ಇಂದು ಇದ್ದು ನಾಳೆ ಅಳಿಯುವ ಶರೀರದಿಂದ ದುಖಿಃತರ ಜೀವನ ಹಸನಾಗಲಿ : ಡಾ. ಪವಾರ

ಲೋಕದರ್ಶನ ವರದಿ

ಬೆಳಗಾವಿ, 22: ಇಂದು ಇದ್ದು ನಾಳೆ ಅಳಿಯುವ ಶರೀರದಿಂದ ದುಖಿಃತರ ಜೀವನ ಹಸನಾಗಲಿ ಎಂದು ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ  ಹೆಸರಾಂತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಜ್ಞ ಡಾ. ರಾಜೇಶ ಪವಾರ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚರಕಾ ಹಾಲ್ನಲ್ಲಿ ನಡೆದ ಸ್ಕಿನ್ ಬ್ಯಾಂಕ್ ಸ್ಕಿನ್ ಡೊನೆಷನ್ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು. ಚರ್ಮವು ನಮ್ಮ ಪಂಚೇಂದ್ರಿಯಗಳಲ್ಲಿ ಒಂದಾಗಿದ್ದು ಶರೀರದಲ್ಲಿ ಜೀವ ಇರುವ ವರೆಗೆ ನಮ್ಮನ್ನು ಕಾಪಾಡಿ ಜೀವ ಅಳಿದ ನಂತರ ಬೇರೊಬ್ಬ ಪೀಡಿತ ವ್ಯಕ್ತಿಯ ಜೀವನದಲ್ಲಿ ಬೆಳಕಾಗುವಂತೆ ಮಾಡುವದು ಚರ್ಮದ ಬ್ಯಾಂಕಿನ ಮುಖ್ಯ ಉದ್ದೇಶವಾಗಿದೆ. ಸುಟ್ಟ ಕಲೆಗಳು, ಅಫಘಾತಗ್ರಸ್ಥರು, ಯಂತ್ರೋಪಕರಣಗಳಿಂದಾದ ಹಾನಿ, ರಾಸಾಯನಿಕ ಪ್ರಭಾವ ಮತ್ತು ಇನ್ನಿತರೆ ಕಾರಣಗಳಿಂದ ರೋಗಿಗಳಲ್ಲಿ ಸೋಂಕು ಹೆಚ್ಚಾಗಿ ರೋಗದ ಹರಡುವಿಕೆ ಮತ್ತು ಸಾವು ಸಂಭವಿಸಲು ಕಾರಣವಾಗುತ್ತದೆ. ಇದನ್ನು ತಪ್ಪಿಸಲು ವ್ಯಕ್ತಿ ನಿಧನ ಹೊಂದಿದ ಆರು ಘಂಟೆಗಳೊಳಗೆ ಚರ್ಮವನ್ನು ದಾನ ಮಾಡಲು ನಿಧನ ಹೊಂದಿದ ವ್ಯಕ್ತಿಯ ಸಮೀಪದ ಬಂಧುಗಳು ಈ ಮಹತ್ಕಾರ್ಯಕ್ಕೆ ಸಹಕರಿಸಿ ಇನ್ನೊಬ್ಬ ವ್ಯಕ್ತಿಯ ಜೀವನ ಹಸನಾಗಿಸಲು ದಾರಿಯಾಗುತ್ತದೆ ಅಲ್ಲದೇ ಈ ಸ್ಕಿನ್ ಬ್ಯಾಂಕನ್ನು ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕೆಎಲ್ಇ ಡಾ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ನ ಸಹಯೋಗದೊಂದಿಗೆ  ಲೋಕಾರ್ಪಣೆಗೊಂಡಿದೆ ಇಚ್ಛಿಸಿದವರು 9964233777 ಹಾಗೂ 9964388777 ಈ ಮೊಬೈಲ್ ಸಂಖ್ಯೆಗಳ ಮೇಲೆ ಸಂಪಕರ್ಿಸಲು ಕೋರಲಾಗಿದೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ ದಕ್ಷಿಣ ಬಾರತದ ಇತಿಹಾಸದಲ್ಲಿಯೇ ಇದೊಂದು ಅದ್ಭುತ ಪ್ರಯತ್ನವಾಗಿದ್ದು  ದುಖಿಃತರ ಬಾಳಲ್ಲಿ ಸಂತಸದ ಚಿಲುಮೆಯನ್ನು ಹೊರಡಿಸಲೆಂದು ಹಾರೈಸೋಣ ಹಾಗೂ ಬೆಳಗಾವಿ ನಗರದ ದಕ್ಷಿಣ ಭಾಗಕ್ಕೆ ಆರೋಗ್ಯ ಸಂಜೀವಿನಿಯೆಂದೆ ಹೆಸರಾಗಿರುವ ನಮ್ಮ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸೇವೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವ ಯೋಜನೆಯಲ್ಲಿದ್ದೇವೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಹಿರಿಯ ಶಸ್ತ್ರಚಿಕಿತ್ಸಜ್ಞ ಡಾ. ಅಶೋಕ ಪಾಂಗಿ, ಕೆ ಎಲ್ ಇ ಹೋಮಿಯೋಪಾಥೀಕ್ ಕಾಲೇಜಿನ ಪ್ರಾಂಶುಪಾಲ ಹಾಗೂ ಬೆಳಗಾವಿ ರೋಟರಿ ಕ್ಲಬ್ನ ಅಧ್ಯಕ್ಷ ಡಾ. ಎಮ್ ಎ ಉಡಚನಕರ ಹಾಗೂ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳು , ನಸರ್ಿಂಗ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಹಾಗೂ ಆಸ್ಪತ್ರೆಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಭಾಗವಹಿಸಿದ್ದರು. 

ಅತಿಥಿಗಳನ್ನು ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಸ್ವಾಗತಿಸಿದರು. ಸಂತೋಷ ಇತಾಪೆ ನಿರೂಪಿಸಿ ವಂದಿಸಿದರು.