ಮನೋವಿಕಾರಗಳನ್ನು ದಹಿಸುವ ಶಿವರಾಗೋಣ -- ಶಿವಯೋಗಿ ಶ್ರೀಗಳು
ರಾಣೇಬೆನ್ನೂರ 17 : ಸುಂದರ ಬದುಕಿಗೆ ಆಧ್ಯಾತ್ಮ ದಿವ್ಯ ಓಷಧಿ. ಭಗವಂತನಲ್ಲಿ ಭಕ್ತಿ ಇರಿಸಿಕೊಳ್ಳುವುದು ಅಧ್ಯಾತ್ಮದ ಪ್ರಥಮ ಸೋಪಾನ. ಪಾಲಿಗೆ ಬಂದಿರುವ ಕಾಯಕವನ್ನು ಭಕ್ತಿಯಿಂದ ಮಾಡಿ ಫಲಾಫಲಗಳನ್ನು ನಿಷ್ಕಲ್ಮಶ ಭಾವದಿಂದ ದೈವಕ್ಕೆ ಸಮರ್ಿಸಬೇಕು. ಶಿವನು ಕಾಮನನ್ನು ದಹಿಸಿದಂತೆ ನಾವುಗಳು ಜ್ಞಾನವಾಹಿನಿಯ ಜ್ಞಾನದಿಂದ ಮನಸ್ಸಿನ ವಿಕಾರಗಳನ್ನು ದಹಿಸಿಕೊಂಡು ಬದುಕನ್ನು ರಂಗಪಂಚಮಿಯನ್ನಾಗಿಸಿಕೊಳ್ಳಲು ಮುಂದಾಗಬೇಕು ಎಂದು ಗುಡ್ಡದ ಆನ್ವೆರಿಯ. ಮ. ನಿ.ಪ್ರ. ಶಿವಯೋಗಿ ಮಹಾಸ್ವಾಮಿಗಳು ನುಡಿದರು ಇವರು ಹೊನ್ನಾಳಿ ಚೆನ್ನಮಲ್ಲಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ಶ್ರೀ ಚೆನ್ನೇಶ್ವರ ಮಠದಲ್ಲಿ ಆಯೋಜಿಸಿದ್ದ 290ನೇ ಹೋಳಿ ಹುಣ್ಣಿಮೆಯ ಜ್ಞಾನವಾಹಿನಿ ಮಾಸಿಕ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನೇತೃತ್ವದಲ್ಲಿದ್ದ ಅವರಗೊಳ್ಳ- ರಾಣೇಬೆನ್ನೂರ ಪುರವರ್ಗ ಹಿರೇಮಠದ ಓಂಕಾರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಆಧ್ಯಾತ್ಮಿಕ ಮತ್ತು ಧರ್ಮ ಜಾಗೃತಿ ವಾತಾವರಣ ನಿರ್ಮಿಸುವಲ್ಲಿ ಜ್ಞಾನ ವಾಹಿನಿಯು ಮಹತ್ತರ ಪಾತ್ರ ವಹಿಸಿದೆ. ಭಕ್ತಿಯ ಜೊತೆಗೆ ಆರೋಗ್ಯ ಜೀವನಕ್ಕೂ ಕೂಡ ಇಂದಿನ ಜ್ಞಾನ ವಾಹಿನಿ ಸಾಕ್ಷಿಯಾಗಿದೆ. ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ನಾವೆಲ್ಲರೂ ದೇಶದ ಪ್ರಧಾನಿಗಳ ಆಶಯಕ್ಕೆ ಕೈ ಜೋಡಿಸ ಬೇಕಾದ ಬಹು ಅಗತ್ಯವಿದೆ ಎಂದರು.
" ಕ್ಷಯ ಮುಕ್ತ ಭಾರತ ಅಭಿಯಾನ," ಕ್ಷಯ ರೋಗ ಜಾಗೃತಿ ಮತ್ತು ಪೋಷ್ಟರ್ಗಳ ಪ್ರದರ್ಶನ ಕಾರ್ಯಕ್ರಮವನ್ನುಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಡಾ ಽಽ ರಾಜೇಶ ಸುರಗಿಹಳ್ಳಿ, ಉದ್ಘಾಟಿಸಿದರು ಉದ್ಘಾಟಿಸಿ ಚಾಲನೆ ನೀಡಿದರು.
ಮಹಾವೇದಿಕೆಯಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾಽಽರಾಜೇಶ್ವರಿ ಕದರಮಂಡಲಗಿ, ಶ್ರೀಮಠದ ಕಾರ್ಯದರ್ಶಿ ಅಮೃತಗೌಡ ಹಿರೇಮಠ,ಕ.ಸಾ.ಪ. ಗೌರವ ಕಾರ್ಯದರ್ಶಿ ಜಗದೀಶ ಮಳಿಮಠ, ಜಿಲ್ಲಾ ನಿಯಂತ್ರಣಾಧಿಕಾರಿ ಡಾಽಽ ನಿಲೇಶ ಎಂ. ಎನ್., ಆಯುಷ್ಯ ವೈದ್ಯಾಧಿಕಾರಿ
ಡಾಽಽ ಬಾಬಾಸಾಹೇಬ ಜಂಗ್ಲೆಪ್ಪನವರ, ಕಾರ್ಯದರ್ಶಿ ಅಮೃತ ಗೌಡ ಹಿರೇಮಠ, ಫಕೀರಯ್ಯ ಬಸ್ಮಾಂಗಿ ಮಠ, ಸೋಮಲಿಂಗಪ್ಪ ಜ್ಯೋತಿ, ಶಿವಯೋಗಿ ಹಿರೇಮಠ, ವಿಜಯಲಕ್ಷ್ಮಿ ಮಠದ, ವಿದ್ಯಾವತಿ ಮಳೆ ಮಠ, ಸುನಂದಮ್ಮ ತಿಳುವಳ್ಳಿ, ಗಾಯಿತ್ರಮ್ಮ ಕುರುವತ್ತಿ, ಭಾಗ್ಯಮ್ಮ ಗುಂಡಗಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.