ಧಾರವಾಡ 04: ವಕೀಲರು ನೈತಿಕ ಮೌಲ್ಯಗಳ ರಕ್ಷಕರು ಆಗುವ ಮೂಲಕ ಇಂಥ ಗುಣಗಳ ಪ್ರಾತಿನಿಧ್ಯವನ್ನು ಸಮಾಜದಲ್ಲಿ ಹೆಚ್ಚಿಸಬೇಕೆಂದು ಹೈಕೋಟರ್್ ನ್ಯಾಯಮೂತರ್ಿ ಬಿ.ಎ. ಪಾಟೀಲ ಇಂದಿಲ್ಲಿ ಹೇಳಿದರು.
ಕನರ್ಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಹಿರಿಯ ನ್ಯಾಯವಾದಿ ಎಂ.ಜಿ. ಅಗಡಿ ಸಂಸ್ಮರಣೆ ದತ್ತಿ ನಿಮಿತ್ತ ವಕೀಲರ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ 'ತೀವ್ರ ಬದಲಾಗುತ್ತಿರುವ ದಿನಮಾನಗಳಲ್ಲಿ ವಕೀಲಿ ವೃತ್ತಿ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದರು.
ಸುಳ್ಳು ಕೇಸುಗಳನ್ನು ಹಿಡಿದು ಅದನ್ನು ಗೆಲ್ಲುವಲ್ಲಿಯೇ ತಮ್ಮ ಪ್ರಾವಿಣ್ಯತೆಯನ್ನು ಹೆಚ್ಚಿಸಿಕೊಳ್ಳುವುದರ ಬದಲು ಸಂಬಂಧಿಸಿದ ಪ್ರಕರಣಗಳನ್ನು ಪ್ರಾಮಾಣಿಕತೆಯಿಂದ ನೋಡಬೇಕಲ್ಲದೆ ಅದರಲ್ಲಿ ಸತ್ಯದ ಸ್ಥಿರೀಕರಣ ಇದ್ದರೆ ಮಾತ್ರ ವಕಾಲತ್ತು ವಹಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ವಕೀಲರಿಗೆ ಸತತ ಅಧ್ಯಯನ ಅಗತ್ಯ. ವಾದಗಳಲ್ಲಿ ಭಾವನೆಗಳನ್ನು ಜಾಣ್ಮೆಯಿಂದ ಬಳಸುವುದು, ವಾಕ್ ಸಾಮಥ್ರ್ಯ, ರಚನಾತ್ಮಕತೆ ಇದರ ಜೊತೆಗೆ ತಮ್ಮ ಮಾತಗಳಿಂದ ಎದುರು ಪಕ್ಷದ ವಕೀಲರನ್ನು ಸಹ ಪ್ರಭಾವಗೊಳಿಸುವ ಚಾಕಚಕ್ಯತೆ ಬೇಕೆಂದು ಅವರು ಹೇಳಿದರು. ಮಾನವೀಯತೆ ಬೆಳೆಸಿಕೊಳ್ಳುವುದು ಅತ್ಯುತ್ತಮ ವಕೀಲರ ಲಕ್ಷಣ ಎಂದು ಹೇಳಿದ ನ್ಯಾಯಮೂತರ್ಿ ಬಿ.ಎ. ಪಾಟೀಲರು ಹಿರಿಯ ನ್ಯಾಯವಾದಿ ಎಂ.ಜಿ ಅಗಡಿಯವರು ಎಲ್ಲ ಕಾಲಕ್ಕೂ ಸಲ್ಲುವ ಆದರ್ಶ ವಕೀಲರು ಎಂದರು.
ಗೌರವ ಅತಿಥಿಗಳಾಗಿದ್ದ ಹೈಕೋಟರ್ಿನ ನ್ಯಾಯಮೂತರ್ಿ ಎ.ಎಸ್. ಬೆಳ್ಳುಂಕೆ ಮಾತನಾಡಿ, ವಕೀಲಿ ವೃತ್ತಿಯ ಗಾಂಭೀರ್ಯವನ್ನು ಮೊದಲು ಅಥರ್ೈಸಿಕೊಳ್ಳಬೇಕು. ಇದೊಂದು ಉದಾತ್ತ ವೃತ್ತಿಯಾಗಿದ್ದು, ವಕಾಲತ್ತು ವಹಿಸಿಕೊಳ್ಳುವ ಮೊದಲು ಮನವರಿಕೆ ಮಾಡಿಕೊಂಡು ನ್ಯಾಯಾಲಯಕ್ಕೆ ಮನಗಾಣಿಸಬೇಕೆಂದು ಹೇಳಿದರು. ಇಂದಿನ ತಂತ್ರಜ್ಞಾನ ಹಾಗೂ ಸ್ಪಧರ್ಾತ್ಮಕ ದಿನಗಳಲ್ಲಿ ಒಳ್ಳೆಯ ವಕೀಲರು ಆಗುವುದು ಶ್ರಮದಾಯಕವಾಗಿದೆ. ಆದರೆ, ಮೌಲ್ಯಗಳನ್ನು ಎತ್ತಿ ಹಿಡಿಯುವ ವಕೀಲರು ಶಾಶ್ವತವಾಗಿ ತಮ್ಮ ಕಾರ್ಯ ಸಾಧನೆ ಮಾಡಬಲ್ಲರೆಂದು ಅವರು ಹೇಳಿದರು. ಹಿಂದಿನ ಕಾಲದಲ್ಲಿ ಕಕ್ಷಿದಾರರಿಂದ ಶುಲ್ಕವನ್ನು ಮೊದಲು ವಕೀಲರು ಕೇಳುತ್ತಿರಲಿಲ್ಲ. ಈಗ ಅದು ಪ್ರಾರಂಭಕ್ಕೇ ಪ್ರಾರಂಭಗೊಂಡಿದೆ ಎಂದು ನ್ಯಾಯಮೂತರ್ಿಗಳು ಹೇಳಿ ವಿಷಾದ ವ್ಯಕ್ತಪಡಿಸಿದರು.
