ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅತ್ಯವಶ್ಯಕ: ಮಹೇಶ್ ಸಂಖ
ಇಂಡಿ 19: ನಗರದ ಸಿ ವಿ ರಾಮನ್ ಪಿಯು ಕಾಲೇಜು ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯ ನಗರ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಶ ಸಂಖ ಅವರು ಕಾನೂನು ಪಾಲನೆ ಮತ್ತು ಮಾದಕ ದ್ರವ್ಯಗಳ ವ್ಯಸನಗಳ ಕುರಿತು ವಿದ್ಯಾರ್ಥಿಗಳಲ್ಲಿ ತಿಳಿಹೇಳಿದರು. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದ ಮುಖಾಂತರ ಆಗುತ್ತಿರುವ ಸಮಸ್ಯೆಗಳನ್ನು ಹೇಗೆ ದೂರ ಇಡಬೇಕೆಂಬುದು ಸವಿಸ್ತರವಾಗಿ ಹೇಳಿದರು. ಮೊಬೈಲ್ ಬಳಸುವಾಗ ತುಂಬಾ ಜಾಗೃತವಾಗಿ ಬಳಸಿ ಸಮಾಜದಲ್ಲಿ ಎಲ್ಲರಿಗೂ ತಿಳಿ ಹೇಳಬೇಕು ಸಮಾಜವನ್ನು ಪರಿವರ್ತನೆ ಮಾಡಲು ಯುವ ಜನತೆ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಜೀವನದ ಮಹತ್ತರ ಘಟ್ಟವನ್ನು ತಲುಪಲು ಮೊದಲು ನಕಾರಾತ್ಮಕ ಭಾವನೆಯನ್ನು ತೊಲಗಿಸಬೇಕು ಎಂದು ಹೇಳಿದರು.ಸಂಸ್ಥೆ ಸಂಸ್ಥಾಪಕರು ಮಾತನಾಡಿ ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನು ಪಡೆದ ನಾವುಗಳು ತುಂಬಾ ಧನ್ಯರಾಗಿದ್ದೇವೆ. ಜೀವನವನ್ನು ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿರುವ ಎಲ್ಲ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ತುಂಬಾ ಧನ್ಯವಾದಗಳು ಹೇಳಿದರು. ಪೋಲಿಸ್ ಇಲಾಖೆಯ ಮಹೇಶ್ ಕೋಳಿ ಅವರು ಉಪಸ್ಥಿತರಿದ್ದರು.ಕಾಲೇಜಿನ ಆಡಳಿತ ಮಂಡಳಿ ವರ್ಧಮನ್ ಮಹಾವೀರ್, ಶೈಲೇಶ್ ಬೀಳಗಿ, ಪ್ರಸನ್ನ ಕುಮಾರ್ ನಾಡಗೌಡ, ಸನ್ಮತಿ ಹಳ್ಳಿ, ಶೋಭಾ ನಾರಾಯಣಕರ್, ಡಾಕ್ಟರ್ ಸೋಮಶೇಖರ್ ಹುದ್ದಾರ್, ಶೈಲಜಾ ಜಹಾಗಿರ್ದರ್, ಪ್ರಥಮ ಮತ್ತು ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.