ಕೆರೆ ಹೂಳೆತ್ತಲು ಎಲ್ಲರ ಸಹಕಾರ ಇರಲಿ: ಸಿದ್ದನಗೌಡ ಮನವಿ

Let everyone cooperate in dredging the lake: Siddanga Gowda appeals

ಕೆರೆ ಹೂಳೆತ್ತಲು ಎಲ್ಲರ ಸಹಕಾರ ಇರಲಿ: ಸಿದ್ದನಗೌಡ ಮನವಿ 

ದೇವರಹಿಪ್ಪರಗಿ 21:  ಗ್ರಾಮದ ಬನ್ನಿ ಬಸವೇಶ್ವರ ಕೆರೆಯ ಹೂಳೆತ್ತುವ ಕಾಮಗಾರಿ ಯೋಜನೆಯನ್ನು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ವರ್ಗದವರೊಂದಿಗೆ ಸಾಕಷ್ಟು ಪ್ರಯತ್ನ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಇದರ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಗ್ರಾಮ ಪಂಚಾಯತ್ ಸದಸ್ಯ ಕೆರೆ ಹೊಳೆತ್ತುವ ಕಮಿಟಿ ಅಧ್ಯಕ್ಷ ಸಿದ್ದನಗೌಡ ಬಿರಾದಾರ ಹೇಳಿದರು.  

ಮತಕ್ಷೇತ್ರದ ಜಲಪೂರ ಗ್ರಾಮದಲ್ಲಿ ಇತ್ತೀಚಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಂದಗಿ ಇವರ ಆರ್ಥಿಕ ಸಹಾಯದೊಂದಿಗೆ ಬೆಕಿನಾಳ ಗ್ರಾಪಂ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಜಲಪುರ ಕೆರೆ ಹೂಳೆತ್ತುವ ಕಾಮಗಾರಿ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿ, ಈಗಾಗಲೇ ಈ ಭಾಗದಲ್ಲಿ ಈ ಸಂಸ್ಥೆಯವರು ಸಾಕಷ್ಟು ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇದೀಗ ನಮ್ಮ ಊರಿನ ಕೆರೆ ಹೂಳೆತ್ತುವ ಕಾಮಗಾರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ ಅವರಿಗೆ  ನಿಮ್ಮೆಲ್ಲರ ಪರವಾಗಿ ಅಭಿನಂದಿಸುತ್ತೇನೆ ಎಂದರು.  

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೀನೊವ್ ಅವರು ಮಾತನಾಡಿ ನಮ್ಮೂರು ನಮ್ಮ ಕೆರೆ ಕಾಮಗಾರಿ ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪ ರೂಪರೇಷೆಗಳನ್ನು ಹಾಕಿಕೊಂಡಿದ್ದು ಕೆರೆ ಕಮಿಟಿ ಅಧ್ಯಕ್ಷ ಸಮಾಜ ಸೇವಕರಾದ ಸಿದ್ದನಗೌಡರ ಜೊತೆಗೆ  ಅವರಿಗೆ ನಿಮ್ಮೆಲ್ಲರ ಸಹಕಾರ ಸದಾ  ಇರಲಿ ಎಂದರು.   ಕೆರೆ ವಿಭಾಗದ ಇಂಜಿನಿಯರ್ ನಿಂಗರಾಜ ಮಾತನಾಡಿ ಕೆರೆ ಕಾಮಗಾರಿಲ್ಲಿ ರೈತರ ಸಹಕಾರ ನೀಡಿ ಯೋಜನೆ ನೇಮದಂತೆ ಕೆರೆ ಕಾಮಗಾರಿಗೆ ಸಹಕಾರ ನೀಡಬೇಕು ಎಂದರು. 

ಟೋಪಯ್ಯ, ಶಾಂತಯ್ಯ ಹಿರೂರ, ಕೃಷಿ ಅಧಿಕಾರಿ ಸುರೇಶ ಸಿದ್ದಲಿಂಗಪ್ಪ ರೇಣುಕಾ ಬೆಕಿನಾಳ ಗ್ರಾಪಂ ಅಧ್ಯಕ್ಷ ರವಿ ಸುಧಾಕರ, ಗ್ರಾಪಂ ಸದಸ್ಯ ರಾಮರಾವ್ ಕುಲಕರ್ಣಿ, ಗ್ರಾಮ ಸಮಿತಿ ಸದಸ್ಯರಾದ ಮಾದೇವಪ್ಪಗೌಡ, ವೀರಭದ್ರ ಶೇಖಪ್ಪಣ್ಣ ಅಗಸರ, ಸಿದ್ದರಾಮಪ್ಪಗೌಡ ಪಾಟೀಲ, ಶರಣು ತುಂಬಗಿ, ಬಸವರಾಜ ಕುಂಬಾರ ಹಾಗೂ ಗ್ರಾಮದ ಪ್ರಮುಖರು, ಗಣ್ಯರು ಹಿರಿಯರು ಸ್ವ ಸಹಾಯ ಸಂಘದ ಸದಸ್ಯರು ಇದ್ದರು.