ಧಾರವಾಡ ಸಾಂಸ್ಕೃತಿಕ ನಾಡು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡೋಣ : ಅರವಿಂದ ಬೆಲ್ಲದ

ಧಾರವಾಡ 30: ಧಾರವಾಡದಲ್ಲಿ 62 ವರ್ಷಗಳ ನಂತರ ಜರಗುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಹೊರರಾಜ್ಯ ಸೇರಿದಂತೆ ರಾಷ್ಟ್ರದ ವಿವಿಧ ಸ್ಥಳಗಳಿಂದ ಲಕ್ಷಾಂತರ ಜನ ಸಾಹಿತಿಗಳು, ಸಾಹಿತ್ಯ ಆರಾಧಕರು ಆಗಮಿಸುವುದರಿಂದ ಸ್ವಯಂ ಸೇವಕರೆಲ್ಲ ಸೇರಿ ನಾವೆಲ್ಲರೂ ಪ್ರೀತಿ, ವಿಶ್ವಾಸ ಸಂಯಮದಿಂದ ಅವರೊಂದಿಗೆ ವತರ್ಿಸಿ, ಶಾಂತಿಪ್ರೀಯ ಧಾರವಾಡ ಸದಾ ಸಂಸ್ಕೃತರ ನಾಡು ಎಂಬುದನ್ನು ಮತ್ತೊಮ್ಮೆ ಸಾಬಿತು ಪಡಿಸೋಣ ಎಂದು ಆಹಾರ ಸಮಿತಿ ಅಧ್ಯಕ್ಷರಾದ ಶಾಸಕ ಅರವಿಂದ ಬೆಲ್ಲದ ಹೇಳಿದರು. 

ಅವರು ಇಂದು ಬೆಳಿಗ್ಗೆ ನಗರದ ಡಾ.ಮಲ್ಲಿಕಾಜರ್ುನ ಮನಸೂರ ಕಲಾಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನ ಸ್ವಯಂಸೇವಕರ, ಎನ್ಎಸ್ಎಸ್ ಅಧಿಕಾರಿಗಳ ಹಾಗೂ ಪ್ರಾಚಾರ್ಯರ ಸಭೆಯಲ್ಲಿ ಮಾತನಾಡದರು.

ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಊಟ, ವಸತಿ, ಕುಡಿಯುವ ನೀರು, ಶೌಚಾಲಯ ಮತ್ತು ಪ್ರತಿದಿನದ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಬೇಕು. ಪ್ರತಿಯೊಬ್ಬರೊಂದಿಗೆ ಪ್ರೀತಿ, ವಿಶ್ವಾಸ, ನಗು ಮುಖದಿಂದ ಮಾತನಾಡಿ, ಕಾಳಜಿಯಿಂದ ತಮ್ಮ ತಮ್ಮ ಕೆಲಸಗಳನ್ನು ಮಾಡಬೇಕು. ಕೇಳುವ ಮಾಹಿತಿಯನ್ನು ಅವಸರ ಮಾಡದೇ ಸಾವಧಾನದಿಂದ ತಿಳಿಸಬೇಕು.

ಸ್ವಯಂಸೇವಕ, ಸೇವಕಿಯರು ಸಮ್ಮೇಳನ ಕರ್ತವ್ಯಕ್ಕೆ ನೇಮಕಗೊಂಡ ಅಧಿಕಾರಿಗಳೊಂದಿಗೆ, ಕಾಮರ್ಿಕರೊಂದಿಗೆ ಮತ್ತು ವಿವಿಧ ಇಲಾಖೆ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಬೆಲ್ಲದ ಹೇಳಿದರು.

