ಬೆಳಗಾವಿ 12- ಜನಪದ ಸಾಹಿತ್ಯ ಹಾಸ್ಯದೊಂದಿಗೆ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ. ಅನಕ್ಷರಸ್ತರು ನಮಗೆ ಕೊಟ್ಟ ಅದ್ಭುತ ಸಾಹಿತ್ಯವಿದು ಇದರಲ್ಲಿ ಅಗಾಧ ಶಕ್ತಿ ಅಡಗಿದೆ. ನಗಿಸುವುದರೊಂದಿಗೆ ಜಾನಪದ ಸಾಹಿತ್ಯವನ್ನು ಎಲ್ಲ ಜನರನ್ನು ತಲುಪಿಸುವ ಕಾರ್ಯವನ್ನು ಮಾಡೋಣ. ನಗುವಿಗೆ ಸಂಜೀವಿನ ಶಕ್ತಿ ಇದೆ. ಅಳು ಮರೆಸೋಣ, ನಗು ಮೆರೆಸೋಣ ಎಂದು ಜಾನಪದ ಮತ್ತು ಹಾಸ್ಯ ಕಲಾವಿದರಾದ ಯಲಬುಗರ್ಾದ ಕುರನಾಳ ಗ್ರಾಮದ ಶರಣು ಕುರ್ನಾ ಳ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೆ ದಿ. 12 ಶನಿವಾರ ಸಾ. 4-30 ಗಂಟೆಗೆ ಸಾಹಿತ್ಯ ಭವನ ಸಭಾಭವನದಲ್ಲಿ 'ಬನ್ನಿ' ನಗುವ ಬನ್ನಿ!' ದಸರಾ ಹಬ್ಬದ ನೆನಪಿನಲ್ಲಿ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಯುವಕಲಾವಿದ ಶರಣು ಕುನರ್ಾಳ ಇಂದಿಲ್ಲಿ ಹೇಳಿದರು
ಮಕ್ಕಳಿಗೆ ವಿದ್ಯೆಯನ್ನು ನೀಡುತ್ತಿದ್ದೇವೆ ಆದರೆ ಅದರೊಂದಿಗೆ ನೀಡಬೇಕಾದ ಸಂಸ್ಕಾರದತ್ತ ಗಮನ ಹರಿಸುತ್ತಿಲ್ಲ. ಮಕ್ಕಳಿಗೆ ಸಂಸ್ಕಾರ ಅತ್ಯಗತ್ಯ. ಸಾಹಿತ್ಯದ ಓದು ನಮಗೆ ಸಂಸ್ಕಾರ ನೀಡುತ್ತದೆ ಎಂದು ಹೇಳಿದ ಅವರು ಹಲವಾರ ನಗೆ ಪ್ರಸಂಗ, ನಗಹನಿಗಳನ್ನು ಹಾಂಚಿಕೊಂಡು ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರಾಯೋಜಕತ್ವವನ್ನು ವಹಿಸಿದ್ದ ನಾಟಕಕಾರ ಶಿರೀಷ ಜೋಶಿಯವರು ಮಾತನಾಡಿ ಪ್ರತಿಯೊಬ್ಬರಿಗೂ ನಗು ಬೇಕು. ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಜೀವನದ ಜೊತೆ ಜೊತೆಗೆ ನಗು ನಡೆದುಕೊಂಡು ಬಂದಿರುತ್ತದೆ. ನಗುವಿಲ್ಲದ ಜೀವನ ನೀರಸ ಎಂದು ಹೇಳಿದರು. ತಮ್ಮ ವೃತ್ತಿ ಜೀನದಲ್ಲಿ ನಡೆ ನಗೆ ಪ್ರಸಂಗಗಳನ್ನು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಶೋಕ ಮಳಗಲಿ ಹಾಸ್ಯಕೂಟದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನನಗ ತುಂಬ ಖುಷಿ ಎನ್ನಿಸುತ್ತದೆ. ಎಂದು ಹೇಳಿ ಕೆಲ ಹಾಸ್ಯ ಪ್ರಸಂಗಳನ್ನು ಹಂಚಿಕೊಂಡಸರು. ಶ್ರೀಮತಿ ಜಯಶ್ರೀ ನಿರಾಕಾರಿ ಹಾಗೂ ಕಿರಣ ಯಲಿಗಾರ ತಮ್ಮ ಮಾತುಗಳಿಂದ ಜನರನ್ನು ನಗಿಸಿದರು.
ಕಾರ್ಯಕ್ರಮದ ಕುರತು ಪ್ರತಿಕ್ರಿಯೆ ನೀಡಿದ ಎಸ್. ವಿ .ದೀಕ್ಷಿತ ಅವರು ಮಾತನಾಡಿ ಯುವ ನಗೆ ಮಾತುಗಾರ ಶರಣು ಕುನರ್ಾಳ ಅವರಲ್ಲಿ ಒಳ್ಳೆಯ ಪ್ರತಿಭೆಯಿದೆ. ರಾಜ್ಯ, ರಾಷ್ಟ್ರದಲ್ಲಿ ನಗೆಮಾತುಗಾರರಾಗಿ ಹೆಸರು ಮಾಡುವ ಎಲ್ಲ ಅಂಶಗಳನ್ನೂ ಅವರು ಹೊಂದಿದ್ದಾರೆ ಎಂದು ಹೇಳಿದ ಅವರು ಗಂಡ ಹೆಂಡಿರ ನಡುವಿನ ಅನ್ಯೊನ್ಯ ಸಂಬಂಧ ಕುರಿತಂತೆ ಅಶೋಕ ಮಳಗಲಿಯವರ ನಗೆಹನಿ, ಶಿರೀಷ ಜೋಶಿಯವರು ಹೇಳಿದ ಭಾಷಾ ಬಾಂಧವ್ಯ ಮೆರೆವ ಝರಾಕ್ಸ ಪ್ರಸಂಗ, ಕಿರಣ ಯಲಿಗಾರ ಅವರ ಮಹಾಪೂರ ನಡೆದ ಅವಾಂತರಗಳು ಶ್ರೀಮತಿ ಜಯಶ್ರೀ ನಿರಾಕಾರಿಯವರ ವಧು ಪರೀಕ್ಷ ಪ್ರಸಂಗ, ಪ್ರೋ ಜಿ. ಕೆ. ಕುಲಕಣರ್ಿ ತಮಗೆ ಕಲಿಸುವ ಮಾಸ್ತರರಿಗೆ ರೊಟ್ಟಿ ಮಾಡಿಕೊಡಲು ಮನೆಗೆ ಬರುವಂತೆ ಹೇಳಿದ ಬಾಲ್ಯದ ಪ್ರಸಂಗವನ್ನು ಹಂಚಿಕೊಂಡರು. ಒಟ್ಟಿನಲಿ ಇದೊಂದು ಸುಂದರ ಸಂಜೆಯಾಗಿತ್ತು. ಎಲ್ಲರ ಮಾತುಗಳು ಜನರನು ರಂಜಿಸುವಲ್ಲಿ ಯಶಸ್ವಿಯಾದವು ಎಂದು ಹೇಳಿದರು.
ಡಾ. ಸಿದ್ದನಗೌಡ ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನು ಹಂಚಿಕೊಂಡರು. ಪ್ರೋ. ಜಿ. ಕೆ. ಕುಲಕಣರ್ಿ ನಿರೂಪಿಸಿದರು.