ಅಥಣಿ 24: ಆದಿಲ್ ಶಾಹಿ ಆಸ್ಥಾನ ಸಾಹಿತ್ಯವನ್ನು ತಿಳಿದುಕೊಳ್ಳುವುದು ಅಷ್ಟೊಂದು ಸರಳವಲ್ಲ. 8 ಜನ ರಾಜರು ಆಳಿದ ಈ ಪರಂಪರೆ. ಇದರ ಬಗ್ಗೆ 18 ಸಂಪುಟದೊಂದಿಗೆ ಅಪಾರ ಸಾಹಿತ್ಯವಿದೆ. 2ನೇ ಇಬ್ರಾಹಿಂ ಕಾಲದ ಅಂದರೆ 196-200 ವರ್ಷಗಳ ವರೆಗೆ ಆಳಿದ ಆ ಭಾಗದ ಇತಿಹಾಸ ಹೇಳುವುದು ಈ ಒಂದು ಘಂಟೆಯ ಕಾಲ ಅಸಾಧ್ಯ. ಯಾವ ರೀತಿ ಶ್ರಾವಣದಲ್ಲಿ ಪುರಾಣ ಪ್ರವಚನದಲ್ಲಿ ಹೇಳುತ್ತಾರೋ, ಅದೇ ರೀತಿ ಈ ಆದಿಲ್ ಶಾಹಿ ಇತಿಹಾಸವನ್ನು ಒಂದು ತಿಂಗಳವರೆಗೆ ಹೇಳುವುದು ಸ್ವಲ್ಪಮಟ್ಟಿಗೆ ಅರಿತುಕೊಳ್ಳಬಹುದು ಎಂದು ಸಂಶೋಧಕ ಹಾಗೂ ಇತಿಹಾಸಕಾರ ವಿದ್ವಾನ ಡಾ.ಕೃಷ್ಣ ಕೋಲ್ಹಾರ ಕುಲಕಣರ್ಿ ಹೇಳಿದರು.
ಸ್ಥಳೀಯ ಡಾ.ಆರ್.ಎಚ್.ಕುಲಕಣರ್ಿ ಸಭಾ ಭವನದಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಂಘದವರು ಏರ್ಪಡಿಸಲಾಗಿದ್ದ ಆದಿಲ್ ಶಾಹಿ ಆಸ್ಥಾನದ ಸಾಹಿತ್ಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೈಜ್ಯವಾದ ಇತಿಹಾಸ ತಿಳಿದುಕೊಳ್ಳಲು ಆಸಕ್ತಿಯಿಂದ ಅದರಲ್ಲಿ ನಾನಾಗಿ ತೊಡಗಿಕೊಂಡು ಅಧ್ಯಯನ ಮಾಡಿದೆ. ಓದುವಾಗ ಯಾರೇಯಾಗಲಿ ಅದರಲ್ಲಿ ತನ್ಮಯರಾಗಿ ಮನ ಮಿಡಿಯುವಂತೆ ಅಥ್ಯರ್ೆಸಿಕೊಂಡು ವಾಚನ ಮಾಡಬೇಕು. 2ನೇ ಇಬ್ರಾಹಿಂರಂತ ಆದಿಲ್ ಶಾಹಿರಾದಿಯಾಗಿ 8 ಜನ ಆಳಿದವರಾಗಿದ್ದಾರೆ. 1626 -46 ಈ ಕಾಲ 1656 ಈ ಅವಧಿಯಲ್ಲಿ ಇತಿಹಾಸ ಹೆಸರು ಮಾಡಿತ್ತು. ಈ ಕಾಲದಲ್ಲಿ 16 ಮತ್ತು 17ನೇ ಶತಮಾನದಲ್ಲಿ ವಿಜಯಪುರದ ಆದಿಲ್ಶಾಹಿಯ 8 ತಲೆಮಾರಗಳಲ್ಲಿ ಮುಂಬಯಿ, ತಂಜಾವೂರ, ಆಂಧ್ರ ಸೇರಿದಂತೆ ಇನ್ನಿತರ ಪ್ರಾಂತಂಗಳಲ್ಲಿ 200 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದರು.
ಈ ಕಾಲದಲ್ಲಿ ಜಗಳ, ಕೋಮು ಗಲಭೆ ಆಗಲಿಲ್ಲ ಎರಡನೆ ಇಬ್ರಾಹಿಂನನ್ನು ಜಗದ್ಗುರು ಇಬ್ರಾಹಿಂ ಎಂದು ಕರೆಯಿತ್ತಿದ್ದರು. ಕಾರಣ ಸಾಮರಸ್ಯವು ಎಲ್ಲೆಲ್ಲಿಯೂ ಹರಡಿತ್ತು. ಅವನು ಹಿಂದೂ ಶ್ಲೋಕಗಳನ್ನು ಉದರ್ು ಭಾಷೆಯಲ್ಲಿ ತಜರ್ುಮೆ ಮಾಡಿ ಹೇಳುತ್ತಿದ್ದರಿಂದ ಇದರ ಪ್ರತಿಫಲವಾಗಿ ಹಿಂದೂ ಮತ್ತು ಮುಸ್ಲಿಂರ ನಡೆವೆ ಆ ಸಾಮರಸ್ಯ ನೆಲೆಯೂರಿತ್ತು ಎಂದು ಹೇಳಿದರು.
