ಲೋಕದರ್ಶನ ವರದಿ
ಓಬಳಾಪುರ,ರಾಂಪುರ05: ಸಮಾಜ ಮತ್ತು ಸಕರ್ಾರದ ನಡುವೆ ಪತ್ರಿಕೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದೆ.ಪತ್ರಿಕೆ ಸಮಾಜದಕೈಗನ್ನಡಿ. ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಅಗಾಧವಾಗಿರುತ್ತದೆ. ಇಂತಹ ಪತ್ರಿಕೆಗಳ ಸಾಲಿನಲ್ಲಿ ಇದೀಗ ಬಳ್ಳಾರಿ ಧ್ವನಿ ವಿದ್ಯಾಥರ್ಿ ಪ್ರಾಯೋಗಿಕ ಮಾಸಪತ್ರಿಕೆ ಸೇರಿದೆ. ಬಳ್ಳಾರಿ ಧ್ವನಿ ವಿದ್ಯಾಥರ್ಿ ಪ್ರಾಯೋಗಿಕ ಮಾಸಪತ್ರಿಕೆಗೆ ಮೊಳಕಾಲ್ಮೂರು ವಿಧಾನಸಭಾಕ್ಷೇತ್ರದ ಶಾಸಕರಾದ ಶ್ರೀರಾಮುಲು ಶುಭ ಹಾರೈಸಿದರು.
ತಾಲೂಕಿನ ಜಿ.ಬಿ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳಾಪುರ ಗ್ರಾಮದಜನ ಸಂಪರ್ಕ ಸಭೆಯಲ್ಲಿ ಪತ್ರಿಕೆಯನ್ನು ಬಿಡುಗಡೆಗೊಳಿಸಿತಮ್ಮ ಮಾತುಗಳನ್ನು ಮುಂದುವರೆಸಿ, ಸರಳಾದೇವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾಥರ್ಿ ಪ್ರಭಾಕರನ ನೂತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಸ್ತುನಿಷ್ಟ ಸುದ್ದಿಗಳು ಪ್ರಕಟವಾಗಲಿ ಹಾಗೂಪತ್ರಿಕೆಯು ಅರ್ಥಪೂರ್ಣವಾಗಿದೆ. ಪ್ರಯತ್ನವೆ ಅದ್ಭುತವಾಗಿದೆ.
ಪತ್ರಿಕೆ ಹೆಚ್ಚು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲಿ, ಹೆಚ್ಚು ಪ್ರಚಾರವಾಗಲಿ.ಇದು ಸದಾಈಗೆ ಮುಂದುವರೆಯಲಿ, ಮುಂದೊಂದು ದಿನ ನೊಂದಣಿಯಾಗಿರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂದು ತಿಳಿಸಿದರು.
ಶುದ್ಧಕುಡಿಯುವ ನೀರು, ನಿವೇಶನ, ಗ್ರಂಥಾಲಯ ಹಾಗೂ ಇತರೆ ಸೌಕರ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಸಭೆಯಲ್ಲಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ, ಮಾತನಾಡಿದ ಅವರುಎಲ್ಲ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲಾಗುವುದು, ಇದಕ್ಕಾಗಿ ಶಾಸಕರ ನಿಧಿಯನ್ನು ಸಹ ಬಳಸಲಾಗುವುದು, ಅಭಿವೃದ್ಧಿಗೆ ನಾವು ಸದಾ ಸಿದ್ದರಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆ.ಬಿ ಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮದ ಶಾಲೆಯ ಮುಖ್ಯೋಪಾಧ್ಯಯರಾದ ವಿಜಯಲಕ್ಷ್ಮಿ, ಗ್ರಾಮಸ್ಥರಾದ ಚನ್ನಬಸಪ್ಪ, ಶ್ರೀನಿವಾಸ್ರೆಡ್ಡಿ, ಪ್ರಕಾಶ್, ವಸಂತ್ಕುಮಾರ್, ಹರೀಶ್, ಭರತ್ಕುಮಾರ್ ಸೇರಿದಂತೆಗ್ರಾಮಸ್ಥರು ಹಾಜರಿದ್ದರು.