ಲೋಕದರ್ಶನರವದಿ
ಹುಬ್ಬಳ್ಳಿ೨೭: ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಬಹಳಷ್ಟು ಪಾವಿತ್ರ್ಯತೆಯಿದೆ. ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಶ್ರೇಷ್ಠವಾಗಿದೆ. ಗೃಹಸ್ಥಾಶ್ರಮದಲ್ಲಿ ಪಾದಾರ್ಪಣೆ ಮಾಡಿದ ದಂಪತಿಗಳ ಬಾಳು ಉಜ್ವಲವಾಗಲೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಶುಭ ಹಾರೈಸಿದರು.
ಅವರು ತಾಲೂಕಿನ ಪಾಲಿಕೊಪ್ಪ ಗ್ರಾಮದ ಹಾದಿ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಗೃಹಸ್ಥ ಜೀವನ ಅತ್ಯಂತ ಪವಿತ್ರವಾಗಿದ್ದು ಅವರಲ್ಲಿರುವ ಸಹನೆ, ತಾಳ್ಮೆ ಮತ್ತು ಸೇವಾ ಮನೋಭಾವ ಬೇರೆಲ್ಲಿಯೂ ಕಾಣಲಾಗದು. ಸತಿ ಪತಿಗಳು ಪರಸ್ಪರ ಅರಿತು ಬೆರೆತು ಬಾಳುವುದರಲ್ಲಿ ಜೀವನದ ಶ್ರೇಯಸ್ಸಿದೆ. ಸುಖ ದು:ಖ, ನೋವು ನಲಿವು ಎಲ್ಲಾ ಸಂದರ್ಭಗಳಲ್ಲಿ ಒಂದಾಗಿ ಬೆರೆತು ಬಾಳುವುದು ಸುಖ ಜೀವನಕ್ಕೆ ಕಾರಣವಾಗುತ್ತದೆ.
ಮಹಿಳೆಯರಿಗೆ ಧಾಮರ್ಿಕ ಸಂಸ್ಕೃತಿಯ ಜೊತೆಗೆ ಮನೆತನದ ಗೌರವ ಘನತೆ ಎತ್ತಿ ಹಿಡಿಯುವ ಬಹು ದೊಡ್ಡ ಜವಾಬ್ದಾರಿಯಿದೆ. ವೀರಶೈವ ಧರ್ಮದಲ್ಲಿ ಮಹಿಳೆಯರಿಗೆ ಸಮಾನ ಧಮರ್ಾಚರಣೆ ಅಧಿಕಾರವನ್ನು ಜಗದ್ಗುರು ರೇಣುಕಾಚಾರ್ಯರು ಕೊಟ್ಟಿದ್ದನ್ನು ಮರೆಯಲಾಗದು. ಮುತ್ತೈದೆಯರಿಗೆ ಹಸಿರು ಬಳೆ, ಕುಂಕುಮ, ಕರಿಮಣಿ ಸರ, ಮೂಗುತಿ, ಮಾಂಗಲ್ಯ ಕೊಟ್ಟ ಕೀತರ್ಿ ಪಂಚ ಪೀಠಗಳಿಗೆ ಸಲ್ಲುತ್ತದೆ.
ಜಾತ್ರಾ ಮಹೋತ್ಸವ ನಿಮಿತ್ಯ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು. ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮತ್ತು ಬಂಕಾಪುರದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಹಾದಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ ರಂಭಾಪುರಿ ಜಗದ್ಗುರುಗಳಿಗೆ ಮತ್ತು ಉಭಯ ಶ್ರೀಗಳಿಗೆ ರೇಶ್ಮೆ ಮಡಿ ಹೊದಿಸಿ ಗೌರವಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಉಮೇಶ ಕುಸುಗಲ್ಲ ಸ್ವಾಗತಿಸಿದರು. ಬಸವರಾಜ ಹೊಂಬಳ ನಿರೂಪಿಸಿದರು. ಎಸ್.ವಿ. ಸೋಮಣ್ಣನವರ ಹಾಗೂ ಕುಮಾರ ಅಭಿಷೇಕ ಸಂಗೀತ ಸೇವೆ ಸಲ್ಲಿಸಿದರು.