ಲೋಕದರ್ಶನ ವರದಿ
ಬೆಳಗಾವಿ 31: ದಿ.28ರಂದು ಗೋಮಟೇಶ ವಿದ್ಯಾಪೀಠದಲ್ಲಿ ಭಾರತೀಯ ಜನತಾ ಪಾಟರ್ಿಯ ಬೆಳಗಾವಿಯ ಗ್ರಾಮೀಣ ಮಂಡಳ ಕಾರ್ಯಕಾರಿಣಿ ಸಭೆ ಜರುಗಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾಟರ್ಿಯು ಅಧಿಕಾರಕ್ಕೆ ಬರುವುದರೊಂದಿಗೆ ಮತ್ತೆ ನರೇಂದ್ರ ಮೋದಿಯವರು ಎರಡನೇಯ ಅವಧಿಗೆ ಪ್ರಧಾನ ಮಂತ್ರಿಯಾಗಲು ಪ್ರಯತ್ನಿಸುವ ಸಲುವಾಗಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ ಬೂತ ಮಟ್ಟದ ಕಾರ್ಯಕರ್ತರಿಗೆ ವಿಶéೇಷ ಸಲಹೆ ಸೂಚನೆಗಳನ್ನು ನೀಡಲಾಯಿತು. ನಿಷ್ಕ್ರೀಯಗೊಂಡಿರುವ ಕಾರ್ಯಕರ್ತರ ಪಡೆಯನ್ನು ಚುರುಕುಗೊಳಿಸುವ ಸಲುವಾಗಿ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನೀಡಿರುವ ಸಲಹೆ ಸೂಚನೆಗಳನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಸಂಜಯ ಬಿ ಪಾಟೀಲ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಭಾಜಪ ಸಕರ್ಾರವು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ನಾವೆಲ್ಲರೂ ಶ್ರಮಿಸೋಣವೆಂದು ಕಾರ್ಯಕರ್ತರಿಗೆ ಕರೇನಿಡಿದರು. ಪ್ರಾರಂಭದಲ್ಲಿ ಸಂಜಯ ಪಾಟೀಲ ಕುದ್ರೆಮನಿ ಅವರು ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ಮಹೇಶ ಮೋಹಿತೆ ಇವರು ಪ್ರಾಸ್ತವಿಕ ಮಾತುಗಳನ್ನಾಡಿದರು, ಕಾರ್ಯಕ್ರಮ ನಿರೂಪಣೆ ಮಾಡುವುದರೊಂದಿಗೆ ವೀರಭದ್ರಯ್ಯಾ ಪೂಜೇರಿ ಇವರು ಕೊನೆಯಲ್ಲಿ ವಂದಿಸಿದರು.
ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ಮಹೇಶ ಮೋಹಿತೆ, ರಾಜ್ಯ ಕಾರ್ಯಕಾರಿಣೀ ಸದಸ್ಯ ಯುವ ಮೋಚರ್ಾ ಯುವರಾಜ ಜಾಧವ, ಮಂಡಳ ಪ್ರಧಾನ ಕಾರ್ಯದಶರ್ಿಗಳಾದ ಪ್ರವೀಣ ಪಾಟೀಲ, ರವಿ ಕೊಟಬಾಗಿ, ಹೇಮಂತ ಪಾಟೀಲ, ಯಲ್ಲೇಶ ಕೋಲಕಾರ, ಯುವ ಮೋಚರ್ಾ ಅಧ್ಯಕ್ಷರಾದ ಚೇತನ ಪಾಟೀಲ, ಕಪೀಲ ತ್ಯಾಗಿ, ವೀರಭದ್ರಯ್ಯಾ ಪೂಜೇರ, ಡಾ:ಯಲ್ಲಪ್ಪಾ ಪಾಟೀಲ, ಮಂಜು ಧರೆಣ್ಣವರ, ಮಲ್ಲಪ್ಪಾ ಕಾಂಬಳೆ, ವಸಂತ ಪಾಟೀಲ, ಪವನ ದೇಸಾಯಿ, ಸಂಜಯ ಪಾಟೀಲ ಕುದ್ರೆಮನಿ, ಸಾಗರ ಶೇರೆಕರ, ಭುಜಂಗ ಸಾಲಗುಡೆ, ಪ್ರಭಾಕರ ವಾಘಮಾರೆ, ಪುಂಡಲಿಕ ಮುರಾರಿ, ಅಭಯ ಅವಲಕ್ಕಿ ಮಂಡಲ ಕಾರ್ಯಕರ್ತರು ಪಾಲ್ಗೊಂಡಿದ್ದರು.