ಮಣಂಕಲಗಿ ಗ್ರಾಮದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ: ಇಬ್ಬರ ಮೇಲೆ ದಾಳಿ
ಚಡಚಣ 15: ತಾಲೂಕಿನ ಮಣಂಕಲಗಿ ಗ್ರಾಮದ ಕರೆಯ ಹತ್ತಿರ ಜಕ್ಕಪ್ಪ ಉಟಗಿ ರವರ ದ್ರಾಕ್ಷಿ ತೋಟದಲ್ಲಿ ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡಿದೆ. ಶುಕ್ರವಾರ 13ರಂದು ಮುಂಜಾನೆ 6 ಗಂಟೆಯ ಸುಮಾರಿಗೆ ಮಣಂಕಲಗಿ ಗ್ರಾಮದ ರೈತ ಕಲ್ಲಪ್ಪ ಕ್ವಾಟಾಳೆ ರವರ ಮೇಲೆ ಚಿರತೆ ದಾಳಿ ಮಾಡಿದೆ, ನಂತರ ಸುತ್ತಲಿನ ಹಳ್ಳಿಗಳಿಗೆ ಮತ್ತು ಪೋಲಿಸ್, ಹಾಗೂ ಅರಣ್ಯ ಸಿಬ್ಬಂದಿ ಗಳಿಗೆ ದೂರವಾಣಿ ಕರೆ ಮಾಡಿ ಚಿರತೆ ದಾಳಿ ಮಾಡಿದ ಘಟನೆ ಬಗ್ಗೆ ದೂರು ನೀಡಿದರು. ಈ ವಿಷಯ ತಿಳಿದು ಝಳಕಿ ಪೋಲಿಸ್ ಠಾಣಿಯ ಪಿಎಸ್‌ಆಯ್ ಎಸ್ ಬಿ ಪಾಟೀಲ, ಶಿಬ್ಬಂದಿ ಹಾಗೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸುತ್ತಲಿನ ಗ್ರಾಮಗಳ ಗ್ರಾಮಸ್ಥರ ಹಾಗೂ ಹಲಸಂಗಿ ಗ್ರಾಮದ ಗೊಲ್ಲರ ಸಾಹಾಯ ದಿಂದ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಿದರು. ಸುಮಾರು 4- 5 ಗಂಟೆಗಳ ಕಾಲ ಚಿರತೆ ಹಿಡಿಯಲು ಹರ ಸಹಾಸ ಪಟ್ಟರು ಕೊನೆಯಲ್ಲಿ ಜೋಳ ತೋಟದಿಂದ ವ್ಯಕ್ತಿ ಗಳ 3 ಜನರ ಮೇಲೆ ದಾಳಿ ಮಾಡಿ, ದ್ರಾಕ್ಷಿ ತೋಟದಲ್ಲಿ ಸೇರಿತು, ನಂತರ ಹಲಸಂಗಿ ಗ್ರಾಮದ ಯುವಕರು ಬಲಿ ಹಾಕಿ ಚಿರತೆ ಸೆರೆ ಹಿಡಿದು, ಟ್ರ್ಯಾಕ್ಟರ ಮೂಲಕ ಚಿರತೆ ಕಬ್ಬಿಣದ ಗರಡಿ ಮನೆಯಲ್ಲಿ ಚಿರತೆ ಹಾಕಲಾಯಿತು. ಚಿರತೆಯಿಂದ ದಾಳಿಗೆ ಒಳಗಾದ ವ್ಯಕ್ತಿಗಳು ಸಂತೋಷ ತಾಂಬೆ, ಈರಣ್ಣಾ ಮೇತ್ರಿ ಗೋಟ್ಯಾಳ, ಮಾದೇವ ಯಾದವಾಡ ಮಣಂಕಲಗಿ, ಹೀಗೆ ಇನ್ನೂ ಒಬ್ಬರು ಮೇಲೆ ಚಿರತೆ ದಾಳಿ ಮಾಡಿದೆ. ದಾಳಿಗೊಳಗಾದವರನ್ನು ತಾಲೂಕಿನ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಣಂಕಲಗಿ ಗ್ರಾಮದ ಸದಸ್ಯ ಹಣಮಂತ ಕೋಳಿ, ನಾಗನಾಥ ಬಿರಾದಾರ, ಸೋಮಶೇಖರ್ ಮಾಳಬಾಗಿ, ರುದ್ರು ಲೋಣಿ, ವಿಠ್ಠಲ ವಡಗಾಂವ ಸೇರಿ ಹಲಸಂಗಿ ಮತ್ತು ಬರಡೋಲ ಗ್ರಾಮದ ಗೊಲ್ಲರ ಯುವಕರು ಚಿರತೆ ಸೆರೆ ಹಿಡಿಯಲು ಸಹಕರಿಸಿದ ವ್ಯಕ್ತಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಪಿ ಜೆ ಕೊಡಹೊನ್ನ ಕಂದಾಯ ನೀರೀಕ್ಷಕರು ಚಡಚಣ, ಝಳಕಿ ಪೋಲಿಸ್ ಠಾಣೆ ಪಿಎಸ್‌ಐ ಎಸ್.ಬಿ ಪಾಟೀಲ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಚಿದಾನಂದ ದಟ್ಟಿ, ಗಣೇಶ ಪಾಟೀಲ್ ಪಂಚಾಯಿತಿ ಸಿಬ್ಬಂದಿ ಮತ್ತು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಪೋಲೀಸ್ ಇಲಾಖೆ ಸಿಬ್ಬಂದಿಗಳು ಇದ್ದರು.