ವಿಕೃ ಗೋಕಾಕ ರಾಷ್ಟ್ರೀಯ ಕಲಾ ಸಮ್ಮೇಳನ ಯಶಸ್ಸಿಗೆ ಶ್ರಮಿಸೋಣ: ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 08: ಸುವರ್ೆ ಕಲ್ಚರಲ್ ಅಕಾಡೆಮಿಯ 26ನೇ ವಾಷರ್ಿಕೋತ್ಸವ ಅಂಗವಾಗಿ, ಡಾ. ವಿ. ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಹಾಗೂ ರಾಷ್ಟ್ರೀಯ ಚಿಣ್ಣರ ಹಬ್ಬವನ್ನು ಯಶಸ್ವಿಗೊಳಿಸೋಣ ಎಂದು ಸಮ್ಮೇಳನ ಸ್ವಾಗತ ಸಮಿತಿ ಕಾಯರ್ಾಧ್ಯಕ್ಷ, ಸರಕಾರದ ಸಂಸದೀಯ ಕಾರ್ಯದಶರ್ಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜನೆವರಿ 27, 28, 29, 30 ನಾಲ್ಕು ದಿನದ ಸಮ್ಮೇಳನದ ರೂಪರೇಷೆಗಳನ್ನು ಒಳಗೊಂಡ ಆಮಂತ್ರಣವನ್ನು ಬಿಡುಗಡೆಗೊಳಿಸಿ ಮಾತನಾಡಿದರು. 

ಕಸಾಪ ಕೇಂದ್ರ ಸಮಿತಿ ಸದಸ್ಯ ಡಾ. ಶೇಖರಗೌಡ ಮಾಲಿಪಾಟೀಲ ಸಮ್ಮೇಳನಾಧ್ಯಕ್ಷತೆಯಲ್ಲಿ ನಗರದ ಸಾಹಿತ್ಯ ಭವನದಲ್ಲಿ ಸಮ್ಮೇಳನ ಜರುಗಲಿದ್ದು, ನಾಲ್ವರು ಸಚಿವರು, ಶಾಸಕರು, ಸಂಸದರು, ಮಠಾದೀಶರು, ಅಧಿಕಾರಿಗಳು, ಕಲಾವಿದರು ಭಾಗವಹಿಸುವರು. ಈ ಸಮ್ಮೇಳನ ನಮ್ಮ ನಾಡಿನ ಹೆಮ್ಮೆಯ ವಿಷಯ. ಖಾಸಗಿಯಾಗಿ ನಡೆದರೂ ಸಮ್ಮೇಳನ ತುಂಬಾ ಅರ್ಥಪೂರ್ಣವಾದ ವಿಷಯ ಮಂಡಿಸಲಿದೆ. ಅಚ್ಚುಕಟ್ಟಾಗಿ ಕಾರ್ಯಕ್ರಮ ಸಿದ್ದಮಾಡಿಕೊಂಡಿದ್ದಾರೆ ಎಂದರು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಮೇಶ ಸುವರ್ೆ ಅವರು, ನಾಲ್ಕು ಆಯಾಮದಲ್ಲಿ ಸಮ್ಮೇಳನ ನಡೆಯಲಿದ್ದು, ವಿಕೃ ಗೋಕಾಕರ ಸಮಗ್ರ ಚಚರ್ೆ, ರಾಷ್ಟ್ರೀಯ ಮಕ್ಕಳ ಹಬ್ಬ, ಹಿರಿಯ ಸಾಹಿತಿ ಡಾ.ಪಾಟೀಲ ಪುಟ್ಟಪ್ಪ ಅವರ ಜನ್ಮ ಶತಾಭ್ಧಿ ಹಾಗೂ ಕೊಪ್ಪಳ ಜಿಲ್ಲೆಯ ನಾಲ್ಕು ಜನ ಸಾಧಕ ಹೋರಾಟಗಾರರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕು ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯದ ಅನೇಕ ಪ್ರತಿಭಾವಂತ ಹಿರಿ ಕಿರಿ ಕಲಾವಿದರು ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ ಎಂದರು.

ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಡಾ. ಮಹಂತೇಶ ಮಲ್ಲನಗೌಡರ, ಸಮ್ಮೇಳನ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಕವಿ ಬಿ. ಎನ್. ಹೊರಪೇಟಿ, ನೃತ್ಯ ನಿದರ್ೇಶಕ ಬಸವರಾಜ ಮಾಲಗಿತ್ತಿ, ವಿರೇಂದ್ರ ಈಶ್ವರಗೌಡ್ರ, ಗಾಯಕ ವಿಜಯಕುಮಾರ ಜಿ. ಗೊಂಡಬಾಳ, ಕೌಶಲ ಛೋಪ್ರಾ, ಮೌಲಾಹುಸೇನ್ ಜಮೇದಾರ್, ಧರ್ಮಣ್ಣ ಹಟ್ಟಿ, ಬಸಯ್ಯ ಗೊಲರ್ೆಕೊಪ್ಪ, ಆಕಾಶ ಮಲ್ಲನಗೌಡ್ರ ಇತರರು ಇದ್ದರು.