ಧಾರವಾಡ 19: ಬಾಲಮಂದಿರದಲ್ಲಿರುವ ಮಕ್ಕಳು ಭಗವಂತನ ಮಕ್ಕಳು. ಬಾಲಮಂದಿರದ ಮಕ್ಕಳು ಅನಾಥರೆಂದು ಭಾವಿಸಬಾರದು. ಸಕರ್ಾರ ಹಾಗೂ ಇಲಾಖೆಗಳು ಅನೇಕ ಯೋಜನೆ ಮೂಲಕ ಪ್ರತಿ ಹೆಜ್ಜೆಗೂ ಮಕ್ಕಳ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿವೆ. ಬಾಲಮಂದಿರದ ಪ್ರತಿಯೊಂದು ಮಗುವಿಗೂ ಗಮನ ನೀಡುವುದು ಮುಖ್ಯ. ಅಗತ್ಯಕ್ಕೆ ತಕ್ಕಂತೆ ಇಲಾಖೆಯು ಸ್ಪಂದಿಸಿ ಸಿಬ್ಬಂದಿಯವರು ತಾಯ್ತತನದ ಪ್ರೀತಿ, ವಿಶ್ವಾಸ ಕೊಡಬೇಕು. ಮಕ್ಕಳಿಗೆ ನೀವೆ ಪೋಷಕರು, ಬಾಲಮಂದಿರದ ಪ್ರತಿಯೊಂದು ಮಗುವಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ, ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಎಲ್ಲ ಸಿಬ್ಬಂದಿಯವರದ್ದಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ.ಕೆ.ಭೂತೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನರ್ಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡದ ಬಾಲಮಂದಿರಗಳು, ತೆರೆದ ತಂಗುದಾಣಗಳು ಹಾಗೂ ಹುಬ್ಬಳ್ಳಿ-ಧಾರವಾಡ ವೀಕ್ಷಣಾಲಯಗಳ ಸಂಯುಕ್ತಾಶ್ರಯದಲ್ಲಿ 2018-19 ನೇ ಸಾಲಿನ ಮಕ್ಕಳ ದಿನಾಚರಣೆಯ ಅಂಗವಾಗಿ ಇತಿಚೆಗೆ (ನಿನ್ನೆ ಸಂಜೆ) ಧಾರವಾಡದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ "ಚಿಣ್ಣರೊಂದಿಗೆ ಮುಸ್ಸಂಜೆ" ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ ಅವರು ಮಾತನಾಡಿ, ಬಾಲಮಂದಿರದ ಎಲ್ಲ ಸಿಬ್ಬಂದಿಗಳು ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಿದ್ದು, ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿ ಧನ್ಯವಾದಗಳನ್ನು ತಿಳಿಸಿದರು. ಬಾಲಮಂದಿರದ ಮಕ್ಕಳು ಮುಂದೊಂದು ದಿನ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸವ ಸಾಧನೆ ಮಾಡಲು ಹೇಳಿದರು.
