ಮಕ್ಕಳು ಹೊಸದೇನನ್ನಾದರೂ ಕಲಿತು, ಭವಿಷ್ಯದ ವಿಜ್ಞಾನಿಗಳಾಗಲಿ: ಉಮರಾನೆ

Let children learn something new, become future scientists: Umarane

ಮಕ್ಕಳು ಹೊಸದೇನನ್ನಾದರೂ ಕಲಿತು, ಭವಿಷ್ಯದ ವಿಜ್ಞಾನಿಗಳಾಗಲಿ: ಉಮರಾನೆ  

ಮಾಂಜರಿ 24: ವಿದ್ಯಾರ್ಥಿಗಳು ವೈಜ್ಞಾನಿಕ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ವಿಜ್ಞಾನ ತಂತ್ರಜ್ಞಾನ, ವಿಶೇಷವಾಗಿ ಮೊಬೈಲ್ ಫೋನ್ ಬಳಕೆ ಹೆಚ್ಚುತ್ತಿರುವ ಕಾರಣ ಮಕ್ಕಳಲ್ಲಿ ವೈಜ್ಞಾನಿಕ ವಿಚಾರಧಾರೆ ಮತ್ತು ಮನೋಭಾವ ಬೆಳೆಸುವುದು ಬಹಳ ಅಗತ್ಯವಾಗಿದೆ. ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಮಕ್ಕಳು ಹೊಸದೇನನ್ನಾದರೂ ಕಲಿತು, ಭವಿಷ್ಯದ ವಿಜ್ಞಾನಿಗಳಾಗಬೇಕು ಎಂದು ಸಾವುಬಾಯಿ ನರವಾಡೆ ಪ್ರೌಢಶಾಲೆಯ ಮುಖ್ಯಾಧಿಪತಿ ರೇಣುಕಾ ಉಮರಾನೆ ಕರೆ ನೀಡಿದರು. ಅವರು ಸೋಮವಾರದಂದು ಮಾಂಜರಿ ಗ್ರಾಮದ ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ ಕೆ ಪಿ ಮಗೆನ್ನವರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಯೋಜಿಸಲಾದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾಯೋಗಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಮುಖ್ಯ ಅತಿಥಿಯಾಗಿ ಸಾವುಬಾಯಿ ನರವಾಡೆ ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆ ಕುಮದಾ ನಾಯಕ್ ಸದಲಗಾ ಮಾಜಿ ಶಾಸಕ ಕೆ ಪಿ ಮಗೆನ್ನವರ್ ಸಾಗರ್ ಮಂಗಸೋಳೆ ಸದಾಶಿವ ಮಿರ್ಜಿ ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶೀತಲ್ ಮಗ್ಗೆನವರ್ ಚಂದ್ರಕಾಂತ್ ಪಾಟೀಲ್ ಹಾಜರಿದ್ದರು.   ಕುಮದಾ ನಾಯಕ್ ಮಾತನಾಡಿ ಉಪಕರಣಗಳ ಕೊಡುಗೆಯ ಹಿಂದಿನ ಉದ್ದೇಶವನ್ನು ವಿವರಿಸಿದರು. ಮಕ್ಕಳು ಕೇವಲ ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತರಾಗದೆ, ಪ್ರಯೋಗಶೀಲರಾಗಬೇಕು. ಕುತೂಹಲ ಬೆಳೆಸಿಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಉಪಕರಣಗಳು ಅವರಿಗೆ ಆ ಜ್ಞಾನವನ್ನು ಬೆಳೆಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು. ಮಾಜಿ ಶಾಸಕ ಕೆ ಪಿ ಮಗ್ಗೆನ್ನವರ್ ಮಾತನಾಡಿ ವಿಜ್ಞಾನ ಕಲಿಕೆಯಲ್ಲಿ ಪ್ರಾಯೋಗಿಕ ಉಪಕರಣಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು. ವೈಜ್ಞಾನಿಕ ಮನೋಭಾವ ಬೆಳೆಸಲು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯು ಅತ್ಯಗತ್ಯ. ನಮ್ಮ ಶಾಲೆ ಈ ಉಪಕರಣಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ಭರವಸೆ ನೀಡುತ್ತದೆ. ವಿದ್ಯಾರ್ಥಿಗಳು ವಿಜ್ಞಾನವನ್ನು ಆಸಕ್ತಿಯಿಂದ ಕಲಿಯಲು ಇದು ಸಹಾಯಕವಾಗುತ್ತದೆ ಎಂದು ನುಡಿದರು.   ಸಂಸ್ಥೆಯ ಅಧ್ಯಕ್ಷ ಶೀತಲ್ ಮಗ್ಗೆನ್ನವರ್ ಮಾತನಾಡಿ ವ್ಯಾಕರಣವಿಲ್ಲದೆ ಭಾಷೆ ಇಲ್ಲ, ಸೂತ್ರಗಳಿರದೆ ಗಣಿತವಿಲ್ಲ, ವಿಜ್ಞಾನ ಉಪಕರಣಗಳಿಲ್ಲದೆ ವಿಜ್ಞಾನವಿಲ್ಲ. ನೋಡಿ ತಿಳಿ, ಮಾಡಿ ಕಲಿ ಎನ್ನುವುದಕ್ಕೆ ಸಂಪೂರ್ಣ ಅವಕಾಶವಿರುವುದು  ವಿಜ್ಞಾನ ವಿಷಯದಲ್ಲಿ ಮಾತ್ರ. ಭಾಷೆಯಲ್ಲಿ ಭಾವನಾ ಲೋಕವಿದೆ, ಕನಸಿನ ಲೋಕವಿದೆ. ಏನೇ ಕಲ್ಪಿಸಿಕೊಂಡರು ಅದು ಭಾವನಾತ್ಮಕವಾಗಿ ದೃಶ್ಯವನ್ನು ಬಿತ್ತರಿಸಬಲ್ಲದು, ಕನಸಿನ ಲೋಕದಲ್ಲಿ ಕನವರಿಸಬಹುದು. ಆದರೆ ವಿಜ್ಞಾನ ಮಾತ್ರ ಸದಾ ವಾಸ್ತವಿಕ ಮತ್ತು ಪ್ರಾಯೋಗಿಕವಾಗಿರುವುದನ್ನೇ ನಂಬುತ್ತದೆ ಹಾಗೂ ಪ್ರಮಾಣಿಕರಣದೊಂದಿಗೆ ಪ್ರಸ್ತುತ ಪಡಿಸುತ್ತದೆ. ಇಂತಹ ಪ್ರಾಯೋಗಿಕ ಜ್ಞಾನವನ್ನು ನೀಡಲು ವಿಜ್ಞಾನ ಉಪಕರಣ ಹಾಗೂ ಅದರ ಉಪಯೋಗ ಮಹತ್ವ ಪಡೆದಿದೆ ಎಂದು ಅವರು ಹೇಳಿದರು. ಇಂದಿನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಾಲೆಯ ಸುಮಾರು 155 ವಿದ್ಯಾರ್ಥಿಗಳು ಭಾಗವಹಿಸಿದ್ದರು ಶಾಲೆಯ ಮುಖ್ಯಾಧ್ಯಾಪಕ ನಜಮಾ ನೆಜಕರ ಸ್ವಾಗತಿಸಿ, ಕೀರ್ತಿ ಕೋರೆ ನಿರೂಪಿಸಿ, ಮನೀಶ್ ಖೋತ್ ವಂದಿಸಿದರು.