ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಕ್ರಿಯಾಶೀಲರಾಗಲಿ: ಮೂಗನೂರಮಠ
ಬಾಗಲಕೋಟ 26: ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನು ಬಿತ್ತುವ ಮತ್ತು ಪೋಷಿಸುವ ವಿಶೇಷ ಜವಾಬ್ದಾರಿ ನಮ್ಮ ಮೇಲಿದೆ ನಾವು ವಿದ್ಯಾರ್ಥಿಗಳನ್ನು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಮೂಲಕ ರಾಷ್ಟ್ರದ ಜವಾಬ್ದಾರಿಯುತ ನಾಗರಿಕರನ್ನಾಗಿಸುವ ಹೊಣೆ ನಮ್ಮದು ಎಂದು ಪ್ರಾಚಾರ್ಯ ಎಸ.ಆರ್.ಮೂಗನೂರಮಠ ಹೇಳಿದರು.
ನಗರದ ಬಿವ್ಹಿವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ನಡೆದ 76ನೇ ಗಣರಾಜ್ಯೋತ್ಸವದಲ್ಲಿ ದ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು ನಮ್ಮ ದೇಶದ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಕನಸು ಕಂಡ ದೇಶದ ಹಿರಿಯರ ಜ್ಞಾನದ ಪ್ರತಿನಿಧಿತ್ವವನ್ನು ಬಿಂಬಿಸುವ ಆಧಾರ ಗ್ರಂಥವೇ ಸಂವಿಧಾನವಾಗಿದ್ದು
ಗಣರಾಜ್ಯ ದಿನಾಚರಣೆಯ ಈ ಸಂಭ್ರಮದ ಕ್ಷಣಗಳಲ್ಲಿ ದೇಶವು ವಿವಿಧ ಕ್ಷೇತ್ರಗಳಲ್ಲಿ ಇರಿಸಿದ ಹೆಜ್ಜೆಗಳನ್ನು ನೆನಪಿಸಿಕೊಳ್ಳಬೇಕು. ಬಾಹ್ಯಾಕಾಶ, ತಂತ್ರಜ್ಞಾನ, ಆರ್ಥಿಕತೆ, ಸಾಮಾಜಿಕ ಸಮೃದ್ಧಿ ಮತ್ತು ವಿಜ್ಞಾನ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಗಯ ಮೈಲಿಗಲ್ಲುಗಳು ನಮ್ಮ ಕಣ್ಣು ಮುಂದಿವೆ ಎಂದರು.
ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅವಿಭಾಜ್ಯ ಅಂಗದ ಭಾಗಗಳಾದ ನಾವು ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿರುವ ಅಧ್ಯಾಪಕರು ವಿದ್ಯಾರ್ಥಿಗಳಾಗಿ ಎಲ್ಲರೂ ಮುಂಬರುವ ಜನಾಂಗದ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮೆಲ್ಲರ ಪಾತ್ರಗಳನ್ನು ವಿಮರ್ಶಿಸಿ ನೋಡಬೇಕು. ಸಾಂಸ್ಕೃತಿಕ ಶ್ರೇಷ್ಠತೆಯನ್ನು ಮತ್ತು ನಾವಿನ್ಯತೆಯನ್ನು ನಮ್ಮಲ್ಲಿ ಬೆಳೆಸಿ ಸಂವೃದ್ಧಿಹಿಸಿಕೊಂಡು ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಜನಶೀಲತೆ ಮತ್ತು ವಿವೇಕಯುತ ಚಿಂತನೆಗಳು ವೇಗ ವರ್ಧನಗೊಳ್ಳುವಂತೆ ಶ್ರಮಿಸೋಣ ಎಂದರು.
ಬರುಬರುತ್ತ ಬಹು ಸಂಕೀರ್ಣಗೊಳ್ಳುತ್ತಿರುವ ಮತ್ತು ಪರಸ್ಪರ ಸಂಬಂಧಗಳು ಪ್ರಮುಖ ವಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳು ವಿಪುಲ ಕೌಶಲ್ಯಗಳು ವಿಸ್ತಾರವಾದ ಜ್ಞಾನ ದೊಂದಿಗೆ ಯಶಸ್ಸನ್ನು ತಮ್ಮದಾಗಿಸಿಕೊಳ್ಳುವಂತೆ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಡಾ.ಅಪ್ಪು ರಾಥೋಡ, ಪ್ರಾಧ್ಯಾಪಕರಾದ ಡಾ.ಕೆ.ವಿ.ಮಠ,ಡಾ.ಎಮ್.ಎಚ್.ವಡ್ಡರ,ಲೆಪ್ಟಿನೆಂಟ್ ಮಂಜುನಾಥ ದೇವನಾಳ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಎನ್‌ಸಿಸಿ,ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಇದ್ದರು.
ಬಾಕ್ಸ ಸುದ್ದಿ:
ಆರ್‌ಡಿಸಿ ಕ್ಯಾಂಪ್‌ಗೆ ಮಹಾವಿದ್ಯಾಲದ ವಿದ್ಯಾರ್ಥಿಗಳು ಆಯ್ಕೆ
76ನೇಯ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಮಾಣಿಕಷಾ ಮೈದಾನದಲ್ಲಿ ನಡೆಯುವ ಆರ್‌ಡಿಸಿ ಕ್ಯಾಂಪಗೆ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್ ವತಿಯಿಂದ ಬಾಗಲಕೋಟೆಯ 37ನೇ ಎನ್‌ಸಿಸಿ ಕರ್ನಾಟಕ ಬಟಾಲಿಯನ್‌ನ ಮಹಾವಿದ್ಯಾಲಯದ ಪ್ರಥಮ ವರ್ಷದ ಅವಿನಾಶ ಬಡಕನ್ನವರ ಮತ್ತು ಸಂಗಮೇಶ ಕೊಳಚಿ ಆಯ್ಕೆಯಾಗಿದ್ದು ಕೆಡೆಟ್‌ಗಳಿಗೆ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತಾಧಿಕಾರಿ ಡಾ.ವಿ.ಎಸ್.ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್.ಆರ್.ಮೂಗನೂರಮಠ, ಎನ್‌ಸಿಸಿ ಅಧಿಕಾರಿಯಾದ ಲೆಪ್ಟಿನೆಂಟ್ ಮಂಜುನಾಥ ದೇವನಾಳ ಅಭಿನಂದಿಸಿದ್ದಾರೆ.