ಬಸವರಾಜ ಬೊಮ್ಮಾಯಿ ತಮ್ಮ ಪಕ್ಷದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ- ಮಣ್ಣಣ್ಣವರ
ಶಿಗ್ಗಾವಿ 30: ಬಿಜೆಪಿ ಪಕ್ಷಕ್ಕೆ ಆಗಿರುವ ಲಾಭದ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ ನಂತರ ಕಾಂಗ್ರೆಸ್ ಪಕ್ಷದ ಅಸಲಿ ಮತ್ತು ನಕಲಿ ಇತಿಹಾಸ ಕುರಿತು ಮಾತನಾಡಲಿ ಎಂದು ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಮಂಜುನಾಥ ಮಣ್ಣಣ್ಣವರ ಹೇಳಿದರು.
ಹಾವೇರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಗಾಂಧಿ ಭಾರತ ಕಾರ್ಯಕ್ರಮ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು ನಿಮ್ಮ ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಅದನ್ನು ನಿಮ್ಮ ಪಕ್ಷಕ್ಕೆ ತಿಳಿಸಿ ಎಂದು ಮಂಜುನಾಥ ವ್ಯಂಗ್ಯವಾಡಿದ್ದಾರೆ.
ಬಿಜೆಪಿಗೆ ಬರುವ ಮೊದಲು ಬಿಜೆಪಿಯ ಪಕ್ಷದ ತತ್ವ ಸಿದ್ಧಾಂತ ಕಾರ್ಯಕರ್ತರ ಶ್ರಮ ಯಾವ ರೀತಿ ಇತ್ತು ನೀವು ಬಿಜೆಪಿಗೆ ಬಂದ ನಂತರ ನಿಮ್ಮ ಸ್ವಹಿತಾಶಕ್ತಿ ರಾಜಕಾರಣಕ್ಕೆ ಅಸಲಿ ಬಿಜೆಪಿಯ ತತ್ವ ಸಿದ್ಧಾಂತಗಳನ್ನೇ ಗಾಳಿಗೆ ತೂರಿ ನಿಮ್ಮ ಗೃಹ ಮಂತ್ರಿ ಹಾಗೂ ಮುಖ್ಯಮಂತ್ರಿ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚು ನೋವು ಹಾಗೂ ಸಾವುಗಳಾಗಿದ್ದು ಈ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಅಳಲು ತೋಡಿಕೊಂಡ ಇತಿಹಾಸವಿದೆ.
ಈ ಕುರಿತು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ ನೀವು ಯಡಿಯೂರ್ಪನವರಿಗೆ ತೋರಿಸಿದ ನಿಷ್ಠೆ ಹಾಗೂ ವಿಶ್ವಾಸ ಎಂಥದ್ದು ಅದಕ್ಕೆ ಕೆಜೆಪಿ ಪಕ್ಷ ಕಟ್ಟಿದಾಗ ಯಡಿಯೂರ್ಪನವರು ಶಿಗ್ಗಾವ್ ಬಂದು ಕಾಮಧೇನುವೀನ ಪಾಠ ಹೇಳಿದ ಮಾತುಗಳು ಜನರು ಮರೆತಿಲ್ಲ ಜೊತೆಗೆ ಜನತೆ ಆಶೀರ್ವದಿಸಿಪಕ್ಷ ಅವಕಾಶ ಕೊಟ್ಟಾಗ ಜನಸಾಮಾನ್ಯರಿಗೆ ಯಾವತ್ತೂ ಕೈಗೆ ಸಿಗಲಿಲ್ಲ ರೈತರು ಬಡವರಿಗೆ ಸ್ಪಂದಿಸಲಿಲ್ಲ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರನ್ನು ಯಾವತ್ತು ಕಣ್ಣೆತ್ತಿ ನೋಡಲಿಲ್ಲ ಎಂಬುದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಾರೆ ನೀವು ಇದೀಗ ಕಾಂಗ್ರೆಸ್ ಪಕ್ಷದ ಅಸಲಿ ನಕಲಿ ಬಗ್ಗೆ ಮಾತನಾಡುತ್ತಿದ್ದೀರಿ ಮೊದಲು ನಿಮ್ಮ ಆಡಳಿತಾವಧಿಯ ಕಾರ್ಯ ವೈಖರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಗಾಂಧಿ ಭಾರತದ ಕಾರ್ಯಕ್ರಮ ಮತ್ತು ನಮ್ಮ ಮುಖಂಡರ ಬಗ್ಗೆ ಮಾತನಾಡುತ್ತಿರುವುದು ಹಾಶಾಸ್ಪದ ಅಷ್ಟೇ ಎಂದರು.