ಶಿಕ್ಷಕರು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಲ್ಲಿ ಓದಿಸಿ ಮಾದರಿಯಾಗಲಿ'

ಶೇಡಬಾಳ  08: ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಓದಿಸುವುದಕ್ಕಿಂತ ಅವರು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಲ್ಲಿ ಓದಿಸಿ ಇತರರಿಗೆ ಮಾದರಿಯಾಗಬೇಕೆಂದು ಕವಲಗುಡ್ಡದ ಸಿದ್ದಾಶ್ರಮದ ಅಮರೇಶ್ವರ ಮಹಾರಾಜರು ಅಭಿಪ್ರಾಯಪಟ್ಟರು.

  ಅವರು ರವಿವಾರ ದಿ. 6 ರಂದು ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದಲ್ಲಿ ಕನರ್ಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಬೆಂಗಳೂರು, ರಾಜ್ಯ ಸರಕಾರಿ ನೌಕರರ ಸಂಘ ತಾಲೂಕಾ ಘಟಕ ಕಾಗವಾಡ ಹಾಗೂ ಗಡಿನಾಡು ಸ್ನೇಹ ಸಂಗಮ ಸಾಹಿತ್ಯ ಹಾಗೂ ಸಂಸ್ಕೃತಿಕ ವೇದಿಕೆ ಐನಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಡಿನಾಡು ಕನ್ನಡೆ ನುಡಿ ಸಿರಿ ಸಂಬ್ರಮ ಹಾಗೂ ಗೌರವ ಪುರಸ್ಕಾರ ಪ್ರದಾನ ಸಮಾರಂಬವನ್ನುದ್ದೇಶಿಸಿ ಅವರು ಮಾತನಾಡಿದರು.    

ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳುಹಿಸಿ ಬೇರೆಯವರ ಮಕ್ಕಳನ್ನು ಸಕರ್ಾರಿ ಶಾಲೆಗೆ ಕರೆದರೆ ಪಾಲಕರು ತಮ್ಮ ಮೇಲಿನ ನಂಬಿಕೆ ಕಡಿಮಯಾಗುತ್ತದೆ. ತಮ್ಮ ಮೇಲೆ ಜನರ ವಿಶ್ವಾಸಬರುವಂತೆ ಕಾರ್ಯನರ್ಿಹಿಸುವ  ಬಯಕೆ ನಮ್ಮದಾಗಿದೆ ಎಂದು ಹೇಳಿದ ಅವರು ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ತಿಳಿಸಿಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ನಾಡಿನ ಪರಂಪರೆಯನ್ನು ಕಲೆಯ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟರೆ ಅವರಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಮನುಷ್ಯನಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾತೃಭಾಷೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕರಗಳು ಪರಿಣಾಮಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. 

        ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕನ್ನಡ ನಾಡು, ನುಡಿ, ಗಡಿಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಇಟ್ಟುಕೊಳ್ಳಬೇಕು. ಪೂಜ್ಯರು ಹೇಳಿರುವ ಹಾಗೆ ಶಿಕ್ಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳುಹಿಸಿ ಬೇರೆಯವರ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವಂತೆ ಹೇಳುವುದು ಎಷ್ಟು ಸರಿ. ತಮ್ಮ ಮಕ್ಕಳನ್ನೂ ಸರಕಾರಿ ಶಾಲೆಗೆ ಕಳುಹಿಸಿ ಸಮಾಜದಲ್ಲಿ ಇತರರಿಗೆ ಮಾದರಿಯಾಗುವಂತೆ ಸಲಹೆ ನೀಡಿದರು. 

  ಮುಖ್ಯ ಅತಿಥಿಗಳಾಗಿ ರಾಜ್ಯ ಇಂಜನೀಯರುಗಳ ಸಂಘದ ಉಪಾಧ್ಯಕ್ಷ ಅರುಣಕುಮಾರ ಯಲಗುದ್ರಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಮಹಾದೇವಿ ಮಾಕಣ್ಣವರ, ಸಂಜಯ ಕೋಳಿ, ಗೌಡಪ್ಪ ಸಡ್ಡಿ, ಎಲ್.ಎಸ್. ಚೌರಿ,ಜಗದೀಶ ಪಾಟೀಲ, ವಿನೋದ ಬರಗಾಲೆ, ಜಯಕುಮಾರ ಹೆಬಳ್ಳಿ, ಬಸವರಾಜ ಬಾಗೆಣ್ಣವರ, ಎಸ್,ಎನ್.ಬೆಳಗಾವಿ, ಎಂ.ಜಿ.ಸಂಕಪಾಳ, ಎಂ.ಟಿ.ತಳವಾರ, ಗುರುರಾಜ ಮಡಿವಾಳರ ಸೇರಿದಂತೆ ಅನೇಕರು ಇದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ ಸಮಾಜ ಸೇವಕರಿಗೆ  ಕರುನಾಡು ಸೇವಾ ರತ್ನ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಇದೇ ವೇಳೆ ಶಿಕ್ಷಕರು ರಕ್ತದಾನವನ್ನು ಮಾಡುವ ಮೂಲಕ ಮಾನವೀಯತೆಯನ್ನು ಮೆರೆದರು.

  ಸಂಜು ಕೋಳಿ ಸರ್ವರನ್ನು ಸ್ವಾಗತಿಸಿ ವಂದಿಸಿದರು.