ಬೆಳಗಾವಿ-20, ಸ್ಲಂ ಜನಾಂದೋಲನ ಕನರ್ಾಟಕ ಸಂಘಟನೆಯ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣ ಸೌಧ ಮುಂದೆ ರಾಜ್ಯದಲ್ಲಿ ವಸತಿ ಹಕ್ಕು ಕಾಯ್ದೆ ಜಾರಿಗಾಗಿ ಹಾಗೂ ವಿವಿಧ ಬೇಡಿಕಗಳಿಗೆ ಆಗ್ರೆಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿ ಸ್ಥಳಕ್ಕೆ ಹೋರಾಟಗಾರರಾದ ವಾಟಾಲ್ ನಾಗರಾಜ್ ಭೇಟಿ ನೀಡಿ ಸ್ಲಂ ನಿವಾಸಿಗಳ ಬೇಡಿಕೆಗಳಿಗೆ ರಾಜ್ಯ ಸಕರ್ಾರ ತಕ್ಷಣ ಸ್ಪಂದಿಸಬೇಕು, ವಿಳಂಭವಾದಲ್ಲಿ ಸ್ಲಂ ನಿವಾಸಿಗಳೊಂದಿಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಸಕರ್ಾರಕ್ಕೆ ಎಚ್ಚರಿಕ್ಕೆ ನೀಡಿ ಸ್ಲಂ ನಿವಾಸಿಗಳ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸಿದರು,
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕನರ್ಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂತರ್ಿ, ರಾಜ್ಯ ಸಂಘಟನಾ ಸಂಚಾಲಕರಾದ ಇಮ್ತಿಯಾಜ.ಆರ್. ಮಾನ್ವಿ, ಜನಾರ್ಧನ್ ಹಳ್ಳಿಬೆಂಚಿ, ಚಂದ್ರಮ್ಮ, ಫಕೀರಪ್ಪ ತಳವಾರ್, ಶೋಭಾ ಕಮತರ, ರೇಣುಕಾ ಸರಡಗಿ, ರಸೂಲ್ ನದಾಫ್, ರೇಣುಕಾ ಯಲ್ಲಮ್ಮ, ಕೆ. ಮಂಜಣ್ಣ, ದೀಪಿಕ, ಶೆಟ್ಟಳಯ್ಯ, ಗಣೇಶ್ ಕಾಂಬ್ಳೆ, ಶೇಖರ್ ಬಾಬು, ಗದಗ ಜಿಲ್ಲಾ ಸ್ಲಂ ಸಮಿತಿಯ ಪ್ರಧಾನ ಕಾರ್ಯದಶರ್ಿ ಅಶೋಕ ಕುಸಬಿ, ಸಂಘಟನಾ ಕಾರ್ಯದಶರ್ಿಯಾದ ಪರವೀನಬಾನು ಹವಾಲ್ದಾರ, ಮಹಿಳಾ ಸಂಚಾಲಕರಾದ ಮೆಹರುನಿಸಾ ಢಾಲಾಯತ, ಯುವ ಸಮಿತಿ ಸಂಚಾಲಕರಾದ ಉಸ್ಮಾನ ಚಿತ್ತಾಪೂರ, ಸಂಘಟನಾ ಸಂಚಾಲಕ ರಫೀಕ ಧಾರವಾಡ, ಮಮ್ತಾಜ ಮಕಾನದಾರ, ಅಬುಬಕರ ಮಕಾನದಾರ, ನಜೀರಅಹ್ಮದ ಹಾವಗಾರ, ನಜಮುನಿಸಾ ಮುರಗೋಡ, ವಿಶಾಲಕ್ಷಿ ಹಿರೇಗೌಡ್ರ, ಕಮಲವ್ವ ಬಿದರೂರು, ಮದರ್ಾನಬಿ ಬಳ್ಳಾರಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರೂ ಸ್ಲಂ ನಿವಾಸಿಗಳು ಮತ್ತು ಕಾರ್ಯಕರ್ತರು ಧರಣಿಯಲ್ಲಿ ಉಪಸ್ಥಿತರಿದ್ದರು,