ಜನವರಿ 2 ಮತ್ತು 3 ರಂದು ಎನ್ಎಸ್ಎಸ್ ಅಧಿಕಾರಿಗಳಿಗೆ, ಕಾಲೇಜು ಪ್ರಾಚಾರ್ಯರಿಗೆ ಮತ್ತೊಂದು ಸುತ್ತಿನ ಮಹಿತಿ ಸಭೆ ಜರುಗಿಸಲಾಗುವುದು. ಮೂರುದಿನದ ಹಬ್ಬದ ವಾತಾವರಣದಲ್ಲಿ ಹಬ್ಬ ಆಚರಿಸಿ ನಾವೆಲ್ಲ ಖುಷಿಪಡೋಣ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್ ಅವರು ಮಾತನಾಡಿ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಪ್ರತಿಯೊಬ್ಬರು ಪ್ರಮಾಣಿಕತೆಯಿಂದ ತೊಡಗಿಸಿಕೊಳ್ಳಬೇಕು. ಸ್ವಯಂ ಸೇವಕರು ನಿಜವಾದ ಧಾರವಾಡ ಪ್ರತಿನಿಧಿಗಳಾಗಿದ್ದು, ಅವರು ಸಮ್ಮೇಳನದ ಪ್ರತಿನಿಧಿಗಳಿಗೆ ಅಗತ್ಯವಿರುವ ಮಾಹಿತಿ ನೀಡಿ ಅವರ ಮನಗೆಲ್ಲಬೇಕು. ಜಿಲ್ಲಾಡಳಿತ ಮಾಡಿರುವ ಎಲ್ಲ ಸೌಕರ್ಯ, ಸೌಲಭ್ಯಗಳು ಬರುವ ಸಾಹಿತಿ, ಸಾಹಿತ್ಯ ಆಸಕ್ತರಿಗೆ ಲಭಿಸುವಂತೆ ಮಾಡುವಲ್ಲಿ ಸ್ವಯಂ ಸೇವಕರ ಪಾತ್ರ ಮಹತ್ವದ್ದಾಗಿದೆ ಎಂದು ಅವರು  ಹೇಳಿದರು.  

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅವರು ಮಾತನಾಡಿ, ಸಮ್ಮೇಳನದ ಅತಿಥಿಗಳಿಗೆ, ಪ್ರತಿನಿಧಿಗಳಿಗೆ ವಸತಿ, ಊಟ, ಸಾರಿಗೆ ಮುಂತಾದ ಮೂಲಸೌಕರ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಿದ್ಧಗೊಳಿಸಲಾಗಿದೆ. ಮಹಿಳಾ ಸದಸ್ಯರಿಗೆ ಪ್ರತ್ಯೇಕ ವಸತಿ, ಊಟ ಕಲ್ಪಿಸಲಾಗಿದೆ. ಸುರಕ್ಷತೆಗಾಗಿ ಮಹಿಳಾ ಪೊಲೀಸ್ ಸಿಬ್ಬಂದಿ, ಮಹಿಳಾ ಸ್ವಯಂ ಸೇವಕಿಯರನ್ನು ನೇಮಿಸಲಾಗಿದೆ. ಆರೋಗ್ಯ ಸಹಾಯಕಿಯರನ್ನು ನೇಮಿಸಲಾಗಿದೆ. ವಸತಿ ಕಲ್ಪಿಸಿರುವ ಪ್ರತಿ ಸ್ಥಳಗಳಲ್ಲಿ ತುತರ್ು ಸೇವೆ, ತುತರ್ು ಸಂಪರ್ಕದ ಮಾಹಿತಿಯನ್ನು ಅಂಟಿಸಲಾಗುತ್ತದೆ. ಯಾವುದೇ ರೀತಿಯ ಸಂವಹನದ ಕೊರತೆ ಉಂಟಾಗದಂತೆ ಸ್ವಯಂ ಸೇವಕ, ಸೇವಕಿಯರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

ವಸತಿ ಸ್ಥಳಗಳಲ್ಲಿ ಸಮ್ಮೇಳನದ ಸ್ಥಳಗಳಲ್ಲಿ ಯಾವುದೇ ವ್ಯಕ್ತಿಗಳು ಗುಟಕಾ ಸೇವನೆ, ಮಧ್ಯಪಾನ, ಧೂಮಪಾನ ಮಾಡದಂತೆ ತಿಳಿ ಹೇಳಬೇಕು. ತಿಳುವಳಿಕೆ ನೀಡಬೇಕು. ಒಬ್ಬರಿಂದ ಇನ್ನೊಬ್ಬರಿಗೆ ಯಾವುದೇ ರೀತಿಯಿಂದ ತೊಂದರೆ ಆಗದಂತೆ ಜಾಗೃತೆ ವಹಿಸಬೇಕು. ಸಹಾಯ ಬೇಕಾದಲ್ಲಿ ಪ್ರತಿ ಸ್ಥಳಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಿದ್ದು, ಅವರಿಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಲ್.ಆರ್. ಅಂಗಡಿ ಮಾತನಾಡಿ, ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲ ಸ್ವಯಂ ಸೇವಕ, ಸೇವಕಿಯರಿಗೆ ಟಿಶಟರ್್ ನೀಡಲಾಗುತ್ತದೆ. ಮತ್ತು ಸಮ್ಮೇಳನದ ನಂತರ ಭಾಗವಹಿಸಿದ ಪ್ರತಿ ಕಾಲೇಜಿನ ಒಬ್ಬರಿಗೆ ಉತ್ತಮ ಸೇವಕ ಅಥವಾ ಸೇವಕಿ ಎಂದು ಆಯ್ಕೆ ಮಾಡಿ ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿದರ್ೆಶಕ ಸದಾಶಿವ ಮಜರ್ಿ ಮಾತನಾಡಿ, ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಉತ್ತರ ಕನರ್ಾಟಕ ಶೈಲಿಯ ಊಟ ನೀಡಲಾಗುತ್ತದೆ. ಅದಕ್ಕಾಗಿ 104 ಕೌಂಟರ್ ತೆರೆಯಲಾಗಿದೆ. ಸುಮಾರು 2000 ಕ್ಕೂ ಹೆಚ್ಚು ಬಾಣಸಿಗರು ಅಡುಗೆ ತಯಾರಿಸಲಿದ್ದಾರೆ. ನಾಲ್ಕು ಮಹಾವಿದ್ಯಾಲಯಗಳ ಸ್ವಯಂ ಸೇವಕರು, ಊಟ, ಕುಡಿಯುವ ನೀರು, ಶೌಚಾಲಯಗಳ ಕುರಿತು ಮಾಹಿತಿ ನೀಡಲಿದ್ದಾರೆ. ಸುಮಾರು ಒಂದು ದಿನಕ್ಕೆ 900 ಜನ ಕಾಮರ್ಿಕರು ಊಟದ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು. 

ವೇದಿಕೆಯಲ್ಲಿ ಭೂದಾಖಲೆಗಳ ಇಲಾಖೆ ಉಪನಿದರ್ೆಶಕ ನೀಸಾರ ಅಹ್ಮದ್, ಮಹಾನಗರ ಪಾಲಿಕೆ ಆಯುಕ್ತ ಶಕೀಲ ಅಹ್ಮದ್, ಜಂಟಿ ಆಯುಕ್ತ ಅಜಿತ್ ದೇಸಾಯಿ, ಎನ್ಎಸ್ಎಸ್ ಅಧಿಕಾರಿ ಡಾ.ಎಂ.ಬಿ. ದಳಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತರಬೇತಿ ಮತ್ತು ಮಾಹಿತಿ ಶಿಬಿರದಲ್ಲಿ ಸುಮಾರು 12 ಮಹಾವಿದ್ಯಾಲಯಗಳ ಎನ್ಎನ್ಎಸ್ ವಿದ್ಯಾಥರ್ಿಗಳು, ಎನ್ಎಸ್ಎಸ್ ಅಧಿಕಾರಿಗಳು, ಪ್ರಾಚಾರ್ಯರು ಭಾಗವಹಿಸಿದ್ದರು.