ಬೆಳಗಾವಿ, 19: ಕಲೆ, ಸಾಹಿತ್ಯ, ನಾಟಕಗಳಿಂದ ಲಕ್ಷಾಂತರ ಕಲಾವಿದರೂ ಬದುಕು ರೂಪಿಸಿಕೊಂಡಿದ್ದಾರೆ. ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿದೆ. ರಂಗ ಕಲೆಯ ಪಾದಾರ್ಪಣೆ ಮೂಲಕ ಸಾಕಷ್ಟೂ ಕಲಾವಿದರೂ ಚಿತ್ರಗಳಲ್ಲಿ ಮಿಂಚಿದ್ದಾರೆ ಎಂದು ಗೋವಾದ ಥಿಯೇಟರ್ ಬಿಲಾಂಗಿಂಗ್ ತಂಡದ ನಿರ್ಮಾ ಪಕಿ ಒಶೋ ಜ್ಯೊ
ಹೇಳಿದರು.
ಇಲ್ಲಿನ ಸದಾಶಿವನಗರದ ಚಿಂದೊಡಿ ಲೀಲಾ ರಂಗಮಂದಿರಲ್ಲಿ ಮಂಗಳವಾರ 19 ರಂದು ಯುನೈಟೆಡ್ ಸೋಶಿಯಲ್ ವೆಲ್ ಫೇರ್ ಅಸೋಸಿಯೇಷನ್, ರೋಟರಿ ಕ್ಲಬ್ ಮಿಡ್ ಟೌನ್, ಕೆ.ಎಲ್.ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ, , ಹಾಗೂ ವಿನುತಾ ಶ್ರೇಯ ಪ್ರಕಾಶನ ವತಿಯಿಂದ ಆಯೋಜಿಸಲಾಗಿದ್ದ, ಎರಡು ದಿನ ಜರಗಲಿರುವ ಭವ್ಯ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ,
ತಂತ್ರಜ್ಞಾನದಲ್ಲಿ ಸಿಲುಕಿ ನಾಟಕ, ಕಲೆಗಳು ನಶಿಸುತ್ತಿವೆ ಇವುಗಳಿಗೆ ಜೀವ ತುಂಬುವ ಕಾರ್ಯವಾಗಬೇಕಿದೆ. ಹಿರಿಯ ಕಲಾವಿದರ ಶ್ರಮದಿಂದ ರಂಗ ಕಲೆ, ನಾಟಕ ಜೀವಂತಕ್ಕೆ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಡಾ. ಚೌಗಲೆ ಪ್ರಾಸ್ತಾವಿಕ ಮತ್ತು ಸ್ವಾಗತಿಸಿದರು. ಡಾ.ಡಿ.ಎಸ್.ಚೌಗಲೆ, ಬಾಸೂರು ತಿಪ್ಪೇಸ್ವಾಮಿ,ಅಶೋಕ ಮಳಗಲಿ ಮತ್ತು ಕೀರ್ತಿ ಸುರಂಜನ್, ಹಾಗೂ ಇತರರು ಇದ್ದರು. ಗಿರೀಶ ಕಾರ್ನಾ ಡರ ತಂಡದಿಂದ ರಾಕ್ಷಸ- ತಂಗಡಿ ನಾಟಕ ಪ್ರಯೋಗವಾಯಿತು.