಹೇರೂರ ಅಭಿಪ್ರಾಯ ಪಟ್ಟಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 