ಬಹುಭಾಷಾ ಪಂಡಿತ ಸರಳ ಜೀವಿ ಮೌಲನಾ ಮೆಹಬೂಬ ರೆಹಮಾನ ಮದನಿಯವರು ಮಾತನಾಡುತ್ತಾ ಸಾಮಾನ್ಯವಾಗಿ ಆ ಕಾಲದಲ್ಲಿ ಧರ್ಮ ಚಿಂತನೆ ನಡೆಯುತ್ತಿತ್ತು. ಹೀಗಾಗಿ ಅಧಿಕಾರ ದಾಹವಿರಲಿಲ್ಲ. ಮತ್ತು ಯುದ್ಧವಾಗುತ್ತಿರಲಿಲ್ಲ. ತಮ್ಮ ರಾಜ್ಯವನ್ನು ವಿಸ್ತಾರ ಮಾಡುವುದಗೋಸ್ಕರ ಅಧಿಕಾರ ದಾಹಕ್ಕಾಗಿ ಮುಸ್ಲಿಮರು ಅಲ್ಲಲ್ಲಿ ದಾಳಿ ಮಾಡುತ್ತಿದ್ದರು. ಆದರೆ ಆ ದಾಳಿ ಹಿಂದೂಗಳ ಮೇಲೆ ಆಗುತ್ತಿರಲಿಲ್ಲ. ಆದೇ ಇಂದು ಧರ್ಮ ಆಧಾರದ ಮೇಲೆ ರಾಜಕಾರಣ ನಡೆಸಲಾಗುತ್ತಿದೆ. ಇದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿಂದಿನ ಶಾಸಕ ಶಹಾಜಾನ್ ಡೊಂಗರಗಾಂವ, ಮಾತನಾಡುತ್ತ ಅಂದಿಗೂ ಇಂದಿಗೂ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ಅವಹೇಳನಕಾರಿಯಾಗಿ ಕಾಣುವುದಿಲ್ಲ. ನಮ್ಮ ಧರ್ಮವನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ. ಆವಾಗ ಮಾತ್ರ ಸಾಮರಸ್ಯದ ಅರಿವಾಗುತ್ತದೆ. ಯಾವಾಗಲೂ ದೇಶದ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು, ತಿಳಿಯಾದ ವಾತಾವರಣ ಹರಡಲು ಮತ್ತು ಧರ್ಮಗಳಲ್ಲಿ ಸಾಮರಸ್ಯ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದರು.
ಜೆ ಇ ಸಂಸ್ಥೆಯ ಕಾಯರ್ಾಧ್ಯಕ್ಷ ಅರವಿಂದರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಒಂದು ಕಾರ್ಯಕ್ರಮ ಅಮೋಘವಾದದ್ದು. ಇದು ಇನ್ನಷ್ಟು ವ್ಯಾಪಕವಾದ ರೀತಿಯಲ್ಲಿ ನಡೆದಲ್ಲಿ ಸರ್ವರಿಗೂ ಇತಿಹಾಸದ ಅರಿವಾಗುತ್ತದೆ. ಇನ್ನೊಮ್ಮೆ ಇಂಥ ಅವಕಾಶಕ್ಕಾಗಿ ಕಾಯೋಣ ಎಂದರು. ಶೆಟ್ಟರಮಠದ ಮರುಳಸಿದ್ಧ ಮಹಾಸ್ವಾಮಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಲ್ಲಿಕಾಜರ್ುನ ಕನಶೆಟ್ಟಿ ಮಾತನಾಡುತ್ತ, ಹಿಂದು ಮುಸ್ಲಿಮರ ನಡುವೆ ಸಾಮರಸ್ಯ ಹರಡುವುದಕ್ಕಾಗಿ ಈ ಸಮಾರಂಭ ಏರ್ಪಡಿಸಲಾಗಿದೆ. ಇದು ತಕ್ಕಮಟ್ಟಿಗೆ ಸಮಾಧಾನ ಎಂದರು. ಎ.ಬಿ ಜಕನೂರ, ಮುಲ್ಲಾ ಡಾ. ಸಿ.ಎ. ಗಲಗಲಿ, ಶ್ರೀಶೈಲ ಸಂಕ, ರಮೇಶ ಸಿಂದಗಿ, ಶಿವಪುತ್ರ ಯಾದವಾಡ, ಎಂ.ಎನ್ ಚಿಂಚೋಳಿ, ಅಪ್ಪಾಸಾಹೇಬ ಅವಟಿ, ಮುಂತಾದವರು ಉಪಸ್ಥಿತರಿದ್ದರು.
ನಿವೃತ್ತ ಪ್ರಾಚಾರ್ಯ ಎ.ಬಿ ಪೂಜಾರಿಯವರಿಂದ ಪ್ರಾರ್ಥನೆಯಾಯಿತು. ಸಂಘದ ಕಾರ್ಯದಶರ್ಿ ಉಪನ್ಯಾಸಕ ಆರ್.ಆರ್.ಪಠಾನ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಾಹಿತಿ ವಾಮನ ಕುಲಕಣರ್ಿ ನಡೆಸಿದರು. ಉದಯ ಕುಲಕಣರ್ಿ ವಂದಿಸಿದರು