ಖ್ಯಾತ ನಿಸರ್ಗ ಚಿಕಿತ್ಸಕರು ಹಾಗೂ ಗುರುಬಸವ ಮಹಾಮನೆ, ಪ್ರವಚನಾಕಾರ ಬಸವಾನಂದ ಸ್ವಾಮಿಜೀಯವರು ಮಾತನಾಡಿ, ಬಾಲಮಂದಿರದ ಮಕ್ಕಳು ಭಾಗ್ಯವಂತರು. ಸಕರ್ಾರ, ನ್ಯಾಯಾಲಯ ಹಾಗೂ ಇಲಾಖೆ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಮಕ್ಕಳು ಸಕಾರಾತ್ಮಕ ಗುಣಗಳನ್ನು ಹೊಂದಿದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದು ಆಶರ್ಿವಚನ ನೀಡಿದರು. ಮಕ್ಕಳು ಆರೋಗ್ಯವಾಗಿದ್ದು, ಸಧೃಢರಾಗಿ, ಯಾವುದೇ ಖಾಯಿಲೆಗಳು ಬಾರದಂತೆ ಆಟೋಟಗಳಲ್ಲಿ ಭಾಗವಹಿಸಬೇಕು. ದೇವರೂ ಸೇವೆಯನ್ನು ಬಯಸುವುದು ಅನಾಥ, ಅಂಗವಿಕಲ ಮಕ್ಕಳ ಸೇವೆಯ ಮಾಡುವುದರ ಮೂಲಕ ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಅವರು ಮಾತನಾಡಿ, "ಬಾಲಮಂದಿರದ ಮಕ್ಕಳು ಮನಸ್ಸು ಮಾಡಿದರೇ ಎಂತಹ ಗುರಿಯನ್ನಾಗಿದರೂ ಸಾಧಿಸಬಹುದು". ಮಕ್ಕಳು ಕಾಯಕದ ಮೂಲಕ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಜಾನಪದತಜ್ಞ ಡಾ. ಶ್ರೀಶೈಲ ಹುದ್ದಾರ ಮಾತನಾಡಿ, ಬಾಲಮಂದಿರದಲ್ಲಿರುವ ಮಕ್ಕಳು ಅನಾಥರಲ್ಲ, ಭಾಗ್ಯವಂತರು ಈ ಮಕ್ಕಳ ಪ್ರತಿಭೆಗಳು ಕಾವ್ಯ-ಕಮ್ಮಟ ಎಂಬ ಕಥೆ, ಕವನಗಳ ಪುಸ್ತಕದಲ್ಲಿ ಪ್ರಕಟವಾಗಿವೆ. ಸಮಾಜದಲ್ಲಿನ ಕೆಟ್ಟತನವನ್ನು ಹೋಗಲಾಡಿಸುವ ಜವಾಬ್ದಾರಿ ಮಕ್ಕಳಲ್ಲಿ ಬರಬೇಕು. ದೇಶ ಕಟ್ಟುವ ಹಾಡುಗಳನ್ನು ಮಕ್ಕಳಿಗೆ ಕಲಿಸಬೇಕು, ಹಾಡಿಸಬೇಕು, ಅಥರ್ೈಸಬೇಕು ಹಾಗೂ ಅಳವಡಿಸಿಕೊಳ್ಳುವಂತೆ ಅವರನ್ನು ಪ್ರೇರೆಪಿಸಬೇಕು ಎಂದು ಹೇಳಿದರು.
ಅಧ್ಯಕತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿದರ್ೇಶಕ ಬಸವರಾಜ ವರವಟ್ಟಿ ಮಾತನಾಡಿ, ಬಾಲಮಂದಿರದಲ್ಲಿರುವ ಸಿಬ್ಬಂದಿ ಮಕ್ಕಳ ತಂದೆ, ತಾಯಿಗಳಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮಕ್ಕಳಲ್ಲಿನ ಅಪೌಷ್ಠಕತೆಯನ್ನು ಹೋಗಲಾಡಿಸಲು ಸಕರ್ಾರದಿಂದ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅವುಗಳೆಲ್ಲವೂ ಕಾರ್ಯರೂಪದಲ್ಲಿ ತರಲಾಗುತ್ತಿದೆ. ಗಭರ್ಿಣಿ, ಬಾಣಯಂತಿಯರಿಗೆ "ಪುಷ್ಠ್ಠಿ" ಎಂಬ ಪೌಷ್ಠಿಕ ಆಹಾರವನ್ನು ನೀಡುವುದರ ಮೂಲಕ ಮಗುವಿನ ಅಪೌಷ್ಠಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿಯೂ ಸಹ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಮನೋವಿಕಲ ಬಾಲಕಿಯರ ಸಕರ್ಾರಿ ಬಾಲಮಂದಿರ ಅಧೀಕ್ಷಕ ದೀಪಾ ಜಾವೂರ ವಂದಿಸಿದರು.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ರಕ್ಷಣಾಧಿಕಾರಿ ನಿಂಗಪ್ಪ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು.