ಲೋಕದರ್ಶನ ವರದಿ
ಬೆಳಗಾವಿ 17: ದಿ. 16.ರಂದು ಶಾಸಕ ಅನಿಲ ಬೆನಕೆರವರು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಬೇಟಿ ನೀಡಿದ ಅವರು ಹೆರಿಗೆ ವಿಭಾಗದ ಸ್ವಚ್ಚೆತೆಯ ಪರಿಶೀಲನೆ ಮಾಡಿದರು. ಕೆಲ ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿನ ನರಕಸದೃಷ್ಯ ವ್ಯವಸ್ಥೆಯನ್ನು ಸರಿಪಡಿಸುವಂತೆ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದರು ಅದರ ಪ್ರಯುಕ್ತ ಇಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು, ಸಮಾಜ ಸೇವಕರು, ಎನ್.ಜಿ.ಓ. ಹಾಗೂ ಅಸೋಸಿಯೇಷನ್ಗಳ ಜೊತೆ ಸಭೆ ನಡೆಸಿ ಆಸ್ಪತ್ರೆಯ ಅಭಿವೃದ್ದಿಯ ಕುರಿತು ಚಚರ್ಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು 15 ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಇಲ್ಲಿನ ಸಮಸ್ಯೆಗಳಾದ ಹೆರಿಗೆ ವಾರ್ಡನಲ್ಲಿನ ಸ್ವಚ್ಚತೆ, ಕುಡಿಯುವ ನೀರು, ಗಭರ್ಿಣಿಯರಿಗೆ ಸ್ನಾನದ ನೀರು, ಅನಾಗರಿಕ ಶೌಚಾಲಯಗಳು, ಹೆರಿಗೆಯಾದ ಮಹಿಳೆಯರಿಗೆ ಬಿಸಿನೀರಿನ ತೊಂದರೆ, ವಾರ್ಡಗಳಲ್ಲಿನ ಅಸ್ವಚ್ಚತೆ, ಔಷಧಿಗಳ ಅಲಭ್ಯತೆ, ರೋಗಿಗಳಿಗೆ ಕೂಡ್ರಲು ಆಸನದ ವ್ಯವಸ್ಥೆ, ದಾದಿಗಳ ವರ್ತನೆ, ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯನಿರ್ವಹಣೆಗಳು ಮತ್ತು ರೋಗಿಗಳ ಜೊತೆಗೆ ಇರುವ ಅವರ ನಡವಳಿಕೆಗಳು, ಸರಿಯಾದ ಸಮಯಕ್ಕೆ ವೈದ್ಯರು ಇಲ್ಲದಿರುವುದು, ಹೀಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಭೀಮ್ಸನ ಆಡಳಿತ ವ್ಯವಸ್ಥೆಗೆ ಸೂಚಿಸಲಾಗಿತ್ತು. ಅದರ ಪ್ರಕಾರ ಈಗ ಸದ್ಯ ಶೇ.60 ರಷ್ಟು ಸಮಸ್ಯೆಗಳ ಬಗೆ ಹರಿದಿವೆ ಎಂದು ತಿಳಿಸಿದರು.
ಅದರಂತೆಯೇ ಜಿಲ್ಲಾಸ್ಪತ್ರೆಯ ಸುಧಾರಣೆಗೆ ಹಾಗೂ ಅಭಿವೃದ್ದಿಯ ಹಿತದೃಷ್ಠಿಯಿಂದ ಸಮಾಜ ಸೇವಕರು, ಜವಾಬ್ದಾರಯುತ ಎನ್.ಜಿ.ಓ. ಹಾಗೂ ಅಸೋಸಿಯೇಷನ್ಗಳಾದ ರವಿವಾರ ಪೇಟ ವ್ಯಾಪಾರಿ ಅಸೋಸಿಯೇಷನ್, ಕಲರ್ಸ ಆಂಡ ಪೇಂಟ್ಸ್ ಅಸೋಸಿಯೇಷನ್, ಜೀತೋ ಎನ್.ಜಿ.ಓ., ಕ್ರೇಡಾಯ್, ಜೈನ ಪೆಡರೇಷನ್, ಬಿಲ್ಡರ್ ಅಸೋಸಿಯೇಷನ್, ಚಾಂಬರ್ಸ ಆಪ್ ಕಾಮರ್ಸ ಇಂಡಸ್ಟ್ರೀಜ್, ಸ್ಮಾಲ ಸ್ಕೇಲ್ ಇಂಡಸ್ಟ್ರೀಜ್, ಬೆಳಗಾವಿ ವ್ಯಾಪಾರಿ ಬಂಧು, ಕಾಂಟ್ರಾಕ್ಟರ್ ಅಸೋಸಿಯೇಷನ್, ಮಾರವಾಡಿ ಯುವಾ ಮಂಚ್ ಹಾಗೂ ಅನೇಕ ಕಾರ್ಯಕರ್ತರ ಜೊತಗೆ ಸಭೆ ನಡೆಸಲಾಗಿದ್ದು, ಜಿಲ್ಲಾಸ್ಪತ್ರೆಯ ಅಭಿವೃದ್ದಿಗೆ ಸಹಕರಿಸಲು ಸಮ್ಮತಿಸಿದ್ದಾರೆ ಎಂದ ಅವರು ಜಿಲ್ಲಾಸ್ಪತ್ರೆ ಹಾಗೂ ಬೆಳಗಾವಿಯನ್ನು ಸುಂದರ ಹಾಗೂ ಸ್ವಚ್ಚವಾಗಿಡಲು ಪ್ರಯತ್ನಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಮಾದ್ಯಮಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಭೀಮ್ಸ ನಿದರ್ೇಶಕರಾದ ವಿನಯ ದಾಸ್ತಿಕೊಪ್ಪ, ವೈಧ್ಯರು, ಎನ್.ಜಿ.ಓ ಹಾಗೂ ಅಸೋಸಿಯೇಷನ್ಗಳ ಅಧ್ಯಕ್ಷರುಗಳು ಹಾಗೂ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.