ನಾಯಕತ್ವ, ಯಾರೊಬ್ಬರು ಪರಿಪೂರ್ಣರಲ್ಲ: ಸಚಿವ ನಿತಿನ್ ಗಡ್ಕರಿ

ನಾಯಕತ್ವ, ಯಾರೊಬ್ಬರು ಪರಿಪೂರ್ಣರಲ್ಲ: ಸಚಿವ ನಿತಿನ್ ಗಡ್ಕರಿ 

ನವದೆಹಲಿ 5: ಯಾರೂ ಪರಿಪೂರ್ಣರಲ್ಲ ಮತ್ತು ನಾಯಕತ್ವವು ಸದ್ಗುಣಗಳನ್ನು ರೂಪಿಸಿ ಮತ್ತು ನ್ಯೂನತೆ ಸರಿಪಡಿಸಿ ವ್ಯಕ್ತಿತ್ವ ರೂಪಿಸಲು ನೆರವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಶುಕ್ರವಾರ

17 ನೇ ಲೋಕಸಭೆಯಲ್ಲಿ ಹೊಸದಾಗಿ ಚುನಾಯಿತರಾದ ಸಂಸತ್ ಸದಸ್ಯರ ದೃಷ್ಟಿಕೋನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇದು ಸಾರ್ವತ್ರಿಕ ಸತ್ಯ, ಯಾರೂ ಪರಿಪೂರ್ಣರಲ್ಲ ಮತ್ತು ಪರಿಪೂರ್ಣರೆಂದು ಯಾರೂ ತಾವಾಗಿಯೇ ಎಂದೂ ಹೇಳಿಕೊಳ್ಳುವುದೂ ಇಲ್ಲ  ಎಂದರು.   ನಾನು ಯಾವ ಸಮಸ್ಯೆ,  ಪ್ರಶ್ನೆಗಳನ್ನು ಕೇಳುತ್ತೇನೆ ಎಂದು ನಿರ್ಧರಿಸುವ  ಹೊಣೆಗಾರಿಕೆ    (ವೈಯಕ್ತಿಕ ಸಂಸದರು) ನಿಮ್ಮ ಮೇಲಿದೆ  ಇದೆ. 

  ವಿದೇಶಾಂಗ ನೀತಿ ಅಥವಾ ಬುಡಕಟ್ಟು ಜೀವನಕ್ಕೆ ಸಂಬಂಧಿಸಿದ ವಿಷಯಗಳು, ಹಾಗೂ  ವಿಷಯಗಳ ಪ್ರತಿಯೊಂದು ವಿವರವನ್ನು ಪ್ರತಿಯೊಬ್ಬರೂ ತಿಳಿಯಲು ಸಾಧ್ಯವಿಲ್ಲ  ಎಂದು ಅವರು ಹೇಳಿದರು.  ನೀವು ವಿವರಗಳನ್ನು ನೋಡಿದರೆ, 150 ಕ್ಕೂ ಹೆಚ್ಚು ವಿಷಯಗಳು ಇರುತ್ತವೆ, ಆದ್ದರಿಂದ, ನೀವು ಕೆಲವು ವಿಷಯಗಳ ಬಗ್ಗೆ ಗಮನಹರಿಸಿ ನಿರ್ಧರಿಸಿದರೆ ಒಳ್ಳೆಯದು. ಪ್ರತಿಯೊಬ್ಬರೂ ಎಲ್ಲಾ ವಿಷಯಗಳನ್ನೂ ಮಾತನಾಡಲು ಸಾಧ್ಯವಾಗದು  ಎಂದು ಗಡ್ಕರಿ ಹೇಳಿದರು.  ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿಲರ್ಾ, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಮತ್ತು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಹನ್ಸ್ ರಾಜ್ ಹನ್ಸ್ ಮತ್ತು ರವಿ ಕಿಶನ್ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು.