ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅನೇಕ ಸಮಸ್ಯೆ ಇತ್ಯರ್ಥವಾಗಲಿ ಕೆಂಗನಾಳ

Let Kengana solve many problems of North Karnataka in the Belgaum session

ಬೆಳಗಾವಿ ಅಧಿವೇಶನದಲ್ಲಿ  ಉತ್ತರ ಕರ್ನಾಟಕದ ಅನೇಕ ಸಮಸ್ಯೆ ಇತ್ಯರ್ಥವಾಗಲಿ ಕೆಂಗನಾಳ 

ಇಂಡಿ 08: ಬೆಳಗಾವಿಯ ಅಧಿವೇಶನ ಉತ್ತರ ಕರ್ನಾಟಕದ ಜನರ ಸಂಕಷ್ಟಗಳಿಗೆ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ ಮತ್ತು ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರು ತೊಗರಿಬೇಳೆ ಹನಿಯಾಗಿದ್ದು, ಸದನದ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೊಡುವ ಕೆಲಸವಾಗಲಿ. 

ಕಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಬೇಡ,ಸಾರ್ವಜನಿಕರು ಕಟ್ಟಿರುವ ಕೋಟ್ಯಾಂತರ  ತೆರಿಗೆ ಹಣವನ್ನು ವ್ಯರ್ಥ ಮಾಡದೆ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಹಣವನ್ನು ನೀಡಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು  ಪ್ರಾರಂಭಿಸಬೇಕು , ರೈತರ ಸಮಸ್ಯೆಗಳು, ವಕ್ಫ್‌ ಮಾರಕ ಕಾಯ್ದೆಯಿಂದ ಜಮೀನು, ಮಠ ಮಂದಿರಗಳ ಆಸ್ತಿಗಳನ್ನು  ಕಳೆದುಕೊಳ್ಳುವ ಭಯದಲ್ಲಿರುವ ರೈತರು ಹಾಗೂ ಸಾಮಾನ್ಯ ಜನರ ಗಂಭೀರ ಸಮಸ್ಯೆಗಳ ಕುರಿತು ಶಾಶ್ವತ ಪರಿಹಾರ ಕಂಡುಹಿಡಿಯಲು, ಪಕ್ಷಾತೀತವಾಗಿ ಸಚಿವರುಗಳು ಶಾಸಕರುಗಳು ಸ್ಪಂದಿಸಬೇಕೆನ್ನುವ ಅಭಿಲಾಷೆ ಉತ್ತರ ಕರ್ನಾಟಕದ ಜನತೆ ಇಟ್ಟುಕೊಂಡಿದ್ದಾರೆ,  ಸರ್ವ ಸಮಸ್ಯೆಗಳಿಗೆ ಸರಕಾರ ಅರ್ಥಪೂರ್ಣ ಚರ್ಚೆ ಮಾಡಿ, ಸಮಸ್ಯೆಗಳನ್ನು ಬಗೆಹರಿಸಲಿ ಎಂಬುದೇ ಅಧಿವೇಶನದ ಮುಖ್ಯ ಉದ್ದೇಶವಾಗಿರಲಿ,  

ಸಣ್ಣಪುಟ್ಟ ವಿಚಾರಗಳನ್ನು ಮಧ್ಯದಲ್ಲಿ ತಂದು ಅಧಿವೇಶನವನ್ನು ಮುಂದೂಡುವದು, ಬಹಿಷ್ಕರಿಸುವುದು,ಮೋಜು ಮಸ್ತಿ ಮಾಡಿ ಸಮಯ ಹಾಳು ಮಾಡುವುದಕ್ಕಿಂತ, ಪ್ರತಿಯೊಬ್ಬ ಶಾಸಕರುಗಳು ಚರ್ಚೆಯಲ್ಲಿ ಭಾಗವಹಿಸಿ, ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಿ, ಇಲ್ಲವಾದರೆ ನಮ್ಮ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾವು ದ್ವನಿ ಎತ್ತಬೇಕಾಗುತ್ತದೆ ಎಂದು ಕರವೇ ಅಧ್ಯಕ್ಷರು ಹಾಗೂ ವಿಜಯಪೂರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಶಿವರಾಜ್ ಕೆಂಗನಾಳ ಪತ್ರಿಕಾ ಪ್ರಕಟಣೆಗೆ ಮೂಲಕ ಆಗ್ರಹಿಸಿದ್ದಾರೆ.