ವಿಜ್ಞಾನ ಒಂದು ಜನಾಂದೋಲನವಾಗಲಿ: ಗಜಾನನ ಮನ್ನಿಕೇರಿ

ಧಾರವಾಡ 06: ವಿಜ್ಞಾನ ಮತ್ತು ಜೀವನ ಬೇರೆ ಬೇರೆ ಅಲ್ಲ. ಅದು ಕೇವಲ ಒಂದು ವಿಷಯವೂ ಅಲ್ಲ. ಅದು ಬದುಕಿನ ಒಂದು ಭಾಗವಾಗಬೇಕು. ಅದರಿಂದ ಜೀವನ ಶೈಲಿ ಬದಲಾಗಬೇಕು. ಎಲ್ಲ ಮೌಢ್ಯತೆಗಳಿಂದ ನಾವು ಹೊರಬರಬೇಕು. ಅದು ಒಂದು ಜನಾಂದೋಲನದ ಮೂಲಕ ಮಾತ್ರ ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಗಜಾನನ ಮನ್ನಿಕೇರಿ ಅಭಿಪ್ರಾಯಪಟ್ಟರು.

ಜಿಲ್ಲಾ ಯೋಜನಾಧಿಕಾರಿಗಳ ಕಾಯರ್ಾಲಯ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಕನರ್ಾಟಕ ಇವರ ಸಹಯೋಗದಲ್ಲಿ ಧಾರವಾಡದ ಟಿ.ಸಿ.ಡಬ್ಲುದಲ್ಲಿ ನಡೆದ ಎರಡು ದಿನದ ಮಕ್ಕಳ ವಿಜ್ಞಾನ ಹಬ್ಬದ ಜಿಲ್ಲಾ ಮಟ್ಟದ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ವಿಜ್ಞಾನ ಹಬ್ಬ ಸಧ್ಯ ಧಾರವಾಡ ಜಿಲ್ಲೆಯಲ್ಲಿ 15 ಕ್ಲಸ್ಟರ್ಗಳಲ್ಲಿ ಮಾತ್ರ ನಡೆಯುತ್ತಿದ್ದು, ಉಳಿದ ಕ್ಲಸ್ಟರ್ಗಳಲ್ಲಿ ಗ್ರಾಮ ಪಂಚಾಯತಿ, ಸ್ಥಳೀಯ ಶಾಲೆಗಳು, ಎಸ್.ಡಿ.ಎಂ.ಸಿ ಸಹಯೋಗದಲ್ಲಿ ಹಮ್ಮಿಕೊಳ್ಳುವ ಯೋಜನೆ ಇದೆ. ಇದು ಜಿಲ್ಲೆಯ ಎಲ್ಲ ಮಕ್ಕಳು ವಿಜ್ಞಾನ ಹಬ್ಬದ ಮೂಲಕ ವೈಚಾರಿಕ, ವೈಜ್ಞಾನಿಕ ಮನೋಭಾವವನ್ನು ಹೊಂದುವ ಆಶಯ ಇಲಾಖೆಯದ್ದಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ ಮಕ್ಕಳ ವಿಜ್ಞಾನ ಹಬ್ಬದಲ್ಲಿ ಮಗು ತನ್ನ ಅರಿವಿಗೆ ಬಾರದಂತೆ ಹಾಡುತ್ತಾ, ಆಡುತ್ತಾ ಚಟುವಟಿಕೆಗಳ ಮೂಲಕ ಅನೇಕ ಕಲಿಕಾಂಶಗಳನ್ನು ಹೊಂದುತ್ತಾನೆ. ಮಕ್ಕಳು ಮೊಬೈಲ್, ಟಿವಿಯಂತಹ ಮಾಧ್ಯಮಕ್ಕೆ ಸಿಲುಕಿ ತಮ್ಮ ಕಲಿಕೆ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವುಗಳಿಂದ ದೂರವಿರಲು ಮಕ್ಕಳ ವಿಜ್ಞಾನ ಹಬ್ಬ ಸಹಕಾರಿಯಾಗಲಿದೆ. ಮಕ್ಕಳು ಸೃಜನಶೀಲರಾಗುವಲ್ಲಿ ಈ ಹಬ್ಬ ಪ್ರೇರೇಪಿಸುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ವಿಜ್ಞಾನ ಹಬ್ಬದ ರಾಜ್ಯ ಸಂಚಾಲಕ ಎಫ್.ಸಿ.ಚೇಗರಡ್ಡಿ ಮಕ್ಕಳ ವಿಜ್ಞಾನ ಹಬ್ಬ ಅತಿಥಿ-ಅತಿಥೇಯ ಮಾದರಿಯಲ್ಲಿ ನಡೆಯುತ್ತಿದ್ದು ಇದು ಮಕ್ಕಳಲ್ಲಿ ಜಾತ್ಯಾತೀತತೆ, ಸಹಕಾರ, ಸಹೋದರತೆ, ಪ್ರೀತಿ ಬೇಳೆಸಲು ಸಹಕಾರಿಯಾಗಲಿದೆ. ಇದು ವಿಜ್ಞಾನ ಮೇಳವಲ್ಲ. ವಿಜ್ಞಾನವನ್ನು ನಿತ್ಯ ಜೀವನಕ್ಕೆ ಅನ್ವಯಿಸುವ ಪ್ರಯತ್ನ. ಏಕೆ? ಹೇಗೆ? ಏನು? ಎಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ. ಇಲ್ಲಿ ಮಕ್ಕಳು ಗಮನಿಸುವುದನ್ನು ಕಲಿಯಲು ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

ತರಬೇತಿ ಕೈಪಿಡಿಯನ್ನು ಜಿಲ್ಲಾ ಯೋಜನಾಧಿಕಾರಿ ಎನ್.ಕೆ.ಸಾಹುಕಾರ ಬಿಡುಗಡೆಗೊಳಿಸಿದರು. ಜಿಲ್ಲೆಯ 15 ಕ್ಲಸ್ಟರಿನಿಂದ 80ಕ್ಕೂ ಹೆಚ್ಚು ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಉಪಸಮನ್ವಯಾಧಿಕಾರಿ ಮಹಾಲೆ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ದುಬ್ಬನಮರಡಿ, ಸಹಾಯಕ ಯೋಜನಾ ಸಮನ್ವಯಾಧಿಕಾರಿ ಭೂತಾಳೆ, ಬಿಜಿವಿಎಸ್ ಜಿಲ್ಲಾ ಅಧ್ಯಕ್ಷ ಗುರು ತಿಗಡಿ, ಶಿಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಆರ್.ಎಮ್.ಹೊನ್ನಪ್ಪನವರ ಸೇರಿದಂತೆ ಜಿಲ್ಲೆಯ ಎಲ್ಲ ಸಮನ್ವಯಾಧಿಕಾರಿಗಳು, ಸಿ.ಆರ್.ಪಿಗಳು, ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಎಸ್.ಎಫ್.ಪಾಟೀಲ ಹಾಗೂ ಡಾ.ಲಿಂಗರಾಜ ರಾಮಾಪೂರ ಜಾಗೃತಿ ಗೀತೆಗಳನ್ನು ಹೇಳಿದರು.

ಕಾರ್ಯಕ್ರಮ ಸಂಯೋಜಕ ಎಸ್.ಎನ್.ಕಳಸಣ್ಣವರ ಸ್ವಾಗತಿಸಿದರು. ಎಲ್.ಆಯ್.ಲಕ್ಕಮ್ಮನವರ ಕಾರ್ಯಕ್ರಮ ನಿರ್ವಹಿಸಿದರು. ಸುಮಿತಾ ಹಿರೇಮಠ ವಂದಿಸಿದರು.