ಕರಾಳ ದಿನ ಆಚರಿಸಲು ಎಂಇಎಸ್ಗೆ ಅವಕಾಶ ಅವಕಾಶ

ನೀಡಬೇಡಿ : ಮುಖ್ಯಮಂತಿಗಳಿಗೆ ಕರವೇ ಮನವಿ

ಲೋಕದರ್ಶನ ವರದಿ

ವಿಜಯಪುರ 17 : ಬೆಳಗಾವಿಯಲ್ಲಿ ಕನರ್ಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಎಂ.ಇ.ಎಸ್ಗೆ ಕರಾಳ ದಿನಾಚರಣೆಗೆ ಅವಕಾಶ ನೀಡಬಾರದೆಂದು ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಬೆಳಗಾವಿಯಲ್ಲಿ ನವ್ಹೆಂಬರ್ 1 ರಂದು ಕನರ್ಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಎಂ.ಇ.ಎಸ್. ನವರ ಕರಾಳ ದಿನಾಚರಣೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ವೀರರಾಣಿ ಕಿತ್ತೂರು ಚೆನ್ನಮ್ಮನ ನೆಲವೀಡು, ವೀರಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ ಕರ್ಮಭೂಮಿ ಬೆಳಗಾವಿ ಕನರ್ಾಟಕ ಅವಿಭಾಜ್ಯ ಅಂಗವಾಗಿದ್ದರೂ, ಕೆಲ ನಾಡದ್ರೋಹಿ, ಸಮಾಜಘಾತಕ ಶಕ್ತಿಗಳು ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಸಂಘಟನೆಯ ಹೆಸರಿನಲ್ಲಿ ಹಲವು ದಶಕಗಳಿಂದ ಪುಂಡಾಟಿಕೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗದೆ. ಈ ನಾಡದ್ರೋಹಿ ಸಂಘಟನೆಯು ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1 ರಂದು ಕರಾಳ ದಿನಾಚರಣೆ ಮಾಡುತ್ತ ಬಂದಿದ್ದು, ಮರಾಠಿ ಜನಸಮುದಾಯವನ್ನು ಕನ್ನಡಿಗರ ಮೇಲೆ, ಕನರ್ಾಟಕ ಸಕರ್ಾರದ ಮೇಲೆ ಎತ್ತಿಕಟ್ಟುವ ಕಾರ್ಯವನ್ನು ಎಗ್ಗಿಲ್ಲದಂತೆ ಮಾಡುತ್ತ ತನ್ಮೂಲಕ ಬೆಳಗಾವಿಯಲ್ಲಿ ಉದ್ರಕ್ತ ಪರಿಸ್ಥಿತಿಯನ್ನು ನಿಮರ್ಾಣ ಮಾಡುತ್ತಾ ಜನರ ನಡುವೆ ಸಂಘರ್ಷವನ್ನು ಹುಟ್ಟಿಸುತ್ತಾ ಜೀವಹಾನಿ, ಆಸ್ತಿಪಾಸ್ತಿ ಹಾನಿಗೆ ಕಾರಣವಾಗುತ್ತ ಬಂದಿದೆ. ಇದಲ್ಲದೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ತನ್ನ ನಿಲುವನ್ನು ಪ್ರತಿಪಾದಿಸುತ್ತ ಮರಾಠಿ ಮಹಾಮೇಳಾವಗಳನ್ನು ಆಯೋಜಿಸಿ ಇದಕ್ಕೆ ಮಹಾರಾಷ್ಟ್ರದಿಂದ ಕೆಲವು ಕುಚೇಷ್ಟೇಯ ರಾಜಕಾರಣಿಗಳನ್ನು ಕರೆಯಿಸಿ, ಅವರಿಂದ ಕನ್ನಡಿಗರ ಮತ್ತು ಕನರ್ಾಟಕ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡಿಸುತ್ತ ಬಂದಿದೆ. ಅದೇ ರೀತಿ ಬೆಳಗಾವಿ  ಜಿಲ್ಲೆಯಾದ್ಯಂತ ಹಲವು ಗ್ರಾಮ, ಪಟ್ಟಣಗಳ ಹೆಸರಿನ ನಾಮಫಲಕಗಳಲ್ಲಿ ಮಹರಾಷ್ಟ್ರ ರಾಜ್ಯ ಎಂದು ಬರೆಯುವ ಮೂಲಕ ಕನ್ನಡಿಗರ, ಸ್ವಾಭಿಮಾನವನ್ನು ಕೆರೆಳಿಸುವ ಜತೆ ಜತೆಗೆ ನೇರವಾಗಿ ಕನರ್ಾಟಕ ಸಕರ್ಾರಕ್ಕೆ ಸವಾಲು ಒಡ್ಡುತ್ತ ಬಂದಿದೆ. ಸರಕಾರ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದರು.

ರಾಜ್ಯ ಸಂಚಾಲಕ ಸಂತೋಷ ಪಾಟೀಲ ಡಂಬಳ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರೇಷ್ಮಾ ಪಡೇಕನೂರ ಮಾತನಾಡಿ,  ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ ಮಾತನಾಡಿ, ರಾಜ್ಯೋತ್ಸವ ದಿನದಂದು ಯಾವುದೇ ಕಾರಣಕ್ಕೂ ಎಂಇಎಸ್ ಕರಾಳ ದಿನ ಆಚರಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಕರವೇ ಮುಖಂಡರಾದ ಮಹಾದೇವ ರಾವಜಿ, ದಸ್ತಗೀರ ಸಾಲೋಟಗಿ, ದಯಾನಂದ ಸಾವಳಗಿ, ಅಶೋಕ ನಾವಿ, ರಾಜು ಕುಲಕಣರ್ಿ, ಕಲ್ಲು ಸೊನ್ನದ, ಮಂಜುನಾಥ ಹಿರೇಮಠ, ಮಡುಗೌಡ ಬಿರಾದಾರ, ಮನ್ನಾನ ಶ್ಯಾಬಾದಿ, ಫಯಾಜ ಕಲಾದಗಿ, ಭರತಕೋಳಿ, ಯಾಕೂಬ ಕೋಪರ, ರಮೇಶ ಮಸೀಮನಾಳ, ಮನೋಹರ ತಾಜವ, ಆನಂದ ಹಡಗಲಿ, ಮಹಾದೇವ ಬನಸೋಡೆ, ನಸೀನ ರೋಜೀಂದಾರ, ಮಂಜುನಾಥ ಬಡಿಗೇರಿ, ನಿಸಾರ ಬೇಪಾರಿ, ಜೈಭೀಮ ಮುತ್ತಗಿ, ರಜಾಕ ಕಾಖಂಡಕಿ, ಹಾಜೀಮಲ್ಲಂಗ ಬಡೇಗರ, ಶೇಖರ, ಉಮೇಶ ಅವಟಿ,  ಬಾಳು ಮುಳಜಿ, ಶ್ರೀಕಾಂತ ಬಿಜಾಪುರ, ಮಹಿಬೂಬ ಬೇನೂರ, ಆಸೀಫ ಪೀರವಾಲೆ, ಅನೀಸ್ ಮನಿಯಾರ, ಬಸವರಾಜ ಕಾತ್ರಾಳ, ಸತೀಶ ನರಸರಡ್ಡಿ, ರಾಜಶೇಖರ ಹನಗಂಡಿ, ಅಣ್ಣಪ್ಪ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.