ಮಹಾತ್ಮರ ಆದರ್ಶಗಳು ಜೀವನದ ಸೂತ್ರವಾಗಲಿ: ಪ್ರಸಾದ

ಧಾರವಾಡ 03: ಭಾರತ ದೇಶ ಹಲವಾರು ಮಹಾತ್ಮರನ್ನು ದಾರ್ಶನಿಕರನ್ನು ನೀಡಿದ ಭೂಮಿ ಅವರ ಆದರ್ಶಗಳು ನಮಗೆಲ್ಲಾ ದಾರಿ ದೀಪ ಅವರ ಕೊಡಗೆಗಳನ್ನು ನೆನೆಯದಿದ್ದರೆ ನಾವು ಅವರ ವಿಚಾರದಾರೆಗಳಿಗೆ ಅಪಮಾನ ಮಾಡಿದಂತೆ ಎಂದು ಜೆ.ಎಸ್.ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.

ಜೆ.ಎಸ್.ಎಸ್ ಪದವಿ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿಯವರ ಮೂರ್ತಿಯನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.

ಇಂದಿನ ಯುವ ಸಮೂಹ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರ ಎಂದು ತಿಳಿಯಬಾರದು, ನಮ್ಮ ಹಕ್ಕಿನ ಬಗ್ಗೆ ಹೋರಾಡುವ ನಾವು ಕರ್ತವ್ಯಗ ಬಗ್ಗೆಯು ನಿಗಾ ವಹಿಸಬೇಕು. ಮಹನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸೋಣ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಜಿ. ಕೃಷ್ಣಮೂರ್ತಿ  ಮಾತನಾಡಿ ಜೆ.ಎಸ್.ಎಸ್ ಕಾಲೇಜಿನಲ್ಲಿ ಗಾಂಧೀಜಿಯವರ ಮೂತಿ ಅನಾವರಣಗೊಮಡಿರುವುದು ಅತ್ಯಂತ ಸಂತೋಷದ ವಿಚಾರ. ಅವರ ದರ್ಶನದಿಂದ ವಿದ್ಯಾಥರ್ಿಗಳಿಗೆ ಅವರ ತ್ಯಾಗ, ಅಹಿಂಸೆ, ಸತ್ಯದ ಸೂತ್ರಗಳ ಅರಿವಾಗಲಿ. ಮಹಾತ್ಮಾ ಗಾಂಧೀಜಿಯವರ ಮೂತರ್ಿಯನ್ನು ಕಾಲೇಜಿಗೆ ಕಾಣಿಕೆಯಾಗಿ ನೀಡಿರುವ ಡಾ. ಆರ್.ವ್ಹಿ ಚಿತಗುಪ್ಪಿಯವರ ಕಾರ್ಯ ಇತರ ಪ್ರಾಧ್ಯಾಪಕರಿಗೆ ಮಾದರಿಯಾಗಲಿ ಎಂದರು. 

ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಮಹಾವೀರ ಉಪಾದ್ಯೆ, ಆರ್.ವಿ ಚಿತಗುಪ್ಪಿ ಹಾಗೂ ಇತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು.