ಶಿರಹಟ್ಟಿ 06: ಈಗಾಗಲೇ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದ್ದು, ಜನರೇ ಗುಳೇ ಹೋಗದಂತೆ ನೋಡಿಕೊಂಡು, ಅವರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಒದಗಿಸಬೇಕು. ತಾಲೂಕಿನ ಎಲ್ಲ ಅಧಿಕಾರಿಗಳು ಜನರ ಕೆಲಸಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಬೇಕು ಎಂದು ಶಾಸಕ ಲಮಾಣಿ ಕರೆ ನೀಡಿದರು.
ಅವರು ತಾಲೂಕು ಪಂಚಾಯತ್ನ ಸಾಮಥ್ರ್ಯ ಸೌಧದಲ್ಲಿ ಮಂಗಳವಾರ ಬರ ನಿರ್ವಹಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಜನ-ಜಾನುವಾರಿಗಳಿಗೆ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ತಾಲೂಕಿನ 28 ಗ್ರಾಮ ಪಂಚಾಯತಿಗಳಲ್ಲಿ ಮೇವು ಸಂಗ್ರಹಣ ಕೇಂದ್ರವನ್ನು ತೆರೆಯಲಾಗುವುದು. ರೈತರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಅಧಿಕಾರಿಗಳು ನಿಗಾವಹಿಸಬೇಕು.
ಜಿಲ್ಲಾ ಯೋಜನೆ ನಿದರ್ೇಶಕ ಟಿ. ದಿನೇಶ ಅವರು ಮಾತನಾಡುತ್ತಾ, ತಾಲೂಕಿನಲ್ಲಿ ಜನರು ಬರಗಾಲದಿಂದ ತತ್ತರಿಸಿದ್ದು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಒಂದು ಸಮುದಾಯದ ಕೆಲಸ ನಡೆಯುತ್ತಾ ಇರಬೇಕು. ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಲ್ಲಿ ಎಷ್ಟೇ ಜನರು ಕೆಲಸ ಮಾಡಲು ಬಂದರೂ ಕೆಲಸ ಕೊಡಬೇಕು ಎಂದು ಹೇಳಿದರು.
ತಾಲೂಕಾ ಮಟ್ಟದಟ್ಟದ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆಗಳ ಕಂಡುಬಂದಲ್ಲಿ ಜನರು ತಾಲೂಕಿನ ತಾಲೂಕು ಪಂಚಾಯತ್ ಕಾಯರ್ಾಲಯ, ತಹಶೀಲ್ದಾರ ಕಚೇರಿ ಹಾಗೂ ತಾಲೂಕು ನೀರು ಸರಬರಾಜು ಇಲಾಖೆಗಳಲ್ಲಿ ದೂರು ಸಲ್ಲಿಸಬಹುದು ಎಂದರು.
ಬನ್ನಿಕೊಪ್ಪ, ಬೆಳ್ಳಟ್ಟಿ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ನೀರು ಸರಬರಾಜು ಇಲಾಖೆಯ ಎಇಇ ಬಾಬು ಪವಾರರವರಿಗೆೆ ಎಷ್ಟು ಬಾರಿ ಹೇಳಿದರು ನಮಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ನಾನು ಕೆಲವು ಕಾಮಗಾರಿಗಳನ್ನು ಮಾಡಲು ಹೇಳಿದ್ದೆ ಅದರಲ್ಲಿ ಯಾವ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿಗಳನ್ನು ಜಿಲ್ಲಾ ಪಂಚಾಯತಿ ಸದಸ್ಯೆ ರೇಖಾ ಅಳವಂಡಿ ತರಾಟೆಗೆ ತೆಗೆದುಕೊಂಡರು.
ಬನ್ನಿಕೊಪ್ಪ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನೀರು ಸರಬರಾಜ ಇಲಾಖೆಯ ಎಇಇ ಅಧಿಕಾರಿಗಳಿಗೆ ಪೋನ್ ಮುಖಾಂತರ ಹೇಳಿದರೆ ಈಗ ಬರುತ್ತೇನೆ ಅಂತ ಹೇಳಿ ನಾನು ಬನ್ನಿಕೊಪ್ಪದಲ್ಲಿ 4 ಗಂಟೆಗಳ ಕಾಲ ಕಾದರೂ ಇವರು ಬರಲಿಲ್ಲ ಹೀಗಾದರೆ ಜನಪ್ರತಿಗಳು ಮಾತಿಗೆ ಬೆಲೆಯೇ ಇಲ್ಲವೇ ಎಂದು ಯೋಜನಾ ನಿದರ್ೇಶಕ ಟಿ ದಿನೇಶ ಅವರಿಗೆ ಪ್ರಶ್ನಿಸಿದರು.
ತಾಲೂಕಿನ ಎಲ್ಲ ಗ್ರಾಮದಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇವೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ದೇವಕ್ಕ ಲಮಾಣಿ, ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಉಪಾಧ್ಯಕ್ಷೆ ಪವಿತ್ರ ಶಂಕಿನದಾಸರ, ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ, ಲಕ್ಷ್ಮೇಶ್ವರ ತಹಶೀಲ್ದಾರ ಸಹದೇವ ಯರಗುಪ್ಪಿ, ತಾಪಂ ಇಓ ಆರ್.ವಾಯ್.ಗುರಿಕಾರ,ತಿಪ್ಪಣ್ಣ ಕೊಂಚಿಗೇರಿ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.