ಕೋಟರ್್ ಬಹಿಷ್ಕಾರ ಸರಿಯಲ್ಲ: ಸಣ್ಣ ಪುಟ್ಟ ಕಾರಣಗಳಿಗೆ ಎಲ್ಲ ನ್ಯಾಯಾಲಯಗಳ ಬಹಿಷ್ಕಾರ ಸರಿಯಾದ ಕ್ರಮ ಅಲ್ಲ ಎಂದು ನ್ಯಾಯಮೂತರ್ಿ ಬೆಳ್ಳುಂಕೆ ಅವರು ಅಭಿಪ್ರಾಯಪಟ್ಟರು. ಸಂಬಂಧಿಸಿದ ನ್ಯಾಯಾಲಯಗಳಿಗೆ ಮಾತ್ರ ಅದು ಅವಶ್ಯವೆನಿಸಿದರೆ ಬಹಿಷ್ಕಾರ ಹಾಕಬಹುದೇನೋ? ಆದರೆ ಎಲ್ಲ ನ್ಯಾಯಾಲಗಳ ಬಹಿಷ್ಕಾರದಿಂದ ಕಕ್ಷಿದಾರರು ಹಾಗೂ ಅಪ್ರತ್ಯಕ್ಷವಾಗಿ ಸರಕಾರವೂ ನಷ್ಟಕ್ಕೆ ಗುರಿಯಾಗುತ್ತಿದೆ ಎಂದು ಅವರು ಹೇಳಿದರು.
ದಂತಕಥೆಗಳು: ಹಿರಿಯ ನ್ಯಾಯವಾದಿ ಮತ್ತು ಧಾರವಾಡ ಲಾ ಅಕಾಡೆಮಿ ಅಧ್ಯಕ್ಷ ಕೆ.ಬಿ. ನಾವಲಗಿಮಠ ಅವರು ಅಧ್ಯಕ್ಷತೆ ವಹಿಸಿದ್ದರು. ತಮಗೆ ಹಿರಿಯ ನ್ಯಾಯವಾದಿಗಳಾಗಿದ್ದ ದಿ. ಸಿ.ಬಿ. ಪಾಟೀಲ, ದಿ. ಜಿ.ಎಂ. ಪಾಟೀಲ, ದಿ. ಎಂ.ಜಿ. ಅಗಡಿ, ದಿ. ಐ.ಜಿ ಹಿರೇಗೌಡರ ಅವರನ್ನು ಹಾಗೂ ಅವರ ನ್ಯಾಯಪರಂಪರೆಯ ಪ್ರಭುದ್ಧತೆಯನ್ನು ಹೃದಯಸ್ಪಶರ್ಿಯಾಗಿ ನಾವಲಗಿಮಠ ಸ್ಮರಿಸಿಕೊಂಡು ಧಾರವಾಡ ವಕೀಲರ ಇತಿಹಾಸದಲ್ಲಿ ಇವರು ದಂತಕಥೆಗಳಾಗಿದ್ದಾರೆ ಎಂದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಥಾನ ಎಂದರೆ ಬರೀ ಆರೋಪಿಗಳಿಗೆ ಶಿಕ್ಷೆ ನೀಡುವುದಲ್ಲ. ಸಂಬಂಧ ಇರದೇ ಇರುವ ಸಾಕ್ಷಿಗಳನ್ನು ಸಂಖ್ಯಾ ಬಲವನ್ನಾಗಿ ಬಳಸಿಕೊಳ್ಳುವುದೂ ಸರಿಯಲ್ಲ. ಒಂದು ವೇಳೆ ಆರೋಪಿಯಲ್ಲಿ ಅಪರಾಧದ ಬದಲು ಅವನ ಆರೋಪಿತ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿಲ್ಲವಾದರೆ ಅಥವಾ ಸತ್ಯ ಆ ಪ್ರಕರಣದಲ್ಲಿದ್ದರೆ ಅದನ್ನು ಎತ್ತಿ ತೋರಿಸುವ ಮೂಲಕ ಆರೋಪಿಯನ್ನು ರಕ್ಷಿಸುವ ಕೆಲಸವೂ ಸಹ ಪಬ್ಲಿಕ್ ಪ್ರಾಸಿಕ್ಯೂಟರ್ದ್ದೇ ಆಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕ.ವಿ.ವ. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಅವರು ಸ್ವಾಗತಿಸಿದರು. ಪ್ರಶಾಂತ ಕುಲಕಣರ್ಿ ವಕೀಲರು ಪ್ರಾರ್ಥನೆ ಗೀತೆ ಹಾಡಿದರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಇತರರು ಮಾಲಾರ್ಪಣೆ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಮನೋಜ ಪಾಟೀಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸಂಘದ ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಹಾಗೂ ಧಾರವಾಡ ಜಿಲ್ಲೆಯ ಸೆಷನ್ಸ್ ನ್ಯಾಯಾಧೀಶರು ಸೇರಿದಂತೆ ಹಲವಾರು ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.