ಮಹಾನಗರ ಪಾಲಿಕೆಯ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಅನಿಲ ಬೆನಕೆ

ಬೆಳಗಾವಿ 01: ದಿ.01ರಂದು ಶಾಸಕ ಅನಿಲ ಬೆನಕೆರವರು ನಗರದ ಮಹಾನಗರ ಪಾಲಿಕೆಯಲ್ಲಿನ ಶಾಸಕರ ಕಚೇರಿಯಲ್ಲಿ ಇಂದು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಈ ಸಭೆಯಲ್ಲಿ ನಗರದಲ್ಲಿ ಇತ್ತಿಚೆಗೆ ಸುರಿದ ಬಾರಿ ಮಳೆಯಿಂದ ಹಲವಾರು ಕಾಯಿಲೆಗಳು ಹರಡುವ ಮುನ್ನೆಚ್ಚರಿಕೆ ಕ್ರಮವಾಗಿ ಮಹಾನಗರ ಪಾಲಿಕೆಯು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ಪಡೆದುಕೊಂಡರು. ನಂತರದಲ್ಲಿ ಮಳೆಯಿಂದಾಗಿ ಉಂಟಾಗುವ ಡೆಂಗ್ಯೂ, ಮಲೇರಿಯಾ, ಹೆಚ್ 1. ಎನ್ 1 ಹಾಗೂ ಕಾಲರಾ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕೆಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಿ ನಗರದಲ್ಲಿನ ಗಟಾರು, ನಾಲಾಗಳನ್ನು ಸ್ವಚ್ಚವಾಗಿಡುವಂತೆ ಕ್ರಮ ತೆಗೆದುಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆದಷ್ಟು ಬೇಗನೆ ನಿವಾರಣೆ ಮಾಡಬೇಕೆಂದು ಹೇಳಿದರು. 

ತದನಂತರದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಭೆ ನಡೆಸಿದ ಶಾಸಕ ಅನಿಲ ಬೆನಕೆರವರು ನಗರದ ರಾಕಸಕೊಪ್ಪ ಜಲಾಶಯವು ಭತರ್ಿಯಾಗಿದ್ದರಿಂದ ಕೆಲವು ಪ್ರದೇಶಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಸಮಸ್ಯೆಗಳು ಕಂಡುಬಂದಿದ್ದು ಅದನ್ನು ಸರಿಪಡಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆಯೆ ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಬೋರವೆಲ್ಗಳನ್ನು ಕೊರೆಯುವುದರ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದರು ಹಾಗೆಯೆ ನಗರದಲ್ಲಿ ಬಾರಿ ಮಳೆಯಾಗುತ್ತಿರುವುದರಿಂದ ಅತೀವೃಷ್ಠಿಯಿಂದಾಗುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಮಹಾನಗರ ಪಾಲಿಕೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದ್ದು, ತಂಡಗಳ ಪಟ್ಟಿಯಲ್ಲಿ ಆಯಾ ಅಧಿಕಾರಿಗಳ ದೂರವಾಣಿ ಸಂಪರ್ಕವಿದ್ದು  ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತಿಳಿಸುವಂತೆ ನಗರದ ಜನತೆಗೆ ವಿನಂತಿಯನ್ನು ಮಾಡಿದರು.

ಈ ಸಂದರ್ಬದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ನಾಡಗೌಡ,  ಉದಯಕುಮಾರ ಹಾಗೂ ಇತರರು ಮತ್ತು ಜಲಮಂಡಳಿ ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರ ಚಂದ್ರಪ್ಪ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಲನ್ನವರ ಹಾಗೂ ಶಾಸಕರ ಆಪ್ತ ಸಹಾಯಕ ವಿ. ಎಮ್. ಪತ್ತಾರ ಇವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.